ಕ್ರಿಯಾಶೀಲವಾಯ್ತು ಕೈಗಾ ಅಣುಸ್ಥಾವರದ ಪ್ರಥಮ ಘಟಕ
ನಮ್ಮ ಪ್ರತಿನಿಧಿಯಿಂದ
ಕೈಗಾ : ರಾಷ್ಟ್ರದ ಅಭಿವೃದ್ಧಿಯ ಪಥದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣುಸ್ಥಾವರದ ಮೊದಲ ಘಟಕ ಮಂಗಳವಾರ ಬೆಳಗ್ಗೆ 10.34ಕ್ಕೆ ಕ್ರಿಯಾಶೀಲವಾಯಿತು. ಕೈಗಾ ಯೋಜನೆಯ ಪ್ರಥಮ ನಿರ್ದೇಶಕರಾಗಿದ್ದ ಪರಮಹಂಸ ತಿವಾರಿ, ಎನ್.ಪಿ.ಸಿ.ಯ ಅಧ್ಯಕ್ಷರಾದ ವಿ.ಕೆ. ಚತುರ್ವೇದಿ, ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರುಗಳಾದ ವಿ.ಕೆ. ಶರ್ಮಾ, ಎ. ಸನತ್ ಕುಮಾರ್ ಹಾಗೂ ಮಾಜಿ ಉಪಕುಲಪತಿ ಎಂ.ಐ. ಸವದತ್ತಿ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಕರ್ನಾಟಕದ ಬೆಳಕಿಂಡಿಯಾದ ಉತ್ತರಕರ್ನಾಟಕ ಜಿಲ್ಲೆಯಿಂದ ಇನ್ನು ಕೆಲವೇ ದಿನದಲ್ಲಿ ಮತ್ತಷ್ಟು ವಿದ್ಯುತ್ ಹರಿದು ಬರಲಿದೆ. ಮಂಗಳವಾರ ಕ್ರಿಯಾಶೀಲವಾಗಿರುವ ಘಟಕ ಉತ್ಪಾದಿಸುವ ವಿದ್ಯುತ್ ಕೇವಲ ರಾಜ್ಯಕ್ಕಷ್ಟೇ ಅಲ್ಲ ಕೇಂದ್ರ ವಿದ್ಯುತ್ ಜಾಲಕ್ಕೂ ಸೇರ್ಪಡೆಯಾಗುತ್ತಿದೆ.
ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಮಂಗಳವಾರ ಬೆಳಗ್ಗೆ ಕ್ರಿಯಾಶೀಲವಾದ ಮೊದಲ ಘಟಕ ಇನ್ನು ಕೆಲವೇ ದಿನಗಳಲ್ಲಿ ಕಾರ್ಯಾರಂಭಿಸಲಿದೆ. ವಿಶ್ವ ಅಣುಶಕ್ತಿ ನಕ್ಷೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಕೈಗಾದ ಮೊದಲ ಘಟಕವನ್ನು ಶತಾಯಗತಾಯ ಇಂದು 10ಗಂಟೆ 30 ನಿಮಿಷಕ್ಕೆ ಕ್ರಿಯಾಶೀಲ ಗೊಳಿಸಲೇ ಬೇಕು ಎಂದು ಪಣತೊಟ್ಟಿದ್ದ ವಿಜ್ಞಾನಿಗಳು, ತಂತ್ರಜ್ಞರು ಕಳೆದ ಕೆಲವು ದಿನಗಳಿಂದ ಅವಿರತವಾಗಿ ಶ್ರಮಿಸಿದ್ದರು. ಇವರ ಶ್ರಮ ವ್ಯರ್ಥವಾಗಲಿಲ್ಲ.
ಮೊದಲ ಗುಮ್ಮಟದ ಹೃದ್ಭಾಗದಲ್ಲಿ ಸೇರಿಸಲಾಗುವ ಅಣು ಇಂಧನಕ್ಕೆ ನಿರ್ದಿಷ್ಟ ಸಂಖ್ಯೆಯ ನ್ಯೂಟ್ರಾನ್‌ಗಳನ್ನು ಸೇರಿಸುವ ಮೂಲಕ ಅಣು ವಿದಳನ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಲಾಯಿತು. ವಿದಳನ ಪ್ರಕ್ರಿಯೆ ಆರಂಭಗೊಂಡ ನಂತರ ಅದನ್ನು ನಿಯಂತ್ರಿಸಲು ಸಾಧ್ಯವೇ ವಿನಾ ಸಂಪೂರ್ಣ ನಿಲ್ಲಿಸಲು ಸಾಧ್ಯವಿಲ್ಲದ ಕಾರಣ ಎಲ್ಲ ಉಪಕರಣಗಳೂ ಸೇರಿದಂತೆ ಸಕಲ ನಿಯಂತ್ರಕ ವ್ಯವಸ್ಥೆಯನ್ನೂ ಕೂಲಂಕಷವಾಗಿ ಪರಿಶೀಲಿಸಲಾಯಿತು.
ವಿಕಿರಣ ಪ್ರಕ್ರಿಯೆ ನಡೆಯುವ ಗುಮ್ಮಟದ ಹೃದ್ಭಾಗದಲ್ಲಿ ಉಷ್ಣತೆಯನ್ನು 274 ಡಿಗ್ರಿ ಸೆಂಟಿಗ್ರೇಡ್ ಇರುವಂತೆ ನೋಡಿಕೊಳ್ಳಲಾಗಿತ್ತು. ಯಂತ್ರವನ್ನು ಪ್ರಾಯೋಗಿಕವಾಗಿ ಚಾಲನೆ ಮಾಡಿ ಅವುಗಳ ಕಾರ್ಯವಿಧಾನವನ್ನು ಅಧ್ಯಯನ ಮಾಡಲಾಯಿತು. ಮಂಗಳವಾರ ಸಂಜೆಯ ಹೊತ್ತಿಗೆ ಮೊದಲ ಘಟಕ ಹೇಗೆ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಖಚಿತ ಮಾಹಿತಿ ತಜ್ಞರಿಂದ ದೊರಕುತ್ತದೆ.
ಇಂದು ಘಟಕ ಕ್ರಿಯಾಶೀಲವಾಗಿದ್ದಾಗ್ಯೂ ಕೂಡ ಇಲ್ಲಿ ಹಲವು ಪ್ರಯೋಗಗಳು ನಡೆಯಲೇ ಬೇಕು. ಈ ಪ್ರಯೋಗಗಳು ಪೂರ್ಣವಾಗಲು ಕನಿಷ್ಠ ಐದಾರು ವಾರಗಳಾದರೂ ಬೇಕು. ಈ ಭೌತ ಪ್ರಯೋಗಗಳು ಪೂರ್ಣಗೊಂಡ ನಂತರ ಇನ್ನು ಎರಡು ತಿಂಗಳಲ್ಲಿ ಘಟಕ ವಿದ್ಯುತ್ ಉತ್ಪಾದನೆಯಲ್ಲಿ ತೊಡಗಲಿದೆ. ಆರಂಭದಲ್ಲಿ ಕಿಲೋ ವ್ಯಾಟ್‌ನಲ್ಲಿ ಆರಂಭಗೊಳ್ಳುವ ಉತ್ಪಾದನೆ, ಕಾಲಕ್ರಮೇಣ 220 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿದೆ.
ಈ ವರ್ಷಾರಂಭದಲ್ಲಿಯೇ ಕೈಗಾ ಸ್ಥಾವರದ ಎರಡನೇ ಘಟಕ ರಾಷ್ಟ್ರಕ್ಕೆ ಸಮರ್ಪಿತವಾಗಿತ್ತು. ಆದರೆ, 1994ರಲ್ಲಿ ಮೊದಲ ಘಟಕದ ಗುಮ್ಮಟ ಕಳಚಿ ಬಿದ್ದಿದ್ದರಿಂದಾಗಿ ಇದರ ಕಾರ್ಯಾರಂಭಕ್ಕೆ ಇಷ್ಟು ದಿನ ಕಾಯುವಂತಾಯಿತು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications