Get Updates
Get notified of breaking news, exclusive insights, and must-see stories!

ಗುರುವಾರದ ಬಂದ್‌ಗೆ ಮಾನಸಿಕವಾಗಿ ಸಜ್ಜಾದ ಕರ್ನಾಟಕ

ಬೆಂಗಳೂರು : 28 ರಂದು 12 ಗಂಟೆಗಳ ಕರ್ನಾಟಕ ಬಂದ್‌ ನಡೆಯುತ್ತದೋ ಇಲ್ಲವೋ? ಇದು ಜನಸಾಮಾನ್ಯರ ಪ್ರಶ್ನೆ. ಒಂದೆಡೆ ರಾಜ್ಯ ಸರಕಾರ ಹಾಗೂ ಕೆಲವು ಬುದ್ಧಿ ಜೀವಿಗಳು ಬಂದ್‌ ಕೈಬಿಡುವಂತೆ ಪದೇ ಪದೇ ಪ್ರಾರ್ಥಿಸುತ್ತಿದ್ದರೂ, ಬಂದ್‌ ನಡೆಸೇ ತೀರುವುದಾಗಿ ಬಂದ್‌ ಕರೆ ನೀಡಿರುವವರು ಪಟ್ಟು ಹಿಡಿದಿದ್ದಾರೆ. ಸ್ವತಃ ರಾಜ್‌ಕುಮಾರ್‌ ಅವರೇ, ಬುಧವಾರದ ಕ್ಯಾಸೆಟ್‌ನಲ್ಲಿ ಶಾಂತಿಯುತ ಬಂದ್‌ಗೆ ಮನವಿ ಮಾಡಿದ್ದಾರೆ.

ಶಾಲೆ ಕಾಲೇಜುಗಳಿಗೆ ಸರಕಾರ ಆಗಲೇ ರಜೆ ಘೋಷಿಸಿದೆ. ರಾಜ್ಯದ ಹಲವು ಖಾಸಗಿ ಕಂಪನಿಗಳು, ಸಂಸ್ಥೆಗಳು ತಮ್ಮ ಕಚೇರಿಗಳಿಗೆ ರಜೆ ನೀಡಿ ಆಗಿದೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಹೊಟೆಲ್‌ ಮಾಲಿಕರು, ಆಟೋ ಚಾಲಕರು, ನಗರ ಸಾರಿಗೆಯ ಕನ್ನಡ ಕ್ರಿಯಾ ಸಮಿತಿ ಸೇರಿದಂತೆ ಹಲವು ಕನ್ನಡ ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ನೀಡಿವೆ. ರಾಜ್ಯ ಸರಕಾರ ಹಾಗೂ ರಾಜ್ಯದ ಜನತೆ ಮಾನಸಿಕವಾಗಿ ಬಂದ್‌ ಎದುರಿಸಲು ಸಜ್ಜಾಗಿದೆ.

ಕಠಿಣ ಕ್ರಮದ ಎಚ್ಚರಿಕೆ : ಅಖಿಲ ಕರ್ನಾಟಕ ಬಂದ್‌ಗೆ ಇನ್ನುಳಿದಿರುವುದು ಕೇವಲ 14 ಗಂಟೆಗಳು ಮಾತ್ರ. ರಾಜ್ಯ ಸರಕಾರ ಬಂದ್‌ ಸಂದರ್ಭದಲ್ಲಿ ಆಗಬಹುದಾದ ಅಹಿತಕರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಿದೆ. ಹೈಕೋರ್ಟ್‌ ಕೂಡ ಸೂಕ್ತ ಬಂದೋಬಸ್ತ್‌ಗೆ ಆದೇಶಿಸಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆ, ಮೀಸಲು ಪಡೆಯ ತುಕಡಿಗಳು ರಾಜ್ಯಕ್ಕೆ ಬಂದಿವೆ. ಮೈಸೂರು, ಬೆಂಗಳೂರು, ತುಮಕೂರು, ಮಂಡ್ಯ, ಹಾಸನ, ಚಾಮರಾಜನಗರ, ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲೆಡೆ ಬಂದ್‌ ಎದುರಿಸಲು ಸರ್ವ ಸಿದ್ಧತೆಗಳು ನಡೆದಿವೆ. ಬಲವಂತದ ಬಂದ್‌, ಹಿಂಸಾಚಾರಕ್ಕೆ ಇಳಿಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಗೃಹ ಸಚಿವರು ಎಚ್ಚರಿಕೆ ನೀಡಿದ್ದಾರೆ. ತುಮಕೂರು ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಾದ ಶಿರಾ, ಕುಣಿಗಲ್‌ಗಳಲ್ಲಿ ವಿಶೇಷ ಬಂದೋಬಸ್ತ್‌ ಮಾಡಲಾಗಿದೆ.

ಶಾಂತಿಗೆ ಮನವಿ : ಬಂದ್‌ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ, ಶಾಂತಿಯಿಂದ ವರ್ತಿಸಲು ಕನ್ನಡ ಅಭಿಮಾನಿಗಳಿಗೆ ರಾಜ್‌ ಪುತ್ರರು ಮನವಿ ಮಾಡಿದ್ದಾರೆ. ರಾಜ್‌ಕುಮಾರ್‌ ಅವರು, ಬಂದ್‌ ಶಾಂತಿಯುತವಾಗಿ ನಡೆಸುವಂತೆ ಮಾಡಿರುವ ಮನವಿಯ ಕ್ಯಾಸೆಟ್‌ ಬಗ್ಗೆ ಅನುಮಾನಗಳೂ ಹುಟ್ಟಿಕೊಂಡಿವೆ. ಮಂಗಳವಾರ ರಾತ್ರಿಯಷ್ಟೇ ಗೋಪಾಲ್‌ ಇನ್ನೂ ವೀರಪ್ಪನ್‌ ಸಂಪರ್ಕ ಸಾಧಿಸಿಲ್ಲ ಎಂದು ಖರ್ಗೆ ಹೇಳಿಕೆ ನೀಡಿರುವಾಗ, ಈಗ ಇದ್ದಕ್ಕಿದ್ದಂತೆ ರಾಜ್‌ರಿಂದ ಕ್ಯಾಸೆಟ್‌ ಹೇಗೆ ಬರಲು ಸಾಧ್ಯ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಚಿತ್ರೋದ್ಯಮಿಗಳ ಆಕ್ರೋಶ : ಈ ಮಧ್ಯೆ ಕಳೆದ ಎರಡು ತಿಂಗಳಿನಿಂದ ಚಿತ್ರೋದ್ಯಮ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಭಾರಿ ನಷ್ಟಕ್ಕೆ ಒಳಗಾಗಿರುವ ಚಿತ್ರಕರ್ಮಿಗಳು, ಚಿತ್ರೋದ್ಯಮಿಗಳು ಸಂಪೂರ್ಣ ಆಕ್ರೋಶ ಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಬಂದ್‌ ನಿರ್ಧಾರ ಕೈಬಿಡಲು ಅವರು ಸಿದ್ಧರಿಲ್ಲ.

ರಾ-ಜ್ಯಾ-ದ್ಯಂ-ತ ವ್ಯಾಪ-ಕ ಬಂದೋ-ಬ-ಸ್ತ್‌ : ಗೃಹ-ಸ-ಚಿ-ವ ಖರ್ಗೆ
28ರ ಕರ್ನಾಟಕ ಬಂದ್‌ಗೆ ಸರ್ವತ್ರ ಬೆಂಬಲ, ಸಾರಿಗೆ ಸ್ತಬ್ಧ ಸಂಭವ

Post your views
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+