Get Updates
Get notified of breaking news, exclusive insights, and must-see stories!

ವೀರಪ್ಪನ್‌ಗೆ ಬಾನುಲಿ ಮನವಿ : ಈಗ ವಕೀಲ ವೇಣುಗೋಪಾಲ್‌ ಸರದಿ

ಬೆಂಗಳೂರು: ರಾಜ್‌ ಹಾಗೂ ಇತರ ಅಪಹೃತರನ್ನು ಬಿಡುಗಡೆ ಮಾಡುವಂತೆ ರಾಜ್ಯದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣಾ , ರಾಜ್‌ ಕುಟುಂಬದ ಸದಸ್ಯರೂ ಸೇರಿದಂತೆ ಅನೇಕರು ವೀರಪ್ಪನ್‌ಗೆ ಮನವಿ ಮಾಡುತ್ತಿರುವ ಬೆನ್ನಲ್ಲೇ ಗುರುವಾರ ವಕೀಲ ವೇಣುಗೋಪಾಲ್‌ ವೀರಪ್ಪನ್‌ಗೆ ಮನವಿ ಮಾಡಿದ್ದಾರೆ.

ಈ ವೇಣುಗೋಪಾಲ್‌, ವೀರಪ್ಪನ್‌ ಬಿಡುಗಡೆ ಮಾಡುವಂತೆ ಕೇಳಿರುವ ಟಾಡಾ ಆರೋಪಿಗಳ ಪರ ಯಾವುದೇ ಶುಲ್ಕ ಪಡೆಯದೆ ವಾದಿಸುತ್ತಿರುವ ವಕೀಲರು. ವಕೀಲರನ್ನು ದೂರವಾಣಿ ಮಾಲಕ ಸಂಪರ್ಕ ಮಾಡಿರುವ ಬೆಂಗಳೂರು ಆಕಾಶವಾಣಿ ಅವರ ಮನವಿಯನ್ನು ದೂರವಾಣಿಯಲ್ಲೇ ಮುದ್ರಿಸಿಕೊಂಡು ಗುರುವಾರ ಸಂಜೆ 6.50ಕ್ಕೆ ಪ್ರಸಾರ ಮಾಡಿತು.

ಬೇಡಿಕೆಯಂತೆ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳು ಟಾಡಾ ಆರೋಪಿಗಳು ಮತ್ತು ತಮಿಳು ಉಗ್ರವಾದಿಗಳನ್ನು ಬಿಡುಗಡೆಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಿವೆ. ಆದರೆ ಸುಪ್ರೀಂಕೋರ್ಟ್‌ ಪ್ರಕ್ರಿಯೆಗೆ ತಡೆ ನೀಡಿದೆ. ಎಲ್ಲ ಕಾನೂನುಬದ್ಧ ವಿಚಾರಣೆಗಳು ನಡೆಯಲು ಸಾಮಾನ್ಯವಾಗಿ ಕಾಲಾವಕಾಶ ಬೇಕಾಗುತ್ತದೆ. ಹಾಗಾಗಿ ಅಲ್ಲಿಯವರೆಗೆ ಒತ್ತೆಯಾಳುಗಳನ್ನು ಇಟ್ಟುಕೊಳ್ಳುವುದು ಉಚಿತವಲ್ಲ. ಅದರಲ್ಲೂ ವಯಸ್ಸಾಗಿರುವ ರಾಜ್‌ ಅವರನ್ನು ಇಟ್ಟುಕೊಳ್ಳದೆ ಅವರ ಸಹಚರರೊಟ್ಟಿಗೆ ಶೀಘ್ರ ಕಳಿಸಿಕೊಡಬೇಕೆಂದು ವೇಣುಗೋಪಾಲ್‌ ಮನವಿ ಮಾಡಿದ್ದಾರೆ.

ಕೈದಿಗಳನ್ನು ಬಂಧಿಸಿದ ದಿನದಿಂದಲೂ ತಾವು ಅವರ ಬಿಡುಗಡೆಗೆ ಶ್ರಮಿಸುತ್ತಿದ್ದು , ಕಾನೂನಿನಡಿಯಲ್ಲಿ ಏನು ಬೇಕೋ ಅದನ್ನೆಲ್ಲಾ ಯಾವುದೇ ಶುಲ್ಕ ಪಡೆಯದೆ ಮಾಡಲಾಗುತ್ತಿದೆ. ಅಂಥ ಪ್ರಯತ್ನ ಮುಂದೆಯೂ ಮುಂದುವರಿಯುತ್ತದೆ ಆದ್ದರಿಂದ ದಯಮಾಡಿ ಅಪಹೃತರನ್ನು ಬಿಟ್ಟುಕೊಡಬೇಕೆಂದು ವೇಣುಗೋಪಾಲ್‌ ಕೇಳಿಕೊಂಡಿದ್ದಾರೆ.

ಮುಖಪುಟ / ರಾಜ್‌ ಅಪಹರಣ / ಡಾ. ರಾಜಕುಮಾರ್‌ ಚಿತ್ರಾವಳಿ / ರಾಜಮಾರ್ಗ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+