ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಮುಸ್ಲಿಂ ಮಹಿಳೆಯರಿಗೆ ವಿಚ್ಛೇದನದ ಹಕ್ಕು?

By Staff
|
Google Oneindia Kannada News

ನವದೆಹಲಿ : ಪ್ರಪ್ರಥಮ ಬಾರಿಗೆ ಭಾರತದಲ್ಲಿನ ಮುಸ್ಲಿಂ ಮಹಿಳೆಯರು ತಮ್ಮ ಪತಿರಾಯರಿಗೆ ವಿವಾಹ ವಿಚ್ಛೇದನ ನೀಡುವ ಹಕ್ಕನ್ನು ಪಡೆಯುವ ಸಾಧ್ಯತೆ ಇದೆ.

ತಲಾಖ್‌, ತಲಾಖ್‌, ತಲಾಖ್‌ ಎಂದು ಹೇಳಿ ದಿಢೀರನೆ ವಿವಾಹ ವಿಚ್ಛೇದನ ಪಡೆವ ಹಕ್ಕು ಇನ್ನು ಮುಂದೆ ಮುಸ್ಲಿಂ ಗಂಡಸರಿಗೆ ಇಲ್ಲವಾಗುವ ಸಾಧ್ಯತೆಗಳೂ ಇವೆ. ವಿಚ್ಛೇದನವನ್ನು ವಾಸ್ತವ ನೆಲೆಗಟ್ಟಿನಲ್ಲಿ ಪಡೆಯಬೇಕೆಂಬ ಸಲಹೆ ಈಗ ಒಡಮೂಡಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಈ ಅಂಶಗಳು ಆಲ್‌ ಇಂಡಿಯಾ ಮುಸ್ಲಿಂ ಪರ್ಸನಲ್‌ ಲಾ ಬೋರ್ಡ್‌ (ಎಐಎಂಪಿಎಲ್‌ಬಿ) ಮಾಡಿರುವ ಶಿಫಾರಸುಗಳಲ್ಲಿ ಅಡಕವಾಗಿವೆ. ಈ ಲಾ ಬೋರ್ಡ್‌ ಮುಸ್ಲಿಮರ ಧಾರ್ಮಿಕ ಹಾಗೂ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದಂತೆ ಅತ್ಯುನ್ನತ ನಿರ್ಣಯ ಕೈಗೊಳ್ಳುವ ಸಂಸ್ಥೆಯಾಗಿದೆ. ಈ ಮಂಡಲಿಯು ಮುಸ್ಲಿಮರ ಮದುವೆಯ ಕರಾರಿಗೆ ಸಂಬಂಧಿಸಿದಂತೆ ಹೊಸ ನಿಖಾನಾಮದ ಕರಡನ್ನು ಸಹ ಸಿದ್ಧಪಡಿಸಿದೆ.

ಈ ಶಿಫಾರಸುಗಳು ಕಾನೂನಾಗಿ ಜಾರಿಗೆ ಬರುವ ಮುನ್ನ ಇದಕ್ಕೆ ಮುಸ್ಲಿಮ್‌ ಧರ್ಮಗುರುಗಳ ಸಮ್ಮತಿ ಬೇಕೇಬೇಕು. ಮುಸ್ಲಿಂ ಮಹಿಳೆಯಾಬ್ಬಳು ತನ್ನ ಪತಿಯಿಂದ ವಿಚ್ಛೇದನ ಪಡೆಯಲು ಐದು ಕಾರಣಗಳನ್ನು ಮಂಡಳಿ ತನ್ನ ಸಲಹೆಗಳಲ್ಲಿ ಸೂಚಿಸಿದೆ. ಅವುಗಳೆಂದರೆ: ಆಕೆಯ ಪತಿ ಎರಡು ವರ್ಷಗಳ ಕಾಲ ಕಣ್ಮರೆಯಾದರೆ ಮತ್ತು ಪತ್ತೆಯೇ ಆಗದಿದ್ದರೆ, ಆತ ತನ್ನ ಪತ್ನಿಯ ಜೀವನೋಪಾಯಕ್ಕಾಗಿ ಒಂದು ವರ್ಷಗಳ ಕಾಲ ಪರಿಹಾರ ನೀಡಲು ನಿರಾಕರಿಸಿದರೆ, ಆತ ಒಂದೊಮ್ಮೆ ಹುಚ್ಚನಾಗಿದ್ದರೆ, ದಂಪತಿಗಳು ಒಂದು ವರ್ಷಗಳ ಕಾಲ ಪ್ರತ್ಯೇಕವಾಗಿದ್ದರೆ, ಆಕೆಯ ಪತಿ ಘೋರ ಗುಪ್ತ ರೋಗಗಳಿಂದ ಬಳಲುತ್ತಿದ್ದರೆ ಅಥವಾ ಪತ್ನಿಗೆ ಕ್ರೂರವಾಗಿ ಹಿಂಸಿಸುತ್ತಾ ಜೀವ ಬೆದರಿಕೆ ಒಡ್ಡುತ್ತಿದ್ದರೆ ಆಕೆ ವಿಚ್ಛೇದನಕ್ಕೆ ಮುಂದಾಗಬಹುದು.

ಮುಸ್ಲಿಂ ಪುರುಷರು ತಲಾಖ್‌ ಹೇಳುವ ವಿಷಯಕ್ಕೂ ಕೆಲವು ನಿಬಂಧನೆಗಳನ್ನು ಮಂಡಲಿ ಸೂಚಿಸಿದೆ. ಈ ಶಿಫಾರಸುಗಳ ನೀಲನಕ್ಷೆ ಮಂಡಳಿಯ ಅಧ್ಯಕ್ಷ ಮೌಲಾನಾ ಮುಜಾಹಿದುಲ್‌ ಇಸ್ಲಾಮ್‌ ಕ್ವಾಸ್ಮಿ ಅವರನ್ನೊಳಗೊಂಡ ಪಂಚ ಸದಸ್ಯರ ಪೀಠದಿಂದ ಅಂತಿಮ ರೂಪ ಪಡೆದಿದೆ. ಈ ಶಿಫಾರಸುಗಳಿಗೆ ಸಲಹೆ - ಸೂಚನೆಗಳನ್ನು ಮಂಡಲಿ ಆಹ್ವಾನಿಸಿದೆ. ಅಕ್ಟೋಬರ್‌ 29ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸರ್ವಸದಸ್ಯರ ಸಭೆ ಶಿಫಾರಸ್ಸುಗಳಿಗೆ ಒಪ್ಪಿಗೆ ನೀಡಬೇಕಿದೆ.

( ಐಎಎನ್‌ಎಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X