ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಐಟಿ ಐಟಿ : ಭಾರತೀಯ ತಜ್ಞರಿಗಾಗಿ ನ್ಯೂಜಿಲ್ಯಾಂಡ್‌ ಶೋಧಟಿಂಬಕ್ಟುವಿನಿಂದ ಯೋಕಾಹಾಮದವರೆಗೆ ಇವತ್ತು ಎಲ್ಲೆಲ್ಲಿಯೂ ಸಲ್ಲುವವರೆಂದರೆ ಐಟಿ ಪರಿಣತರು ಮಾತ್ರ !

By Staff
|
Google Oneindia Kannada News

ಮೆಲ್ಬರ್ನೋ: ಭಾರತದ ಮಾಹಿತಿ ತಂತ್ರಜ್ಞರಿಗಾಗಿ ಎದುರು ನೋಡುವ ಸರದಿ ಈಗ ನ್ಯೂಜಿಲ್ಯಾಂಡ್‌ ಪಾಲಿಗೆ ಬಂದಿದೆ. ಐಟಿ ತಜ್ಞರ ಕೊರತೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಸ್ಪರ್ಧೆ ಮತ್ತು ಸಂಕಷ್ಟ ಎದುರಿಸುತ್ತಿರುವ ನ್ಯೂಜಿಲ್ಯಾಂಡ್‌, ಅಮೆರಿಕ, ಬ್ರಿಟನ್‌ ಮತ್ತು ಜರ್ಮನಿ ನಂತರ ಐಟಿ ತಜ್ಞರಿಗಾಗಿ ಭಾರತದತ್ತ ಮುಖ ಮಾಡಿದೆ.

ಅತ್ಯಂತ ಬೇಡಿಕೆಯುಳ್ಳ ವ್ಯಕ್ತಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಭಾರತದ ಮಾಹಿತಿ ತಂತ್ರಜ್ಞರು ಈಗ ಎಲ್ಲೆಲ್ಲೂ ಸಲ್ಲುವವರಾಗಿದ್ದಾರೆ. ನ್ಯೂಜಿಲ್ಯಾಂಡ್‌ನ ಮಾಹಿತಿ ತಂತ್ರಜ್ಞಾನ ಸಂಘ ಹಾಗೂ ವಿದೇಶಿಯರ ಸೇವೆ ಮತ್ತು ವಾಣಿಜ್ಯ ವಿಭಾಗ 200 ಭಾರತೀಯ ಐಟಿ ತಜ್ಞರನ್ನು ನೇಮಿಸಿಕೊಳ್ಳಲು ತೀರ್ಮಾನಿಸಿದೆ.

ಅಮೆರಿಕ, ಬ್ರಿಟನ್‌ ಮುಂತಾದ ದೇಶಗಳಿಂದ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ತೀವ್ರ ಹಿನ್ನಡೆ ಅನುಭವಿಸುತ್ತಿರುವ ನ್ಯೂಜಿಲ್ಯಾಂಡ್‌, ಭಾರತದ ತಜ್ಞರಿಗಾಗಿ ಎಲ್ಲ ತ್ಯಾಗಕ್ಕೂ ಸಿದ್ಧವಾಗಿದೆ. ಇದುವರೆಗೆ ಭಾರತ ಸಿನಿಮಾಗಳ ಚಿತ್ರೀಕರಣ ಮತ್ತು ಕ್ರಿಕೆಟ್‌ ವಿಷಯವಾಗಿ ಮಾತ್ರ ನ್ಯೂಜಿಲ್ಯಾಂಡನ್ನು ಬಳಸಿಕೊಳ್ಳುವ ಮೂಲಕ ಶೋಷಣೆ ಮಾಡುತ್ತಿತ್ತು. ಅದಕ್ಕೆ ಈಗ ನ್ಯಾಯ ಸಿಗಬೇಕಾದರೆ ಭಾರತದ ಐಟಿ ತಜ್ಞರು ಅಲ್ಲಿ ಕಾಲೂರಲೇಬೇಕು ಎನ್ನುತ್ತಿದ್ದಾರೆ ನ್ಯೂಜಿಲ್ಯಾಂಡ್‌ ಜನ.

ಜಾವಾ, ಆರೇಕಲ್‌ ಮತ್ತು ಡೇಟಾಬೇಸ್‌, ವೆಬ್‌ ಡಿಸೈನ್‌ ಮತ್ತು ಇ-ಕಾಮರ್ಸ್‌ನಲ್ಲಿ ಪರಿಣಿತಿ ಇರುವವರಿಗೆ ಅವಕಾಶ ಮುಕ್ತವಾಗಿದೆ. ಇಂಗ್ಲಿಷ್‌ ಜ್ಞಾನವೂ ಅಗತ್ಯವಾಗಿದ್ದು, ಗ್ರಾಹಕ ಪರಿಸರದಲ್ಲಿ ಕೆಲಸ ಮಾಡುವ ಮಂದಿ ಅಗತ್ಯ ಎಂದು ನ್ಯೂಜಿಲ್ಯಾಂಡ್‌ನ ಮಾಹಿತಿ ತಂತ್ರಜ್ಞಾನ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಜಿಮ್‌ ಓನಿಲ್ಲೆ ಹೇಳುತ್ತಾರೆ. ಅಕ್ಟೋಬರ್‌ 9, 10 ರಂದು ಬೆಂಗಳೂರಲ್ಲಿ ವಿಚಾರಸಂಕಿರಣ

ಪ್ರತಿಭಾಶೋಧಕ್ಕಾಗಿ ಬೆಂಗಳೂರು, ಹೈದರಾಬಾದ್‌ ಸೇರಿದಂತೆ ಭಾರತದ ಇತರ ಪ್ರಮುಖ ನಗರಗಳಲ್ಲಿ ವಿಚಾರಸಂಕಿರಣಗಳನ್ನೂ ಏರ್ಪಡಿಸಲು ನ್ಯೂಜಿಲ್ಯಾಂಡ್‌ ಉದ್ದೇಶಿಸಿದೆ. ಅಕ್ಟೋಬರ್‌ 9 ಮತ್ತು 10ರಂದು ನಡೆಯುವ ಈ ವಿಚಾರಸಂಕಿರಣಗಳ ಜೊತೆಗೆ ಒಂದು ತಂಡ ಬೇರೆ ವಿಭಾಗಗಳ ತಜ್ಞರನ್ನು ಆರಿಸಲು ಚನ್ನೈ ಮತ್ತು ಮುಂಬೈಗೂ ಭೇಟಿ ನೀಡಲಿದೆ. ಭಾರತದ ನಂತರ ಇದೇ ಕಾರಣಕ್ಕಾಗಿ ಜಿಂಬಾಬ್ವೆ, ದಕ್ಷಿಣ ಆಫ್ರಿಕಾ ಮತ್ತು ಯೂರೋಪ್‌ನ ಕೆಲವು ದೇಶಗಳಿಗೂ ನ್ಯೂಜಿಲ್ಯಾಂಡ್‌ನ ಉನ್ನತ ಮಟ್ಟದ ತಂಡ ಭೇಟಿ ನೀಡಲಿದೆ.

ವಿಚಾರಸಂಕಿರಣದಲ್ಲಿ ನ್ಯೂಜಿಲ್ಯಾಂಡ್‌ನಲ್ಲಿರುವ ಕೆಲವು ಸಾಫ್ಟ್‌ವೇರ್‌ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸುವರು. ಐಟಿ ಕ್ಷೇತ್ರದಲ್ಲಿ ಭಾರತ ದಾಪುಗಾಲು ಇಡುತ್ತಿರುವ ಹಿನ್ನಲೆಯಲ್ಲಿ ಭಾರತದತ್ತ ತಾವು ಗಮನಹರಿಸಲು ಕಾರಣ ಎಂದು ನ್ಯೂಜಿಲ್ಯಾಂಡ್‌ನ ಮಾಹಿತಿ ತಂತ್ರಜ್ಞಾನ ಸಂಘ ತಿಳಿಸಿದೆ.

ಪ್ರತಿಭಾಪಲಾಯನ : ಭಾರತ ವರ್ಷವೊಂದಕ್ಕೆ ಸರಾಸರಿ 6 ಲಕ್ಷ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಪದವೀಧರರನ್ನು ತಯಾರು ಮಾಡುತ್ತಿದೆ. ನ್ಯೂಜಿಲ್ಯಾಂಡ್‌ನಲ್ಲಿ ಈ ಪ್ರಮಾಣ ಕೇವಲ ಒಂದು ಸಾವಿರ. ಇಷ್ಟಲ್ಲದೆ ಪ್ರತಿಭಾಪಲಾಯನ ಸಮಸ್ಯೆಯನ್ನೂ ನ್ಯೂಜಿಲ್ಯಾಂಡ್‌ ಎದುರಿಸುತ್ತಿದೆ. ಅನೇಕ ಐಟಿ ತಜ್ಞರು ಆಸ್ಟ್ರೇಲಿಯಾದ ಕಡೆ ವಲಸೆ ಹೋಗುತ್ತಿದ್ದಾರೆ.

ಹಾಗಾಗಿ ಎದುರಾಗಿರುವ ತೀವ್ರ ಸಮಸ್ಯೆಯನ್ನು ತಗ್ಗಿಸಲು ವಿದೇಶಿಯರ ವಲಸೆಗೆ ಸಂಬಂಧಿಸಿದ ತನ್ನ ನೀತಿಯನ್ನು ಬದಲಿಸಿರುವ ನ್ಯೂಜಿಲ್ಯಾಂಡ್‌, ಈ ಮುಂಚೆ ವಿವಿಧ ಕಾರಣಗಳಿಗಾಗಿ ತಿರಸ್ಕರಿಸಲಾಗಿದ್ದವರ ಅರ್ಜಿಗಳನ್ನೂ ಪುನರ್‌ಪರಿಶೀಲನೆ ಮಾಡಲು ತಯಾರಾಗಿದೆ. ಈ ಎಲ್ಲಾ ವಿಷಯಗಳನ್ನೂ ವಿಚಾರಸಂಕಿರಣದಲ್ಲಿ ಚರ್ಚಿಸಲು ಅದು ಉದ್ದೇಶಿಸಿದೆ.

ನ್ಯೂಜಿಲ್ಯಾಂಡ್‌ನಲ್ಲಿ ಬಂದು ನೆಲೆಸಲು ಸಿದ್ಧರಿರುವ ಭಾರತೀಯ ತಜ್ಞರಿಗೆ ಸಹಾಯಕವಾಗುವಂತೆ ಭಾರತದಲ್ಲಿ ತನ್ನ ಒಂದು ವಲಸೆ ಕಚೇರಿಯನ್ನು ತೆರೆಯಲು ಅದು ತೀರ್ಮಾನಿಸಿದೆ.

(ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X