Get Updates
Get notified of breaking news, exclusive insights, and must-see stories!

ಗೋವಾಗೆ ಹೋಗೋಣ ಬರುತ್ತೀರಾ ?

ಕಡಮೆ ವಿದ್ಯಾಭ್ಯಾಸ, ಫ್ಯಾಕ್ಟರಿ ಕೆಲಸ, ಸಸ್ತಾ ಮಾಲು - ಗೋವೆಯಲ್ಲಿ ಮಾಮೂಲು

ಇತ್ತೀಚೆಗೆ ಗೋವಾದಲ್ಲಿ ಒಂದು ಸಮೀಕ್ಷೆ ನಡೆಸಲಾಯಿತು. ಅದರ ಪ್ರಕಾರ ಗೋವಾದ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಯದ್ವಾತದ್ವಾ ಕುಡಿಯುತ್ತಿದ್ದಾರೆ. ಮಿತಿಮೀರಿದ ಚಟದಿಂದ ತಲೆ ಎತ್ತುವ ಎಲ್ಲ ಸಮಸ್ಯೆಗಳು ಅಲ್ಲಿ ಈಗ ಕಾಣಿಸಿಕೊಳ್ಳುತ್ತಿವೆ. ಕುಡಿಯುತ್ತಾರೆ ಅಂದರೆ ಮನೆಯಲ್ಲಲ್ಲ, ಆಫೀಸಿನಲ್ಲಿ, ಫ್ಯಾಕ್ಟರಿಯಲ್ಲಿ, ಅವರು ಕೆಲಸ ಮಾಡುವ ಯಾವುದೇ ಜಾಗೆಯಲ್ಲಿ. ಈ ಸಮಸ್ಯೆಯ ಅಧ್ಯಯನಕ್ಕೆಂದೇ ನಡೆಸಲಾದ ಸಮೀಕ್ಷೆ ಯನ್ನು ಸೆಮಿನಾರ್‌ವೊಂದರಲ್ಲಿ ಮಂಡಿಸಲಾಯಿತು.

ಇಂಟರ್‌ನ್ಯಾಷನಲ್‌ ಸೆಂಟರ್‌ ಆಫ್‌ ಗೋವಾ ಸಂಸ್ಥೆಯಲ್ಲಿ ‘ಆಲ್‌ಕೋಹಾಲ್‌ ಯೂಸ್‌ ಇನ್‌ ದಿ ವರ್ಕ್‌ ಪ್ಲೇಸ್‌ ’

ವಿಷಯ ಕುರಿತು ಸೆಮಿನಾರ್‌ ಚಿಂತನ ಮಂಥನ ನಡೆಸಿತು. ಮೆಲ್‌ವಿನ್‌ ಸಿಲ್ವ ಮತ್ತು ಗೌರೀಶ್‌ ಗೌನೆಕರ್‌ ಪ್ರಬಂಧ ಮಂಡಿಸಿ ಆಲ್‌ಕೊಹಾಲ್‌ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಿದರು. ಸಮೀಕ್ಷೆಗಾಗಿ 1000 ಕೈಗಾರಿಕೆಗಳು ಮತ್ತಿತರ ಉದ್ದಿಮೆಗಳನ್ನು ಆರಿಸಿಕೊಳ್ಳಲಾಗಿತ್ತು. ಅನಾಹುತ ಮದ್ಯಪಾನ ಎಂದರೆ ಪ್ರತಿದಿನ 60 ಎಂ ಎಲ್‌ ಗಿಂತ ಹೆಚ್ಚು ಕುಡಿಯುವವರು (ಗಂಡಸರು) 40 ಎಂಎಲ್‌ ಗಿಂತ ಹೆಚ್ಚು ಕುಡಿಯುವವರು (ಹೆಂಗಸರು) . ಗಮನಾರ್ಹ ಸಂಗತಿಯೆಂದರೆ ಕುಡಿತದ ಚಟಕ್ಕೆ ಬಲಿಯಾದ ಕಾರ್ಮಿಕರು 9ನೆ ಇಯತ್ತೆಗಿಂತ ಕಡಿಮೆ ಓದಿದವರು, ಮತ್ತು ಹೆಚ್ಚಾಗಿ ಕ್ಯಾಥೊಲಿಕ್‌ ಸಮುದಾಯಕ್ಕೆ ಸೇರಿದವರು . ಅಧ್ಯಯನದ ಪ್ರಕಾರ ಹಿಂದುಗಳಿಗಿಂತ ಕ್ಯಾಥೊಲಿಕರು ಕುಡಿತದಿಂದಾಗುವ ತೊಂದರೆಗಳಿಗೆ ಹೆಚ್ಚಾಗಿ ಸಿಲುಕುತ್ತಾರೆ (ಶೇ1. 3 ರಷ್ಟು ಹೆಚ್ಚು ) ಅನಾರೋಗ್ಯ ಕಾರಣಗಳಿಂದಾಗಿ ದವಾಖಾನೆಗೆ ದಾಖಲಾಗುವವರ ಸಂಖ್ಯೆ ಕೂಡ ಹೆಚ್ಚಿದ್ದು ಇವರೆಲ್ಲರೂ ಮದ್ಯಪಾನ ಚಟಕ್ಕೆ ತುತ್ತಾದವರೇ (ಶೇ 1.9)

ಸಂಸ್ಥೆಯು ಸದ್ಯದಲ್ಲೇ ಇನ್ನೊಂದು ಸಮೀಕ್ಷೆ ನಡೆಸುವ ಕಾರ್ಯಕ್ರಮ ಹಾಕಿಕೊಂಡಿದೆ. ಕುಡಿಯುವವರು, ಕುಡಿಯದವರು ಹೀಗೆ 100 ಜನರ ಎರಡು ಗುಂಪು ಮಾಡಿ ಅವರ ಚಟ, ಅದರಿಂದಾಗುವ ತೊಂದರೆ ಮತ್ತು ಕುಡಿಯದವರಾಗಿದ್ದರೆ ಅವರ ಆದಾಯ ಖರ್ಚು ನೆಮ್ಮದಿ ಸಂತೋಷ ಹೀಗೆ ಅಧ್ಯಯನ ಸಾಗುತ್ತದೆ.

ಪೋರ್ಚುಗೀಸರ ವಸಾಹತು ಪ್ರಾಂತ್ಯವಾಗಿದ್ದ ಗೋವಾದಲ್ಲಿ ಮದ್ಯಪಾನ ಒಂದು ಜೀವನ ಶೈಲಿ. ಕೈಯಲ್ಲಿ ಬಾಟಲಿಗಳನ್ನು ಹಿಡಿದು ರಸ್ತೆಯಲ್ಲಿ ನಡೆದು ಹೋಗುವುದು ಅಲ್ಲಿ ಸಾಮಾನ್ಯ ದೃಶ್ಯ. ನಾಜೂಕಾಗಿ ಕುಡಿದು ವಯನಾದ ಜೀವನ ನಡೆಸುವವರು ಹೇರಳವಾಗಿದ್ದಾರೆ. ಆದರೆ ಮುಖ್ಯವಾಗಿ ವಲಸೆ ಬಂದ ಕಾರ್ಮಿಕರು ಕುಡಿದು ರಸ್ತೆಯಲ್ಲಿ ಬೀಳುವಂಥ ಸಮಾಚಾರ ಮಾತ್ರ ಖೇದಕರ ಎನ್ನುತ್ತಾರೆ ಗೋವೆಯ, ಹಳೆಯ ನಿವಾಸಿಗಳು. ಗೋವೆಯ ಈ ಹಿನ್ನೆಲೆಯಲ್ಲಿ ನಮ್ಮ ಇವತ್ತಿನ ಕುತೂಹಲ ಎಂದರೆ, ಯಾವುದಾದರೊಂದು ಸಂಸ್ಥೆ ಬೆಂಗಳೂರಿನಲ್ಲೂ ಇಂಥದೊಂದು ಸಮೀಕ್ಷೆ ನಡೆಸಬೇಕು. ಫಲಿತಾಂಶಕ್ಕೆ ನಾವು ಕುತೂಹಲದಿಂದ ಎದುರು ನೋಡುತ್ತಿರಬೇಕು.

backಮುಖಪುಟ / ನೋಡು ಬಾ ನಮ್ಮೂರ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+