ಮುಸ್ಲಿಂ ರಾಷ್ಟ್ರದ ನೋಟಿನ ಮೇಲೆ ಗಣಪ
ನವದೆಹಲಿ : ಪ್ರಥಮ ವಂದಿಪನಾದ ವಿನಾಯಕ ನಿಮಗೆ ಗೊತ್ತಲ್ಲ. ಭಾದ್ರಪದ ಶುಕ್ಲ ಚೌತಿಯ ದಿನ ಮನೆ ಮನೆಗೂ ಬಂದು ಭಕ್ತರ ಪೂಜೆ ಸ್ವೀಕರಿಸಿ, ಹರಸುವ ಗಣಪ ನಾನ್ ಕಾಂಟ್ರವರ್ಷಿಯಲ್ ಗಾಡ್. ಅವನ ವಾಹನ ಇಲಿ. ಹೀಗಾಗಿ ಮೌಸ್ ಇರುವ ಕಂಪ್ಯೂಟರ್ ಮತ್ತು ಇಂಟರ್‌ನೆಟ್ ಗಾಡ್ ಗಣೇಶ ಎಂದು ವಿಶ್ವದ ಕಂಪ್ಯೂಟರ್ ಉದ್ದಿಮೆಗಳೇ ಒಪ್ಪಿಕೊಂಡಿದ್ದಾರೆ.
ವಿಶ್ವ ವಂದಿಪನಾದ ನಮ್ಮ ಗಣಪ ಮತ್ತೆ ಸುದ್ದಿ ಮಾಡಿದ್ದಾನೆ. ಮುಸ್ಲಿಂ ರಾಷ್ಟ್ರದ ಕರೆನ್ಸಿ ನೋಟಿನ ಮೇಲೂ ಈ ಹಿಂದೂ ಭಗವಂತ ಕಾಣಿಸಿಕೊಂಡಿದ್ದಾನೆ. ಇದು ಯಾರೋ ಹೇಳಿದ ಮಾತಾಗಿದ್ದರೆ ನಾವು ತಮಾಷೆ ಇರಬೇಕೆಂದು ಸುಮ್ಮನಾಗುತ್ತಿದ್ದೆವು. ಈ ಸತ್ಯವನ್ನು ಹೇಳಿದವರು, ನಮ್ಮ ಕೇಂದ್ರ ಸಚಿವರಾದ ರಾಮ್‌ನಾಯ್ಕ್. ಹೀಗಾಗಿ ನಂಬಿದರೆ ನಂಬಿ ಬಿಟ್ಟರೆ ಬಿಡಿ ಎಂದು ಹೇಳುವ ಅಗತ್ಯ ಇಲ್ಲ.
ಮುಸ್ಲಿಮರೇ ಹೆಚ್ಚಿರುವ ಇಂಡೋನೇಷಿಯಾಗೆ ಭೇಟಿ ನೀಡಿ ಹಿಂತಿರುಗಿದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ರಾದ ರಾಮ್ ನಾಯ್ಕ್ ಗಣೇಶನ ಚಿತ್ರ ಇರುವ ಅಲ್ಲಿನ ಕರೆನ್ಸಿ ಕಂಡು ಬೆರಗಾದರಂತೆ. ಈ ವಿಷಯವನ್ನು ಅವರು ತಮ್ಮ ಆತ್ಮೀಯರಿಗೆಲ್ಲಾ ಹೇಳಿದ್ದಾರೆ. ಅಂದಹಾಗೆ ಅಲ್ಲಿನ 20 ಸಾವಿರ ರುಪಾಯಿ ನೋಟಿನ ಮೇಲೆ ಗಣೇಶನ ಚಿತ್ರ ಇದೆಯಂತೆ.
ನೋಡಿದ್ರಾ ನಮ್ಮ ಗಣೇಶನ ಲೀಲೆ. ಹಿಂದೂ ಗಾಡ್ ಗಣೇಶ ಮುಸ್ಲಿಂ ರಾಷ್ಟ್ರದ ನೋಟಿನ ಮೇಲೂ ಉದ್ಭವಿಸಿದ್ದಾನೆ. ವಿಷಾದದ ವಿಷಯ ಅಂದ್ರೆ ಗಣಪ ಇನ್ನೂ ಭಾರತದ ನೋಟಿನ ಮೇಲೇ ಪ್ರತ್ಯಕ್ಷ ಆಗಿಲ್ಲ ಏಕೆ ? ಇದು ಮಿಲಿಯನ್ ಡಾಲರ್ ಪ್ರಶ್ನೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications