ವೀರಪ್ಪನ್ ಅಣ್ಣನ ಮಗನನ್ನು ಸಂಧಾನಕ್ಕೆ ಕಳುಹಿಸಲು ಸಲಹೆ
ಚೆನ್ನೈ : ತಮ್ಮ ಬಳಿ ವಕೀಲಿ ಅಭ್ಯಾಸ ಮಾಡುತ್ತಿರುವ ವೀರಪ್ಪನ್ ಅಣ್ಣ ಮಡಯಾನ್ ಪುತ್ರ ಎಂ.ಮಣಿ ಎಂಬುವರನ್ನು ಉಭ-ಯ ಸರ್ಕಾರಗಳ ಸಂಧಾನಕಾರನಾಗಿ ಕಳುಹಿಸಿಕೊಡುವಂತೆ ಚೆನ್ನೈನ ವಕೀಲರೊಬ್ಬರು ಸೋಮವಾರ ಸಲಹೆ ಕೊಟ್ಟಿದ್ದಾರೆ.
ಎರಡು ವರ್ಷಗಳ ಹಿಂದೆ ವೀರಪ್ಪನ್ ಅಪಹರಣಕ್ಕೆ ಈಡಾಗಿದ್ದ ವಕೀಲ ಎಸ್.ಕೃಷ್ಣಸ್ವಾಮಿ, ಕರ್ನಾಟಕದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಪತ್ರವೊಂದನ್ನು ಕಳುಹಿಸಿದ್ದು, ಮಣಿ ಮತ್ತಿತರರನ್ನು ಸಂಧಾನಕ್ಕೆ ಕಳುಹಿಸಿಕೊಡುವಂತೆ ಸಲಹೆ ಸೂಚಿಸಿದ್ದಾರೆ. ವೀರಪ್ಪನ್ ಜೊತೆ ಸಂಧಾನ ನಡೆಸಲು ಮಣಿ ಸಿದ್ಧವಿರುವುದಾಗಿಯೂ ಅವರು ಹೇಳಿದ್ದಾರೆ.
ಕೃಷ್ಣ ಅವರಿಗೆ ಕಳುಹಿಸಿಕೊಟ್ಟಿರುವ ಪತ್ರದ ಪ್ರತಿಯಾಂದನ್ನು ಮಾಧ್ಯಮಗಳಿಗೆ ಕೃಷ್ಣಸ್ವಾಮಿ ಸೋಮವಾರ ಬಿಡುಗಡೆ ಮಾಡಿದರು. 1998 ಮೇ 24ರಂದು ವೀರಪ್ಪನ್ ತಮ್ಮನ್ನು ಅಪಹರಿಸಿದ್ದ. 12 ದಿನಗಳ ಬಳಿಕ ವಿಶೇಷ ಕಾರ್ಯಪಡೆ ಬಿಡಿಸಿತು ಎಂದು ಕೃಷ್ಣಸ್ವಾಮಿ ಪತ್ರದಲ್ಲಿ ತಿಳಿಸಿದ್ದಾರೆ.
ಕ್ಯಾರೆಟ್ ಅಂಡ್ ಸ್ಟಿಕ್ ಪಾಲಿಸಿ : ರಾಜ್ ಅಪಹರಣ ಪ್ರಕರಣದಲ್ಲಿ ಸರ್ಕಾರದ ಕಾರ್ಯತಂತ್ರವನ್ನು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ಮಾಜಿ ರೈಲ್ವೆ ಸಚಿವ ಜಾಫರ್ ಷರೀಫ್ ಟೀಕಿಸಿರುವ ಹಿನ್ನೆಲೆಯಲ್ಲಿ , ಮುಖ್ಯಮಂತ್ರಿ ಕೃಷ್ಣ ತಮ್ಮ ಸರ್ಕಾ-ರ-ದ ನೀತಿ ಸರಿಯಿದೆ ಎಂದು ಮಗದೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ನಾವು ಅಪಹರಣಕಾರನ ಜೊತೆ ಸೌಮ್ಯವಾಗಿ ಮಾತನಾಡುತ್ತಿದ್ದರೂ ಬಗಲಲ್ಲಿ ಕೋಲನ್ನು ಇಟ್ಟುಕೊಂಡಿದ್ದೇವೆ. ಸಂಧಾನದ ಎಲ್ಲಾ ಯತ್ನಗಳೂ ವಿಫಲವಾದಲ್ಲಿ ಮಾತ್ರ ಕೋಲನ್ನು ಉಪಯೋಗಿಸುತ್ತೇವೆ. ಇಂತಹ ಸೂಕ್ಷ್ಮ ವಿಷಯಗಳಲ್ಲಿ ಆತುರದ ನಿರ್ಧಾರ ಒಳಿತಲ್ಲ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ಹೇಳಿದ್ದಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications