Get Updates
Get notified of breaking news, exclusive insights, and must-see stories!

ಸಹನೆಗೆ ಮಿತಿಯಿಲ್ಲವೆ ? ಪಾರ್ವ-ತ-ಮ್ಮ ಹತಾ-ಶೆ,ಗೋವಿಂ-ದು ಆಕ್ರೋ-ಶ

ಬೆಂಗ-ಳೂ-ರು : ರಾಜ್‌ ಅಪ-ಹ-ರ-ಣ-ವಾ-ಗಿ -ತಿಂ-ಗ-ಳು ತುಂ-ಬಿ-ದ-ರೂ ಶಾಂತ ಚಿ-ತ್ತ-ತೆ- ಕಳೆ-ದು-ಕೊ-ಳ್ಳ-ದ ಹಾಗೂ ಶಾಂ-ತಿ-ಯಿಂ-ದಿ-ರ-ಲು ಅಭಿ-ಮಾ-ನಿ-ಗ-ಳ-ನ್ನು ಕೋರು-ತ್ತಿ-ದ್ದ ಪಾರ್ವ-ತ-ಮ್ಮ ರಾಜ್‌-ಕು-ಮಾ-ರ್‌ -ಹಾ-ಗೂ ಅ-ಭಿ-ಮಾ-ನಿ-ಗ-ಳ ಸಂಘ-ದ ಅಧ್ಯ-ಕ್ಷ ಸಾ.ರಾ. ಗೋವಿಂ-ದು ಬುಧ-ವಾ-ರ ಮೊದ-ಲ ಬಾರಿ-ಗೆ ಸಾ-ರ್ವಜ-ನಿ-ಕ-ವಾ-ಗಿ ಅಸ-ಹ-ನೆ ವ್ಯಕ್ತ-ಪ-ಡಿಸಿ-ದ್ದಾ-ರೆ.

ಈ ಬಾರಿ ರಾಜ್‌-ರೊಂ-ದಿ-ಗೇ ಗೋಪಾ-ಲ್‌ ಕಾಡಿ-ನಿಂದ ಮರ-ಳು-ತ್ತಾ-ರೆಂ-ದು ನಂಬಿ-ದ್ದ ಪಾರ್ವ-ತ-ಮ್ಮ ಹಾಗೂ ಗೋವಿಂ-ದು ಅವ-ರಿ-ಗೆ ಸಂ-ಧಾ-ನ-ಕಾ-ರ ಬರಿ-ಗೈ-ಯ್ಯ-ಲ್ಲಿ ಮರ-ಳಿರು-ವು--ದು ಆಘಾ-ತ-ವ-ನ್ನುಂ-ಟು ಮಾಡಿ-ದೆ. ಅಪ-ಹ-ರ-ಣ ಪ್ರಕ-ರ-ಣ ಪಡೆ-ದು-ಕೊ-ಳ್ಳು-ತ್ತಿ-ರು-ವ ಹೊಸ ತಿರು-ವು-ಗ-ಳ ಬಗೆ-ಗೆ ಪಾರ್ವ-ತಮ್ಮ ಅಸ-ಹ-ನೆ ವ್ಯಕ್ತ-ಪ-ಡಿ-ಸಿ-ದ್ದಾ-ರೆ. ಇದ-ಕ್ಕೆ-ಲ್ಲಾ ನಿವೃ-ತ್ತ ಎಸ್ಪಿ ಅಬ್ದು-ಲ್‌ ಕರೀಂ ತಳೆ-ದ ನಿಷ್ಠು-ರ ನಿಲು-ವೇ ಕಾರ-ಣ ಎಂದು ವಿಷಾ-ದಿ-ಸಿ-ದ್ದಾ-ರೆ.

ಮಗ-ನ-ನ್ನು ಕಳೆ-ದುಕೊಂ-ಡ ಅವ-ರ ಸಂಕ-ಟ ನನ-ಗೆ ಅರ್ಥ-ವಾ-ಗುತ್ತ-ದೆ. ಆದ-ರೆ, ತ-ಮ್ಮ ನಿರ್ಧಾ-ರ-ದಿಂ-ದ ಮತ್ತೊ-ಬ್ಬ ತಾಯಿ-ಯ ಮಗ-ನ ಜೀವ-ಕ್ಕೆ ಅಪಾ-ಯವಾ-ಗ-ಬ-ಹು-ದೆಂ-ದು- -ಅ-ವ-ರಿ-ಗೇ-ಕೆ ಅನ್ನಿ-ಸು-ತ್ತಿ-ಲ್ಲ . ಇಷ್ಟ-ಕ್ಕೂ ಹೋರಾ-ಟ-ದಿಂ-ದ ಶಕೀ-ಲ್‌ ಅವ-ರೇ-ನೂ ಮರ-ಳಿ ಬರು-ವು-ದಿ-ಲ್ಲ - ಪಾರ್ವ-ತ-ಮ್ಮ-ನ-ವ-ರ ಮಾತು-ಗ-ಳ-ಲ್ಲಿ ಪರಿ-ಸ್ಥಿ-ತಿ ತಮ್ಮ ಕೈಮೀ-ರಿ ಹೋಗು-ತ್ತಿ-ರು-ವ ಆ-ತಂ-ಕ-ವಿ-ತ್ತು . ಅದೇ ದನಿ-ಯ-ಲ್ಲಿ , ಯಜ-ಮಾ-ನ-ರು ಬೇಗ ಮರ-ಳ-ಲಿ ಎಂದು ಪ್ರಾರ್ಥಿ-ಸು-ವು-ದಷ್ಟೇ ನಮ್ಮ ಪಾಲಿ-ಗೆ ಉಳಿ-ದಿ-ರು-ವು-ದು ಎನ್ನು-ತ್ತಾ-ರೆ.

-ಇ-ನ್ನು ದಾರಿ ಕಾಯು-ವು-ದ-ರ-ಲ್ಲಿ ಅರ್ಥ-ವಿ-ಲ್ಲ : -ಪಾ-ರ್ವ-ತ-ಮ್ಮ-ನ-ವ-ರಂ-ತೆ-ಯೇ ಪರಿ-ಸ್ಥಿ-ತಿ ಬಿ-ಗು-ವಾ-ಗು-ತ್ತಿ-ರು-ವ ಬಗೆ-ಗೆ ಸಾ.ರಾ. ಗೋವಿಂ-ದು ಅವ-ರಿ-ಗೂ ಆತಂ-ಕ-ವಿ-ದೆ. ಆದ-ರೆ, ಅವ-ರ ಆತಂ-ಕ ಕೊನೆ-ಗೊಳ್ಳು-ವು-ದು ಪ್ರಾರ್ಥ-ನೆ-ಯ-ಲ್ಲ-ಲ್ಲ , ಆಕ್ರೋ-ಶ-ದ-ಲ್ಲಿ . ರಾಜ್‌ ಅವರನ್ನು ಬಿಡುಗಡೆ ಮಾಡುವಲ್ಲಿ ವಿಫಲವಾಗಿರುವ ಸರಕಾರಗಳ ವಿರುದ್ಧ ಹೋ-ರಾ-ಟ ಅನಿ-ವಾ-ರ್ಯ ಎನ್ನುವ ಇಂಗಿ-ತ-ವ-ನ್ನು ಗೋವಿಂ-ದು ತಮ್ಮ ಮಾತು-ಗ-ಳ-ಲ್ಲಿ ವ್ಯಕ್ತ-ಪ-ಡಿ-ಸು-ತ್ತಾ--ರೆ.

ಕನ್ನ-ಡಿ-ಗ-ರು ಇನ್ನೆ-ಷ್ಟು ದಿನ ತಾಳ್ಮೆ-ಯಿಂ-ದ ಕಾಯು-ವು-ದು. ಅಣ್ಣಾ-ವ್ರ ಬಿಡು-ಗ-ಡೆಗೆ ಹೋರಾ-ಟ ಅನಿ-ವಾ-ರ್ಯ, ಮುಂದಿ-ನ ಅನಾ-ಹು-ತ-ಗ-ಳಿ-ಗೆ ನಾವು ಜವಾ-ಬ್ದಾ-ರ-ರ-ಲ್ಲ ಎಂದ-ವ-ರು ಸ್ಪಷ್ಟ-ವಾ-ಗಿ ಹೇಳು-ತ್ತಾ-ರೆ. ರಾಜಕೀ-ಯ ಅರಿ-ಯ-ದ, ಅಮಾ-ಯ-ಕ-ರಾ-ದ ರಾಜ್‌ ಅವ-ರ ಬಿಡು-ಗ-ಡೆ-ಯ-ಲ್ಲಿ ಕೀಳು ಮಟ್ಟ-ದ ರಾಜ-ಕೀ-ಯ ಮಾಡ-ಲಾ-ಗು-ತ್ತಿ-ದೆ ಎಂದು ನೇರ-ವಾ-ಗಿ ಆರೋ-ಪಿ-ಸು-ತ್ತಾ--ರೆ.

ಮೂರ-ನೇ ಬಾರಿ ಗೋಪಾ-ಲ್‌ -ಬ-ರಿ-ಗೈ-ಯ್ಯ-ಲ್ಲಿ ಮರ-ಳಿ--ದ್ದಾ-ರೆ. ರಾಜ್‌ ಬಿಡು-ಗ-ಡೆಗೆ ಸರ್ಕಾ-ರ ತೆಗೆ-ದು-ಕೊ-ಳ್ಳ-ಲಿ-ರು-ವ ಮುಂದಿ-ನ ಕ್ರಮ ನೋಡಿ ಹೋರಾ-ಟ ರೂಪಿ-ಸ-ಲಾ-ಗು-ವು-ದು. 1991ರಲ್ಲಿ ಕಾವೇ-ರಿ ನೀರಿ-ಗಾ-ಗಿ ಹೋರಾ-ಟ ನಡೆ-ಸಿ--ದ್ದೆವು. ಈಗ ಅಣ್ಣಾ-ವ್ರ ಬಿಡು-ಗ-ಡೆ-ಗಾ-ಗಿ ಹೋರಾ-ಟ ನಡೆ-ಸು-ವ ಕಾಲ ಬಂದಿ-ದೆ. ನಾಡು ನುಡಿ-ಗಾ-ಗಿ ಹೋರಾ-ಡಿ-ದ ರಾಜ್‌ ಬಿಡು-ಗ-ಡೆ ಹೋರಾ-ಟ-ದ-ಲ್ಲಿ ಭಾಗ-ವ-ಹಿ-ಸು-ವು-ದು ಪ್ರತಿ-ಯಾ-ಬ್ಬ ಕನ್ನ-ಡಿ-ಗ-ನ ಆದ್ಯ ಕರ್ತ-ವ್ಯ -ಎಂ-ದು ಗೋವಿಂ-ದು ಹೇಳು-ತ್ತಾ-ರೆ.

ಪಾರ್ವತಮ್ಮ ಮತ್ತು ಸಾ.ರಾ. ಗೋವಿಂ-ದು ಏಕಾ-ಏ-ಕಿ ವ್ಯಕ್ತ-ಪ-ಡಿ-ಸಿ-ರು-ವ ನಿರಾ-ಶೆ, ಆಕ್ರೋ-ಶ ರಾಜ್‌ ಅಪ-ಹ-ರ-ಣ ಪ್ರಕ-ರ-ಣ ದಿನೇ-ದಿ-ನೇ ಪಡೆ-ಯು-ತ್ತಿ-ರು-ವ ಗಂಭೀ-ರ ಸ್ವರೂ-ಪ--ದ ದಿಕ್ಕ-ನ್ನು ಸೂಚಿ-ಸು-ತ್ತ-ದೆ. ಈ -ದಿ-ಕ್ಕ-ನ್ನೆ ಅಭಿ-ಮಾ-ನಿ-ಗ-ಳೂ ಅನು-ಸ-ರಿ-ಸ-ಹೊ-ರ-ಟ-ರೆ, ನಾಡಿನ ನೆಮ್ಮದಿ ಮತ್ತೊಮ್ಮೆ ಕಲಕುತ್ತದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+