Get Updates
Get notified of breaking news, exclusive insights, and must-see stories!

ಅಸ-ಲು ಕಟ್ಟಿ-ದ-ರೆ ಬಡ್ಡಿ ಮನ್ನಾ : -ಬಂ-ದ-ದ್ದೇ ಲಾಭ ಎನ್ನು-ವ ಕೆಪಿ-ಟಿ-ಸಿ-ಎ-ಲ್‌

ಬೆಂಗಳೂರು : ವಿದ್ಯುತ್‌ ಬಿಲ್‌ ಕಟ್ಟದೇ ಬಾಕಿ ಉಳಿಸಿ ಕೊಂಡ ರೈತರು ಮತ್ತು ಸರಕಾರೀ ಸಂಸ್ಥೆಗಳು ನವೆಂಬರ್‌ 30ರೊಳಗೆ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮಕ್ಕೆ, ಅಸಲು ಹಣ ಕಟ್ಟಿ ದಲ್ಲಿ ಅಂತಹವರಿಗೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಡಿ.ಬಿ. ಚಂದ್ರೇ ಗೌಡ ಹೇಳಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಭಾಗವಹಿಸದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವರು , ರೈತರಿಂದ ಸುಮಾರು 150 ಕೋಟಿ ರೂಪಾಯಿ ಹಾಗೂ ಸರಕಾರಿ ಸಂಸ್ಥೆಗಳಿಂದ 180 ಕೋಟಿ ರೂಪಾಯಿ ಬಡ್ಡಿ ಬರಬೇಕಾಗಿದ್ದು, ಪೂರ್ತಿ ಅಸಲನ್ನು ಕಟ್ಟುವವರಿಗೆ ಬಡ್ಡಿ ಮನ್ನಾ ಮಾಡಲಾಗುವುದು ಎಂದರು.

ನಿಗಮದ ವತಿಯಿಂದಲೇ ಮೀಟರ್‌ ಅಳವಡಿಕೆ : ನಿಗಮದ ಆರ್ಥಿಕ ಸ್ಥಿತಿ ಸುಧಾರಿಸಬೇಕಾಗಿದೆ ಎಂದ ಸಚಿವರು ಬರಬೇಕಾದ ಬಾಕಿಯಲ್ಲಿ 329 ಕೋಟಿ ರೂಪಾಯಿ ಬಡ್ಡಿ ಹಾಗೂ 1058 ಕೋಟಿ ರೂಪಾಯಿ ಅಸಲು ಸೇರಿದೆ ಎಂದರು. ಪಂಪ್‌ ಸೆಟ್‌ಗಳಿಗೆ ಮತ್ತು ಭಾಗ್ಯ ಜ್ಯೋತಿ ಯೋಜನೆ ಗ್ರಾಹಕರಿಗೆ ಕಂತಿನಲ್ಲಿ ಹಣ ಪಡೆದು ಮೀಟರ್‌ ಅಳವಡಿಸುವ ಉದ್ದೇಶವಿತ್ತು. ಇದರಿಂದ ಜನರಿಗೆ ತೊಂದರೆಯಾಗುವುದನ್ನು ಗಮನಿಸಿ ನಿಗಮದ ವತಿಯಿಂದಲೇ ಮೀಟರ್‌ ಅಳವಡಿಸಲು ನಿರ್ಧರಿಸಲಾಗಿದೆ ಎಂದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+