ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪತ್ರಿಕೆ ಫೋಟೋ ಪ್ರತಿ, ಮರು ಮೌಲ್ಯ-ಮಾ-ಪ-ನ ಪದ್ಧ-ತಿ-ಗೆ ಕೊನೆ ?

By Staff
|
Google Oneindia Kannada News

ಬೆಂಗಳೂರು : ದ್ವಿತೀಯ ಪದವಿ ಪೂರ್ವ ಪರೀಕ್ಷೆಗಳ ಉತ್ತರ ಪತ್ರಿಕೆಯ ಫೋಟೋ ಪ್ರತಿ ನೀಡಿಕೆ ಮತ್ತು ಮರು ಮೌಲ್ಯಮಾಪನ ವ್ಯವಸ್ಥೆಯನ್ನು ಕೈಬಿಡುವ ಇಂಗಿ-ತ-ವ-ನ್ನು ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ವ್ಯಕ್ತ- ಪ-ಡಿ-ಸಿದ್ದಾರೆ.

ಪದವಿ ಪೂರ್ವ ಪರೀಕ್ಷೆಯ ಹತ್ತು ವಿಷಯಗಳ ಉತ್ತರ ಪತ್ರಿಕೆಯ ಪ್ರತಿ ನೀಡಲು ಹಾಗೂ ಮರು ಮೌಲ್ಯಮಾಪನ ಮಾಡಲು ಸರಕಾರ 1997ರಲ್ಲಿ ಆರಂಭಿಸಿತ್ತು . ಮೊದಲು ನಾಲ್ಕು ವಿಷಯಗಳಿಗೆ ಮಾತ್ರ ಈ ನಿಯಮವನ್ನು ಅನುಸರಿಸಲಾಗುತ್ತಿದ್ದು ನಂತರ ಹತ್ತು ವಿಷಯಗಳಿಗೆ ವಿಸ್ತರಿಸಲಾಯಿತು.

ಆದರೆ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ ಈ ವ್ಯವಸ್ಥೆ ಜಾರಿಯಲ್ಲಿದೆ. ಒಟ್ಟು 42 ವಿಷಯಗಳ ಉತ್ತರ ಪತ್ರಿಕೆಗಳ ಫೋಟೋ ಪ್ರತಿ ನೀಡಲು ಮತ್ತು ಮರು ಮೌಲ್ಯಮಾಪನ ನಡೆಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ವ್ಯವಸ್ಥೆಯನ್ನು ಮುಂದುವರೆಸುವ ಬಗ್ಗೆ ಸಾರ್ವಜನಿಕ ಚರ್ಚೆಯಾಗಬೇಕು. ಅಲ್ಲದೆ ಸರಕಾರವು ಈ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ವಿಶೇಷ ಅರ್ಜಿ ಸಲ್ಲಿಸಿದ್ದು , ತೀರ್ಪಿಗಾಗಿ ಕಾಯುತ್ತಿದೆ. ಕೋರ್ಟ್‌ ತೀರ್ಪು ಸರಕಾರದ ಪರವಾಗಿದ್ದರೆ ಹತ್ತು ವಿಷಯಗಳ ಉತ್ತರ ಪತ್ರಿಕೆಯ ಪ್ರತಿಯನ್ನು ಮಾತ್ರ ನೀಡಲಾಗುವುದು ಎಂದು ಸಚಿವರು ಹೇಳಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X