Get Updates
Get notified of breaking news, exclusive insights, and must-see stories!

ಚಾಮರಾಜನಗರ ಜಿಲ್ಲೆಯಲ್ಲಿ ಭಾರಿ ಮಳೆ,ದ್ವೀಪವಾದ ಗ್ರಾಮಗಳು

ಮೈಸೂರು : ತಿಂಗಳ ಹಿಂದೆ ಮಳೆ ಇಲ್ಲ ಎಂದು ಕಂಗಾಲಾಗಿದ್ದ ಚಾಮರಾಜನಗರ ಜಿಲ್ಲೆಯ ಜನ. ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ತತ್ತರಿಸಿ ಹೋಗಿದ್ದಾರೆ. ವರುಣನ ಕೃಪಾವಕೃಪೆಗಳಿಂದ ನಡುಗುತ್ತಿದ್ದಾರೆ.

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಜಿಲ್ಲೆಯ ಹಲವಾರು ಗ್ರಾಮಗಳು ದ್ವೀಪಗಳಾಗಿ ಪರಿವರ್ತನೆಗೊಂಡಿವೆ. ನೀರಿಲ್ಲದೆ ಬಿರುಕು ಬಿಟ್ಟಿದ್ದ ಕೆರೆ, ಕಟ್ಟೆಗಳೆಲ್ಲಾ ಕೋಡಿ ಬಿದ್ದಿವೆ. ರಸ್ತೆಗಳೆಲ್ಲಾ ಹಾಳಾಗಿ, ನೀರಿನಿಂದ ತುಂಬಿ ತುಳುಕುತ್ತಿದ್ದು, ಸಂಚಾರ ಹಾಗೂ ಜನಜೀವನ ಎರಡೂ ಅಸ್ತವ್ಯಸ್ತಗೊಂಡಿವೆ.

48 ಗಂಟೆಗಳ ಹಿಂದೆ ಇಲ್ಲಿ 9.6 ಸೆಂಟಿ ಮೀಟರ್‌ಗಳ ದಾಖಲೆ ಮಳೆ ಸುರಿದಿದೆ. ಗುರುವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆ ರಸ್ತೆಗಳನ್ನೆಲ್ಲಾ ಆವರಿಸಿ ಜನಜೀವನಕ್ಕೆ ಭಾರಿ ಪೆಟ್ಟು ನೀಡಿತ್ತು. ಚರಂಡಿಗಳೆಲ್ಲವೂ ತುಂಬಿ ಹೊಳೆಯಂತೆ ಹರಿಯುತ್ತಿದ್ದವು. ರಸ್ತೆಯಲ್ಲಿ ಶೇಖರವಾಗುವ ನೀರು ಹೊರಹೋಗಲು ಆಸ್ಪದವೇ ಇಲ್ಲದೆ ರಸ್ತೆಗಳೆಲ್ಲ ನಾಲೆಗಳಂತೆ ತೋರುತ್ತಿದ್ದವು.

ಮದ್ದೂರು ಮಳವಳ್ಳಿಯಲ್ಲಿ ಭಾರಿ ಹಾನಿ : ಮದ್ದೂರು - ಮಳವಳ್ಳಿಗಳಲ್ಲೂ ಭಾರಿ ಮಳೆ ಬಿದ್ದಿದೆ. ರಾಮನಗರದಲ್ಲಿ ಕೂಡ ಮಳೆಯಾಗಿದೆ. ಆದರೆ, ಕಳೆದೆರಡು ದಿನಗಳ ಹಿಂದೆ ಮಳವಳ್ಳಿ ಹಾಗೂ ಮದ್ದೂರುಗಳಲ್ಲಿ ಬಿದ್ದ ಮಳೆ ಬೆಳೆ, ಆಸ್ತಿ - ಪಾಸ್ತಿಗಳಿಗೆ ಮಾಡಿದ ಹಾನಿ ಅಷ್ಟಿಷ್ಟಲ್ಲ.

ಕಿರುಗಾವಲು ಕ್ಷೇತ್ರದ ಶಾಸಕ ಡಿ.ಸಿ. ತಮ್ಮಣ್ಣನವರ ರೀತ್ಯ ಸುಮಾರು 3 ಕೋಟಿ ರುಪಾಯಿ ನಷ್ಟ ಸಂಭವಿಸಿದೆಯಂತೆ. ಶಾಸಕರು, ಜಿಲ್ಲಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳ ಜತೆಗೂಡಿ ಮಳೆ ಹಾನಿಗೊಳಗಾದ ಪ್ರದೇಶಗಳ ಸಮೀಕ್ಷೆ ನಡೆಸಿದರು.

ಅತಿವೃಷ್ಟಿಯಿಂದಾಗಿ ಮನೆ - ಮಾರು ಕಳೆದುಕೊಂಡಿರುವವರಿಗೆ ತುರ್ತು ನೆರವು ನೀಡಬೇಕು ಎಂದು ಹೇಳಿದ ಅವರು, ಇದಕ್ಕಾಗಿ 10 ಲಕ್ಷ ರುಪಾಯಿಗಳ ವಿಶೇಷ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳನ್ನು ಪ್ರಾರ್ಥಿಸಲಾಗುವುದು ಎಂದು ತಿಳಿಸಿದರು. ಅಧಿಕಾರಿಗಳ ಜತೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರಿಗೆ ಅವರು ವಿವರಗಳನ್ನು ನೀಡಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+