ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರೀಯ ಅಥ್ಲೆಟಿಕ್ಸ್‌ : ಕರ್ನಾಟಕಕ್ಕೆ ಮೊದಲ ಚಿನ್ನ ತಂದ ಜೊಸುವಾ

By Staff
|
Google Oneindia Kannada News

ಕಲ್ಕತ್ತ : ಮಂಗಳೂರಿನ ಕ್ಲಿಫರ್ಡ್‌ ಜೋಸೆಫ್‌ ಜೊಸುವಾ ನಗರದಲ್ಲಿ ನಡೆಯುತ್ತಿರುವ 40ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್ಸ್‌ ಟೂರ್ನಿಯಲ್ಲಿ ಕರ್ನಾಟಕಕ್ಕೆ ಮಂಗಳವಾರ ಮೊದಲ ಚಿನ್ನ ಗಳಿಸಿಕೊಟ್ಟಿದ್ದಾರೆ.

ಕಾರ್ಪೊರೇಷನ್‌ ಬ್ಯಾಂಕ್‌ ಉದ್ಯೋಗಿಯಾಗಿರುವ 25 ವರ್ಷದ ಜೊಸುವಾ ಬೆಂಗಳೂರಿನಲ್ಲಿ ನಡೆದ ಸರ್ಕಿಟ್‌ ಅಥ್ಲೆಟಿಕ್ಸ್‌ನಲ್ಲಿ ಗಮನ ಸೆಳೆದಿದ್ದರು. ಪುರುಷರ 200ಮೀ. ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಇವರು ಚಾಂಪಿಯನ್‌ಷಿಪ್‌ನಲ್ಲಿ 21.55 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ರೈಲ್ವೆ ತಂಡದಲ್ಲಿರುವ ಕರ್ನಾಟಕದ ಜಿ.ಜಿ. ಪ್ರಮೀಳಾ 100 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಗೆದ್ದರೆ, ಪೂನಂ ಬೆಳ್ಳಿಯಪ್ಪ ಕಂಚು ಸಂಪಾದಿಸಿದರು. ಟ್ರಿಪಲ್‌ ಜಂಪ್‌ನಲ್ಲಿ ಶಿಲ್ಪಾ ಸೆಕ್ವೆರಾ ಬೆಳ್ಳಿ ಪದಕ ಗಳಿಸಿದರೆ, ಪುರುಷರ 3 ಸಾವಿರ ಮೀ. ಸ್ಟೀಪಲ್‌ ಚೇಸ್‌ ಸ್ಪರ್ಧೆಯಲ್ಲಿ ರೈಲ್ವೇಸ್‌ ತಂಡದಲ್ಲಿರುವ ಕರ್ನಾಟಕದ ಅರುಣ್‌ ಡಿಸೋಜ ಚಿನ್ನ ಗೆದ್ದರು. ಪುರುಷರ ವಿಭಾಗದಲ್ಲಿ 3 ಹಾಗೂ ಮಹಿಳೆಯರ ವಿಭಾಗದಲ್ಲಿ 6 ಚಿನ್ನ ಗ್ದೆದಿರುವ ರೇಲ್ವೇಸ್‌ ತಂಡ ಸಮಗ್ರ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಪ್ರದರ್ಶನವನ್ನು ನೀಡುತ್ತಿದೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X