Get Updates
Get notified of breaking news, exclusive insights, and must-see stories!

ಆಕಾಶವಾಣಿ: ರಾಜ್‌ ಕುಟುಂ-ಬ-ದ ಸಂದೇಶದಲ್ಲಿನಾಗಪ್ಪನ ಪ್ರಸ್ತಾಪವಿಲ್ಲ

ಬೆಂಗಳೂರು : ತನ್ನ ಪತಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಪಾರ್ವತಮ್ಮ ರಾಜ್‌ಕುಮಾರ್‌ ಆಕಾಶವಾಣಿ ಮೂಲಕ ಈ ಬಾರಿ (ನಾಗ-ಪ್ಪ-ನ ಪರಾ-ರಿ-ಯ ನಂತ-ರ) ಮಾಡಿಕೊಂಡಿರುವ ಮನವಿಯಲ್ಲಿ ಓಡಿ ಬಂದಿರುವ ನಾಗಪ್ಪನ ಪ್ರಸ್ತಾಪವೇ ಇಲ್ಲ.

ಆಸ್ಪತ್ರೆಯಿಂದ ಮನೆಗೆ ಮರಳಿರುವ ಪಾರ್ವತಮ್ಮ , ನಕ್ಕೀರನ್‌ ಗೋಪಾಲ್‌ ಅವರಿಗೆ ಸಂಧಾನಕಾರನಾಗಿ ಬರಲು ಮತ್ತೊಮ್ಮೆ ಅವಕಾಶ ಕೊ-ಡುವಂತೆ ಮತ್ತು ತನ್ನ ಪತಿಯನ್ನು ಗೋಪಾಲ್‌ ಜೊತೆ ಕಳಿಸಿಕೊಡುವಂತೆ ವೀರಪ್ಪನ್‌ನನ್ನು ಕೇಳಿಕೊಂಡಿದ್ದಾರೆ. ಈ ಬಾರಿ ಗೋಪಾಲ್‌ ಕಾಡಿಗೆ ಹೋದಲ್ಲಿ, ಅವರು ಮರಳುವಾಗ ಜೊತೆಯಲ್ಲಿ ತಮ್ಮ ಪತಿಯೂ ಬರುವುದನ್ನು ತಾವು ಎದುರು ನೋಡುತ್ತಿರುವುದಾಗಿ ಪಾರ್ವತಮ್ಮ ಹೇಳಿದರು.

ನಾಲ್ಕು ಬಾರಿ ಕಾಡು ಯಾತ್ರೆ ಮಾಡಿರುವ ಗೋಪಾಲ್‌ ಪ್ರತಿ ಸಾರಿಯೂ ಬರಿಗೈ-ನಲ್ಲಿ ಬರುತ್ತಿರುವುದನ್ನು ನೋಡಿ ತಮಗಾಗಿರುವ ನೋವು ಎಷ್ಟು ಎಂಬುದನ್ನು ನೀನೇ ಊಹಿಸು ಎಂದು ಅವರು ವೀರಪ್ಪನ್‌ಗೆ ತಮಿಳಿನಲ್ಲಿ ಹೇಳಿದ್ದಾರೆ. ನಂತರ ಕನ್ನಡದಲ್ಲಿ ಮಾತನಾಡಿದ ಪಾರ್ವತಮ್ಮ ತಮ್ಮ ಪತಿಗೆ, ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ. ಮಕ್ಕಳಿಗೋಸ್ಕರ, ನಮ್ಮನ್ನು ನಂಬಿದವರಿಗೋಸ್ಕರವಾದರೂ ನಾವು ಚೆನ್ನಾಗಿರಬೇಕು ಎಂದು ಹೇಳಿದರು.

ಭಾನುವಾರ ಸಂಜೆ ಪ್ರಸಾರವಾದ ಇನ್ನೊಂದು ಸಂದೇಶದಲ್ಲಿ ಪಾರ್ವತಮ್ಮ ಮತ್ತು ಮೂವರು ಮಕ್ಕ-ಳು, ರಾಜ್‌ ಕುಮಾರ್‌ ಅವರಿಗೆ ಧೈರ್ಯ ತಂದುಕೊಳ್ಳುವಂತೆ ಹೇಳಿ, ರಾಜ್‌ಕುಮಾರ್‌ರ ಶೀಘ್ರ ಬ-ರುವನ್ನು ನಾಡು ಎದುರು ನೋಡುತ್ತಿದೆ. ದೇವರಲ್ಲಿ ನಾವೆಲ್ಲಾ ನಂಬಿಕೆ ಇಟ್ಟಿದ್ದೇವೆ ಎಂದರು. ಯೂವುದೇ ಸಂದರ್ಭದಲ್ಲಿ ನಾಗಪ್ಪ ಓಡಿ ಬಂದಿರುವ ವಿಚಾರವನ್ನು ಪಾರ್ವತಮ್ಮ-ನ-ವ-ರಾಗಲೀ, ರಾಜ್‌ ಪುತ್ರರಾಗಲೀ ಪ್ರಸ್ತಾಪ ಮಾಡಿಲ್ಲ.

(ಯುಎನ್‌ಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+