Get Updates
Get notified of breaking news, exclusive insights, and must-see stories!

ಸರಕಾರದ ಮೇಲೆ ಪ್ರಭಾವ : ಎನ್‌ ಆರ್‌ ಐ ಸಂಹಿತೆ!

ವಾಷಿಂಗ್ಟನ್‌: ಅಮೆರಿಕದಲ್ಲೀಗ ಅಲ್ಲಿರುವ ಭಾರತೀಯರ ಹಿತಾಸಕ್ತಿ ಕುರಿತ ವಿಷಯಗಳ ಮೇಲಿನ ಸಮೀಕ್ಷೆಗಳು, ಸರಣಿ ಲೇಖನಗಳು ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.

ಸಾಫ್ಟವೇರ್‌ನಂತ ಪ್ರತಿಷ್ಟಿತ ಹುದ್ದೆಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿರುವ ಭಾರತೀಯರು ಅಮೆರಿಕ ಸೆನೆಟ್‌ನ ಸದಸ್ಯರನ್ನು ಆರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲಷ್ಟು ಪ್ರಭಾವಶಾಲಿಗಳಾಗಿ ವಿವಿಧ ರಂಗಗಳಲ್ಲಿ ಬೆಳೆದಿದ್ದಾರೆ. ಅಮೆರಿಕದಲ್ಲಿನ ಭಾರತೀಯರು ಈಗ ಸರಕಾರದ ಮೇಲೆ ತಮ್ಮ ಹಾಗೂ ತಮ್ಮ ದೇಶದ ಹಿತಾಸಕ್ತಿ ಕುರಿತು ಹೇಗೆ ಪ್ರಭಾವ ಬೀರಬೇಕೆಂಬ ಬಗ್ಗೆ ಅಮೆರಿಕದ ಪ್ರತಿಷ್ಟಿತ ಪತ್ರಿಕೆಗಳಲ್ಲೊಂದಾದ ವಾಷಿಂಗ್ಟ್‌ನ್‌ ಡಿಸಿ ಪತ್ರಿಕೆ, ಸರಣಿ ಲೇಖನಗಳನ್ನು ಇತ್ತೀಚೆಗೆ ಪ್ರಕಟಿಸಿದೆ.

‘ಇಂಡಿಯಾ ಅಬ್ರಾಡ್‌ ಸೆಂಟರ್‌ ಫಾರ್‌ ಪೊಲಿಟಿಕಲ್‌ ಅವೇರ್‌ನೆಸ್‌’(ಐಎಸಿಪಿಎ) ಸಂಘಟನೆಯನ್ನು ಆಧರಿಸಿ ಈ ಲೇಖನ ಪ್ರಕಟಿಸಲಾಗಿದೆ. ಈ ಸಂಬಂಧ ಅಧ್ಯಯನ ಹಾಗೂ ಸಮೀಕ್ಷಾ ಲೇಖನಗಳು ‘ಇಂಡಿಯಾ ಅಬ್ರಾಡ್‌ ಕೇಂದ್ರದ ವತಿಯಿಂದ ಈ ಹಿಂದೆ ಪ್ರಕಟವಾಗಿವೆ.

ಭಾರತೀಯರ ಪಾತ್ರ: ಐಎಸಿಪಿಎಯ ಅಧ್ಯಕ್ಷರೂ ಇಂಡಿಯಾ ಅಬ್ರಾಡ್‌ ಪತ್ರಿಕೆಯ ಸಂಪಾದಕರು ಮತ್ತು ಪ್ರಕಾಶಕರೂ ಆಗಿರುವ ಗೋಪಾಲರಾಜು ಅವರು ಹೇಳುವಂತೆ, ಪ್ರೊ. ರ್ಯಾಲ್ಫಾ ನ್ಯೂರೆನ್‌ಬರ್ಗ್‌ ಅವರು ‘ಲಾಬ್ಬಿಯಿಂಗ್‌ ಇನ್‌ ಅಮೆರಿಕ: ಎ ಪ್ರಿಮರ್‌ ಫಾರ್‌ ಸಿಟಿಜನ್‌ ಪಾರ್ಟಿಸಿಪೇಶನ್‌’ ಸರಣಿಯನ್ನು ಬರೆದಿದ್ದಾರೆ. ಅಮೆರಿಕದಲ್ಲಿರುವ ಪ್ರತಿ ಭಾರತೀಯನೂ ಅಮೆರಿಕ ರಾಜಕೀಯ ಸಂದರ್ಭದಲ್ಲಿ ತನ್ನನ್ನೂ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಈ ಸರಣಿ ಲೇಖನಗಳ ಪ್ರಕಟಣೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಪ್ರತಿಯಾಬ್ಬ ಭಾರತೀಯನೂ ಅಮೆರಿಕದ ರಾಜಕೀಯ ಸಂದರ್ಭದಲ್ಲಿ ಅಧಿಕೃತವಾಗಿ ಮಾತನಾಡಲು ಸಾಧ್ಯವಾಗುವಂತೆ ಪ್ರಸ್ತುತ ಎಲ್ಲ ವಿಷಯಗಳ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಲಾಗಿದ್ದು, ಪ್ರತಿ ಲೇಖನದಲ್ಲಿ ಪ್ರಮುಖ ವಿಷಯಗಳ ಬಗ್ಗೆ ಬೆಳಕು ಚಲ್ಲಲಾಗಿದೆ. ಭಾರತದ ಪರವಾದ ನಿಲುವನ್ನು ತೀರ್ವಗೊಳಿಸಲು ಅನುಕೂಲವಾಗುವಂತೆ ಕಾಶ್ಮೀರ, ದಕ್ಷಿಣ ಏಷ್ಯಾದಲ್ಲಿ ಪರಮಾಣು ಅಸ್ತ್ರಗಳು, ಕಳೆದ 50 ವರ್ಷಗಳಲ್ಲಿ ಅಮೆರಿಕ- ಭಾರತ ಸಂಬಂಧ ಕುರಿತು ವ್ಯಾಪಕ ವಿಷಯಗಳನ್ನೊಳಗೊಂಡ ಲೇಖನಗಳನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಕಾಂಗ್ರೆಸ್‌ ಸದಸ್ಯರು, ಸಾರ್ವಜನಿಕ ಅಧಿಕಾರಿಗಳು ಹಾಗೂ ತಜ್ಞರಿಗೆ ಮತ್ತು ವಿಶ್ವವಿದ್ಯಾಲಯ ಸೇರಿದಂತೆ ಐಎಸಿಪಿಎ ಬೆಂಬಲಿಗರಿಗೂ ಹಂಚಲಾಗಿದೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+