ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ಪೊಲೀಸ್‌ ಸಿಬ್ಬಂದಿಯ ಕೊರತೆ : ಮಡಿಯಾಳ್‌

By Staff
|
Google Oneindia Kannada News

ಬೆಂಗಳೂರು : ನಗರದಲ್ಲಿ ಹೆಚ್ಚುತ್ತಿರುವ ಸುಲಿಗೆ - ಕಳ್ಳತನ ನಿಗ್ರಹಿಸಲು ಸಾಕಷ್ಟು ಪೊಲೀಸ್‌ ಸಿಬ್ಬಂದಿ ಇದ್ದಾರೆ ಎಂದು ನಿಮಗನ್ನಿಸುತ್ತದೆಯೇ ? ಇಲ್ಲ ಎಂದು ನೀವು ಭಾವಿಸಿದರೆ ಅದರಲ್ಲಿ ತಪ್ಪೇನಿಲ್ಲ. ನಗರ ಪೊಲೀಸ್‌ ಆಯುಕ್ತರೂ ಹೆಚ್ಚೂ ಕಡಿಮೆ ಈ ಮಾತನ್ನೇ ಬೇರೆ ಶಬ್ದಗಳಲ್ಲಿ ಆಡಿದ್ದಾರೆ.

ಮಡಿಯಾಳ್‌ ಅವರ ರೀತ್ಯ ಬೆಂಗಳೂರು ನಗರಕ್ಕೆ 1500ರಿಂದ 2000 ಪೊಲೀಸ್‌ ಸಿಬ್ಬಂದಿಯ ಅಗತ್ಯ ಇದೆ. ಈ ಸಂಬಂಧ ಶೀಘ್ರದಲ್ಲೇ 500 ಸಿವಿಲ್‌ ಪೇದೆಗಳ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ರಾಜ್ಯ ಸರಕಾರ ಸಹ ಈ ನೇಮಕಾತಿಗೆ ತನ್ನ ಅನುಮೋದನೆ ನೀಡಿದೆ. ಆದರೆ, ಗ್ರಾಮೀಣ ಕೃಪಾಂಕದ ವಿವಾದದಿಂದಾಗಿ ನೇಮಕಾತಿ ವಿಳಂಬವಾಗಿದೆ ಎಂದೂ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಗ್ರಾಮೀಣ ಕೃಪಾಂಕದ ಸಮಸ್ಯೆ ಪರಿಹಾರವಾದ ತತ್‌ಕ್ಷಣವೇ 500 ಪೇದೆಗಳ ನೇಮಕ ನಡೆಯಲಿದೆ. ನಗರ ಹೊರವಲಯಗಳಲ್ಲಿ ಪೊಲೀಸ್‌ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸುವ ಅಗತ್ಯ ಇದೆ ಎಂದು ಹೇಳಿದ್ದಾರೆ. ನಗರದಲ್ಲಿ ಇನ್ನೂ 8 ಹೊಸ ಪೊಲೀಸ್‌ ಠಾಣೆಗಳನ್ನು ಸ್ಥಾಪಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಇದಕ್ಕೆ ಇನ್ನೂ ಅಂಗೀಕಾರ ದೊರೆತಿಲ್ಲ. ತಾವು ಪೊಲೀಸ್‌ ಕಮೀಷನರ್‌ ಆಗಿ ಅಧಿಕಾರ ಪಡೆದ ತರುವಾಯ ಯಾವುದೇ ಹೊಸ ಠಾಣೆಗೆ ಪ್ರಸ್ತಾವನೆ ಕಳಿಸಿಲ್ಲ. ಹಿಂದಿನ ಆಯುಕ್ತರು ಕಳುಹಿಸಿದ್ದ 8 ಠಾಣೆಗಳ ಪ್ರಸ್ತಾವನೆ ಮಂಜೂರಾತಿಗಾಗಿ ಕಾಯುತ್ತಿದೆ ಎಂದು ಹೇಳಿದರು.

ನಗರದಲ್ಲಿ ಹೆಚ್ಚುತ್ತಿರುವ ಸುಲಿಗೆ - ದರೋಡೆಗಳ ಬಗ್ಗೆ ಗಮನ ಸೆಳೆದಾಗ, ಬೆಂಗಳೂರು ನಗರದಲ್ಲಿ ಹಾಲಿ 86 ಪೊಲೀಸ್‌ ಠಾಣೆಗಳಿವೆ. ರಾಷ್ಟ್ರೀಯ ಪೊಲೀಸ್‌ ಆಯೋಗದ ಶಿಫಾರಸಿನ ರೀತ್ಯ ನಗರಕ್ಕೆ ಇನ್ನೂ 22 ಪೊಲೀಸ್‌ ಠಾಣೆಗಳ ಅಗತ್ಯ ಇದೆ ಎಂದು ಮಡಿಯಾಳ್‌ ತಿಳಿಸಿದರು.

ಹೊಯ್ಸಳಕ್ಕೂ ಸಿಬ್ಬಂದಿ ಕೊರತೆ : ನಗರದಲ್ಲಿ 56 ಹೊಯ್ಸಳ ವಾಹನಗಳಿವೆ. ಒಂದು ವಾಹನಕ್ಕೆ ತಲಾ ಐವರು ಸಿಬ್ಬಂದಿ ಎಂದರೂ ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸಲು ಕನಿಷ್ಠ 15 ಪೊಲೀಸ್‌ ಸಿಬ್ಬಂದಿ ಅಗತ್ಯ ಇದೆ. ಆದರೆ, ನಗರದಲ್ಲಿ ಪೊಲೀಸ್‌ ಸಿಬ್ಬಂದಿಯ ಕೊರತೆ ಇದೆ ಎಂದು ಅವರು ಹೇಳಿದರು. ನಗರದ ಜನಸಂಖ್ಯೆಗನುಗುಣವಾಗಿ ಪೊಲೀಸ್‌ ಸಿಬ್ಬಂದಿ ಇಲ್ಲ ಎಂಬುದನ್ನು ಅವರು ಒಪ್ಪಿಕೊಂಡರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X