ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಳ್ಳಾರಿಯಲ್ಲಿ ಸಾಲಗಾರ ರೈತರಿಬ್ಬರ ಸಾವು
ಬಳ್ಳಾರಿ: ಇಲ್ಲಿನ ಕುರುಗೋಡು ಸಮೀಪ ಬೆಳೆ ಹಾನಿಯಿಂದಾದ ನಷ್ಟವನ್ನು ತುಂಬಲಾಗದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಸಿಂಧುವಾಲ ಚಂದ್ರಪ್ಪ (40) ಅವರ ಬೆಳೆ, ಕಳೆದ ಎರಡು ವರ್ಷಗಳಿಂದ ಸತತವಾಗಿ ಹಾನಿಗೀಡಾಗಿದ್ದು, ಬೆಳೆ ಸಾಲವನ್ನು ಭರಿಸಲಾಗದೆ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನೊಂದು ಪ್ರಕರಣದಲ್ಲಿ ಇಲ್ಲಿನ ಕಾಲ್ಕಂಬ ನಿವಾಸಿ, ಸೋಮಲಿಂಗಪ್ಪ(45) ಎಂಬವರು ಬೆಳೆಗೆ ಕೀಟನಾಶಕ ಸಿಂಪಡಿಸುತ್ತಿದ್ದ ವೇಳೆ, ವಿಷಗಾಳಿ ಉಸಿರಾಡಿರುವುದರಿಂದ ಮೃತರಾಗಿದ್ದಾರೆ. ಚಂದ್ರಪ್ಪ ಅವರೂ ಬ್ಯಾಂಕ್ ಮತ್ತು ಖಾಸಗಿ ಸಂಸ್ಥೆಗಳಿಂದ 50 ಸಾವಿರ ರೂಪಾಯಿ ಲೋನ್ ಪಡೆದಿರುವುದು ತಿಳಿದು ಬಂದಿದೆ.
(ಇನ್ಫೋ ವಾರ್ತೆ)