ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಜನಿಕಾಂತ್‌ ಬೆಂಗಳೂರು ಭೇಟಿ ಉದ್ದೇಶ ವೆರಿ ಸಿಂಪಲ್‌ !

By Super
|
Google Oneindia Kannada News

ಪ್ರ-ತಿಬಾರಿ ಗುಟ್ಟಾ-ಗಿ ಬಂದು -ಹೋ-ಗು-ತ್ತಿದ್ದ ಅಭ್ಯಾ-ಗ-ತ ರಜ-ನಿ-ಕಾಂ-ತ್‌ ಬು-ಧ-ವಾ-ರ ಮುಂದಾ-ಗಿ ಹೇಳಿ ಅತಿ-ಥಿ-ಯಂ-ತೆ ಬಂದ-ರು. ರಜ-ನಿ-ಯ ಆಗ-ಮ-ನ-ದ ಸುದ್ದಿ ಕೇಳುತ್ತಲೇ ರಾಜ್‌ ಬಿಡುಗಡೆ ವಿಳಂ-ಬವಾ-ಗು-ತ್ತಿ-ದೆ ಎಂದು ಕುದಿಯುತ್ತಿದ್ದ ಮಂದಿ ಅರ್ಧ ತಣ್ಣಗಾದರು.

ರಜನಿ ಸುದ್ದಿ-ಗಾ-ರ-ರ ಮಾತಿ-ಗೆ ಸಿಕ್ಕಿ-ದ್ದು ಐ-ದೇ ನಿಮಿ-ಷ. ಮಹತ್ವದ ಹೇಳಿಕೆ ನೀಡುತ್ತಾರೆಂದು ಮುಖ್ಯ-ಮಂ-ತ್ರಿ-ಗ-ಳ ಮನೆಯೆದು-ರು ತಾಸುಗ-ಟ್ಟ-ಲೆ ಕಾ-ದ -ಸು-ದ್ದಿ-ಗಾ-ರ-ರಿ-ಗೆ ಸಿಕ್ಕಿ-ದ್ದು ಗೋಪಾ-ಲ್‌ ಮಾತ್ರ. ರಜನಿ ಯಾರ ಕಣ್ಣಿಗೂ ಬೀಳಲಿಲ್ಲ. ಕೊನೆಗೆ ರಾಜ್‌ ಮನೆಗೆ ಕಾಲಿಡುವ ಹೊತ್ತಿಗೆ ಮಾತಿಗೆ ಸಿಕ್ಕಿದರು. ರಾಜ್‌ ಬಿಡುಗಡೆಯ ಬಗ್ಗೆ , ವೀರಪ್ಪನ್‌ ಬಗ್ಗೆ ಎಲ್ಲರಿಗೆ ಎಷ್ಟು ಗೊತ್ತೋ, ರಜನಿ ಹೇಳಿ-ದ್ದೂ ಅಷ್ಟೇ.

ರಜ-ನಿ ಬೆಂಗ-ಳೂ-ರಿ-ಗೆ ಬಂದಿ-ದ್ದು-ದು ಸ್ವಂತ ಹಿತಾ-ಸ-ಕ್ತಿ-ಗಾ-ಗಿ ಎ-ನ್ನು-ವು-ದು ಅವ-ರ ಮಾತು-ಗ-ಳಿಂ-ದ ಸ್ಪಷ್ಟ-ವಾ-ಗು-ತ್ತಿ-ತ್ತು . ಅವ-ರ ಮಾತು-ಗ-ಳಲ್ಲಿ ಕನ್ನಡ- ತಮಿಳು ಜನಾಂಗೀಯ ದ್ವೇಷ ಭುಗಿಲೇಳದಂತೆ ಕಾಯ್ದಿ-ಡುವ ಕಾತ-ರ-ವಿ-ತ್ತು ಅರ್ಥಾ-ತ್‌ ರಾಜ್ಯ-ದ-ಲ್ಲಿ-ನ ತಮಿಳರ ಪಾಲಿಗೆ ದೇವರಾಗುವ ಹಂಬ-ಲ ಅವ-ರಿ-ಗಿ-ತ್ತು .

ಉಳಿ-ದಂ-ತೆ ತಮಿಳು ಚಿತ್ರ-ರಂ-ಗ-ದ ಮೇರು-ನ-ಟ ಕನ್ನ-ಡ-ದ ಮೇರು-ನ-ಟ-ನ ಬಗ್ಗೆ ಹೇಳಿದ್ದಿ-ಷ್ಟು- ರಾಜ್‌ಕುಮಾರ್‌ ಬಗ್ಗೆ ತಮಿಳುನಾಡಿನ ಮಂದಿಗೂ ಅಪಾರ ಗೌರವ ಮೂಡಿದೆ. ಅವರನ್ನು ಎರಡು ಮೂರು ಸಾರಿ ಟಿವಿಯಲ್ಲಿ ನೋಡಿದ ಮೇಲಂತೂ ಎಲ್ಲರೂ ಅವರ ಆರಾಧಕರಾಗಿದ್ದಾರೆ. ಅವರ ಸರಳತೆ, ಸಜ್ಜ-ನಿ-ಕೆ ಎಲ್ಲರಿಗೂ ಇಷ್ಟವಾಗಿದೆ. ಹೀಗಾಗಿ ತಮಿಳುನಾಡಿನ ಮಂದಿ ಕೂಡ ರಾಜ್‌ಕುಮಾರ್‌ ಬೇಗ ಬರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮನುಷ್ಯ ಪ್ರಯತ್ನ ಏನಾಗುತ್ತೆ ಅಂತ ನನಗೆ ಗೊತ್ತಿಲ್ಲ. ಆದರೆ ಎಲ್ಲರ ಪ್ರಾರ್ಥನೆಯಂತೂ ದೇವರನ್ನು ತಲುಪುತ್ತದೆ. ರಾಜ್‌ ಬೇಗ ಮರಳಿ ಬರುತ್ತಾರೆ .

ರಜ-ನಿ ಹೇಳಿ-ದ್ದ-ನ್ನೇ ಮುಖ್ಯ-ಮಂ-ತ್ರಿ ಕೃ-ಷ್ಣ-ರಾ-ದಿ-ಯಾ-ಗಿ ಬನ-ಶಂ-ಕ-ರಿ-ಯ ಪೂಜಾ-ರಿ-ಯ-ವ-ರೆ-ಗೆ ಎಲ್ಲ-ರೂ ಹೇಳಿ-ದ್ದಾ-ರೆ. ಇಷ್ಟು ಹೇಳ-ಲಿ-ಕ್ಕೆ ರಜನಿ -ಚೆ-ನ್ನೈ-ನಿಂ-ದ ಬೆಂಗ-ಳೂ-ರಿ-ಗೆ -ಪಾ-ದ ಬೆಳೆ-ಸ-ಬೇ-ಕಿ-ತ್ತೆ?

ರಜ-ನಿ ಪ್ರಯಾ-ಣ-ದ ಹಿಂದಿ-ನ ಉದ್ದೇ-ಶ ಯಾರಿ-ಗಾ-ದ-ರೂ ಅರ್ಥವಾ-ಗು-ವ-ಷ್ಟು ಸರ-ಳ. ಕರ್ನಾಟಕ ಮಂದಿ ಸಿಡಿದೇಳುತ್ತಿರುವುದನ್ನು ಸರಕಾರ ತಡೆಯುತ್ತಿದೆ. ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಈ ನಿಟ್ಟಿ-ನ-ಲ್ಲಿ ರಾಘವೇಂದ್ರ ರಾಜ್‌ಕುಮಾರ್‌, ಪಾರ್ವ-ತ-ಮ್ಮ .. ಎಲ್ಲರನ್ನೂ ಸರ್ಕಾ-ರ ಬಳ-ಸಿ-ಕೊ-ಳ್ಳು-ತ್ತ-ದೆ. ಕೊನೆ-ಗೆ ರಾಜ್‌ಕುಮಾರ್‌ ಮಾತನಾಡಿದ ಕ್ಯಾಸೆಟ್‌ - ಕೂ-ಡ ಸರ್ಕಾ-ರ-ಕ್ಕೆ ಗುರಾ-ಣಿ-ಯಾ-ಗು-ತ್ತ-ದೆ. ಬುಧ-ವಾ-ರ ಬೆಂಗ-ಳೂ-ರಿ-ಗೆ ಬಂದು- ಹೋ-ದ ರಜನಿಕಾಂತ್‌ ಕೂಡ ಮಾಡಿ-ದ್ದು ಅಷ್ಟೆ !

-ಈ ನಡು-ವೆ ಯಾವು-ದ-ನ್ನೂ ಹಚ್ಚಿ-ಕೊ-ಳ್ಳ-ದ ಬಡ ಬೋರೇ-ಗೌ-ಡ ಈ ನಾಟ-ಕ-ಕ್ಕೆ-ಲ್ಲ ಕೊನೆಯೆಂದು ? ಎಂದು ಪರ-ದೆ-ಯ-ತ್ತ-ಲೇ ಮುಖ ಮಾಡಿ-ದ್ದಾ-ನೆ. ಉತ್ತ-ರ ಬಣ್ಣ ಹಚ್ಚಿ-ಕೊಂ-ಡ-ವ-ರ-ಲ್ಲಿ-ದೆ.

English summary
Why Rajanikant came to Bangalore? Its anybodys guess
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X