ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ಗಿಲ್‌ ಸ್ಫೂರ್ತಿ, ಸೇನೆಗೆ ಭರ್ತಿ

By Super
|
Google Oneindia Kannada News

First Girl army officer from Karwar
ಸಂದರ್ಶನ : ಪುರು
ಪೀಚಲು ದೇಹ, ಪಕ್ಕಾ ಬಾಯ್ಕಟ್‌ ತಲೆಯಲ್ಲಿ ಅಳತೆ ಮಾಡಿದಂತೆ ಒಂದೇ ಇಂಚು ಕೂದಲು. ಅದಕ್ಕೆ ತಕ್ಕ ಪ್ಯಾಂಟು, ಶರ್ಟ್‌, ಥಟ್ಟನೆ ಹುಡುಗನಂತೆಯೇ ಕಾಣುತ್ತಾಳೆ. ಆರು ತಿಂಗಳ ಹಿಂದೆ ಎಲ್ಲ ಕೊಂಕಣಿ ಹುಡುಗಿಯರಂತೆ ಇದ್ದ ಈಕೆಯ ಹೆಸರೀಗ ಲೆಫ್ಟಿನೆಂಟ್‌ ಸಂಗೀತಾ ರಾಜಾರಾಂ ಗಾಂವ್ಕರ್‌ ಎಂದಾಗಿದೆ.

ಹೌದು ಆಕೆ ಸೇನೆ ಸೇರಿದ್ದಾಳೆ. ಉತ್ತರಕನ್ನಡ ಜಿಲ್ಲೆಯ ಮೊಟ್ಟಮೊದಲ ಮಹಿಳಾ ಅಧಿಕಾರಿಯಾಗಿ ಸೇನೆಯಲ್ಲಷ್ಟೇ ಅಲ್ಲದೆ ಜಲ್ಲೆಯ ಇತಿಹಾಸದ ಪುಟಗಳಲ್ಲೂ ಸೆಪ್ಟಂಬರ್‌ 2ರಂದು ದಾಖಲೆ ಬರೆದಿದ್ದಾಳೆ. ಕಾರವಾರದ ಬಾಡದಲ್ಲಿರುವ ಶಿವಾಜಿ ಹೈಸ್ಕೂಲಿನ ಮುಖ್ಯ ಶಿಕ್ಷಕರಾಗಿರುವ ರಾಜಾರಾಂ ಗಾವ್ಕರ್‌ ಅವರ ಮೂರನೇ ಪುತ್ರಿ ಸಂಗೀತಾ, ಪಿಯುಸಿವರೆಗೆ ಕಾರವಾರದಲ್ಲೇ ಓದು, ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್‌ ಮುಗಿಸಿ ಸ್ವಲ್ಪ ಕಾಲ ಖಾಸಗಿ ಸಂಸ್ಥೆಗಳಲ್ಲಿ ಕೆಲಸ. ಈ ವರ್ಷದ ಮೊದಲ ಭಾಗದಲ್ಲಿ ಸೇನೆಗೆ ಆಯ್ಕೆ. ಈಗ ಸಂಗೀತಾ ತರಬೇತಿ ಮುಗಿಸಿಕೊಂಡು ಬಂದಿದ್ದಾಳೆ.

ಆಯ್ಕೆ ಕಠಿಣವಾಗಿತ್ತು : ಮೊದಲು ಸೇನೆ ಸೇರುವ ಯೋಚನೆಯೇನೂ ಇರಲಿಲ್ಲ. ಕಾರ್ಗಿಲ್‌ ಯುದ್ಧ ಸ್ಫೂರ್ತಿಯಾಯಿತು. ಅದೇ ವೇಳೆಗೆ ಸೇನೆಗೆ ಮಹಿಳಾ ಅಧಿಕಾರಿಗಳ ಭರ್ತಿಯೂ ನಡೆಯಿತು. ಆಯ್ಕೆ ಕಠಿಣವಾಗಿತ್ತು. ಬೆಂಗಳೂರು, ಅಹಮದಾಬಾದ್‌ ಮುಂತಾದ ಕಡೆ ನಡೆದ ಅರ್ಹತಾ ಸುತ್ತುಗಳು ತುಂಬಾ ಕಷ್ಟದಿಂದ ಕೂಡಿದ್ದವು. ನಂತರ ಚೆನ್ನೈನ ಆಫೀಸರ್ಸ್‌ ಟ್ರೆೃನಿಂಗ್‌ ಅಕಾಡೆಮಿಯಲ್ಲಿ ಆರು ತಿಂಗಳ ತರಬೇತಿ. ತರಬೇತಿ ಮುಗಿಸಿ ಹೊರಬರುವವರೆಗೂ ನಾವು ಹುಡುಗಿಯರು ಎಂದು ನೆನಪಿಸಿಕೊಳ್ಳುವ ಒಂದೇ ಒಂದು ಘಟನೆಗಳೂ ನಡೆಯಲಿಲ್ಲ ಎನ್ನುತ್ತಾಳೆ ಸಂಗೀತಾ.

English summary
First Girl army officer from Karwar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X