ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಲ್‌ ಕಾಲ್‌ ದರದಲ್ಲಿ ಅಂತಾರಾಷ್ಟ್ರೀಯ ಫ್ಯಾಕ್ಸ್‌ ಸೇವೆ

By Staff
|
Google Oneindia Kannada News

ಬೆಂಗಳೂರು: ಇದು ಸಾಮಾನ್ಯ ಜನರಿಗಾಗಿಯೇ ಇರುವ ಸಂಪರ್ಕ ಸಾಧನ. ಹೆಸರು ಪೇಜ್‌ನೆಟ್‌ ಇದರ ಮೂಲಕ ನೀವೀಗ ಅಂತಾರಾಷ್ಟ್ರೀಯ ಫ್ಯಾಕ್ಸ್‌ ಸಂದೇಶವನ್ನು ಸ್ಥಳೀಯ ಕರೆಯ ದರದಲ್ಲಿ ಕಳಿಸಬಹುದು. ಇಂಟರ್‌ನೆಟ್‌ನಲ್ಲಿ ಇ-ಮೇಲ್‌ ಇದ್ದರೂ ಇದಕ್ಕಾಗಿ ದುಬಾರಿ ಕಂಪ್ಯೂಟರ್‌ ಅಗತ್ಯವಿದೆ. ಆದರೆ ಪೇಜ್‌ನೆಟ್‌ಗೆ ಹೆಸರೇ ಹೇಳುವಂತೆ ಪೇಜರ್‌ ಮಾತ್ರ ಸಾಕು, ಇಲ್ಲ ಸೆಲ್‌ ಫೋನ್‌ ಇದ್ದರೂ ನಡೆದೀತು.

ಇದಕ್ಕಾಗಿ ನೀವು ಮಾಡಬೇಕಾದ್ದಿಷ್ಟೆ. ಸಮೀಪದ ಪೇಜ್‌ನೆಟ್‌ ಸೆಂಟರ್‌ಗೆ ಒಂದು ದೂರವಾಣಿ ಮಾಡಬೇಕು. ಅಲ್ಲಿರುವ ಸಿಬ್ಬಂದಿ ನಿಮ್ಮ ಸಂದೇಶವನ್ನು ಸಂಬಂಧಿಸಿದವರಿಗೆ ಮುಟ್ಟಿಸುತ್ತಾರೆ. ಇದನ್ನು ದೂರಕ್ಕೆ ಕಳಿಸುವ ಫ್ಯಾಕ್ಸ್‌, ಪೇಜರ್‌ ಮೆಸೇಜ್‌, ಇ-ಮೇಲ್‌ ಅಥವಾ ದೂರವಾಣಿಯಂತೆ ಉಪಯೋಗಿಸಬಹುದು.

ಫ್ಯಾಕ್ಸ್‌ನ ಖರ್ಚು ಒಂದು ಪುಟಕ್ಕೆ ಗರಿಷ್ಠ 15 ರುಪಾಯಿ. ನಿಮ್ಮ ಉದ್ದದ ಸಂದೇಶ ಮುಟ್ಟಿಸುವ ಈ ವ್ಯವಸ್ಥೆಯನ್ನು ಇ-ಕಾಲ್‌ ಎಂದು ಕರೆಯಲಾಗುತ್ತದೆ. ಟೆಲಿಫೋನ್‌ ಮೂಲಕ ಕಳಿಸುವ ಟೆಲಿಗ್ರಾಫ್‌ನ ಫೋನೋಗ್ರಾಫ್‌ನಂತೆ ಕೆಲಸ ಮಾಡುವ ಈ ವ್ಯವಸ್ಥೆಗೆ ತಗಲುವ ಖರ್ಚು 5 ರುಪಾಯಿಗಿಂತ ಕಡಿಮೆ.

ಎಸ್‌ಟಿಡಿ ಅಗತ್ಯವಿಲ್ಲ : ಈ ವ್ಯವಸ್ಥೆಯಲ್ಲಿ ಈಗಾಗಲೇ ಪ್ರತಿದಿನ 20 ಸಾವಿರ ಸಂದೇಶಗಳನ್ನು ರವಾನಿಸಲಾಗುತ್ತಿದೆ ಎಂದು ಡೆಲ್ಟಾಗ್ರಾಮ್‌ ಎಂಟರ್‌ಪ್ರೆೃಸಸ್‌ನ ವ್ಯವಸ್ಥಾಪಕ ನಿರ್ದೇಶಕ ಕೋದಂಡರಾಮನ್‌ ಹೇಳುತ್ತಾರೆ. ಡೆಲ್ಟಾಗ್ರಾಮ್‌ ಕಂಪನಿಯ ಲೇಟೆಸ್ಟ್‌ ಉತ್ಪಾದನೆ ಎಂದರೆ ಪೇಜ್‌ನೆಟ್‌. ಇದರಿಂದ ದೇಶದ ಯಾವುದೇ ಮೂಲೆಯಿಂದಲಾದರೂ ಸಂದೇಶ ಕಳಿಸಬಹುದು. ಇದಕ್ಕಾಗಿ ಸಂದೇಶ ಕಳಿಸಬೇಕಾದವರು ಎಸ್‌ಟಿಡಿ ಕರೆ ಮಾಡಬೇಕಾದ ಅಗತ್ಯವಿಲ್ಲ. ಕಂಪನಿಯ ಸ್ಥಳೀಯ ಕಚೇರಿಗೆ ಕರೆ ಮಾಡಿದರೆ ಸಾಕು.

ಸಂದೇಶ ಪಡೆಯಬೇಕಾದವರಿಗೆ ಪೇಜರ್‌ ಇರಬೇಕಾದುದು ಅಗತ್ಯ. ನೋಂದಣಿ ಶುಲ್ಕ 250 ರು. ಹಾಗೂ ಪ್ರತಿ ತಿಂಗಳು 200 ರುಪಾಯಿ ಕಟ್ಟ ಬೇಕಾಗುತ್ತದೆ. ಎಷ್ಟು ಸಂದೇಶಗಳನ್ನಾದರೂ ಪಡೆಯಬಹುದಾದ ಈ ವ್ಯವಸ್ಥೆ ಇನ್ಸಾಟ್‌ 3ಬಿ ಉಪಗ್ರಹದ ಮೂಲಕ ನಡೆಯಲಿದೆ. ಸೆಲ್‌ ಫೋನ್‌ ಮೂಲಕವೂ ಸಂದೇಶ ರವಾನಿಸಬಹುದು.

ಇದರಿಂದ ಎಸ್‌ಟಿಡಿ ಕರೆಯ ಶೇಕಡಾ 63ರಷ್ಟು ಹಣ ಇಳಿಯಲಿದೆ ಎಂದು ಕೋದಂಡರಾಮನ್‌ ವಿವರಿಸುತ್ತಾರೆ.

ಇ-ಕಾಮರ್ಸ್‌ : ಡೆಲ್ಟಾಗ್ರಾಮ್‌ ಕಂಪನಿ ವತಿಯಿಂದ ನಡೆಯುತ್ತಿರುವ ಪೇಜಿಂಗ್‌ ಸೇವೆ ಪಡೆಯುವವರ ಸಂಖ್ಯೆ 35 ಸಾವಿರ ಇದ್ದು, 56 ಕೇಂದ್ರಗಳ 250 ನಗರಗಳಲ್ಲಿ 7,500 ಕಚೇರಿಗಳನ್ನು ತೆರೆಯಲಾಗಿದೆ. 2001ನೇ ಜೂನ್‌ 30ಕ್ಕೆ 25 ಸಾವಿರ ಪಟ್ಟಣಗಳಿಗೆ ಸೇವೆ ವಿಸ್ತರಿಸುವ ಗುರಿ ಹೊಂದಲಾಗಿದೆ.

ಈ ವ್ಯವಸ್ಥೆಯನ್ನು ಇ-ಕಾಮರ್ಸ್‌, ವಾಯ್ಸ್‌ ಮತ್ತು ವಿಡಿಯೋ ಮೇಲ್‌ಗಳಿಗೂ ಬಳಸಬಹುದಾಗಿದ್ದು, ಬಹು ಉದ್ದೇಶಗಳನ್ನು ಹೊಂದಿದೆ. ಈ ವ್ಯವಸ್ಥೆ ಟೆಲಿಕಾಂ ಇಲಾಖೆಯ ಪರ್ಯಾಯ ವ್ಯವಸ್ಥೆಯಂತೆ ಕೆಲಸ ಮಾಡಲಿದ್ದು, ಟೆಲಿಕಾಂ ಮುಷ್ಕರದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೋದಂಡರಾಮನ್‌ ಹೇಳಿದ್ದಾರೆ. (ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X