ಸೆ. 5ರಿಂದ ರೈತರ ಮನೆ ಬಾಗಿಲಿಗೆ ಕೃಷಿ ಮಾಹಿತಿ ಹೊತ್ತ ವ್ಯಾನ್
ಬೆಂಗಳೂರು :ರೈತರಿಗೆ ಕೃಷಿ ಬಗೆಗೆ ಸಮಗ್ರ ಮಾಹಿತಿ ನೀಡುವ ದೃಷ್ಠಿಯಿಂದ ಸಂಚಾರಿ ಕೃಷಿ ಕ್ಲಿನಿಕ್ ಘಟಕ ಸೆಪ್ಟಂ-ಬ-ರ್ 5 ರಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಆರಂಭವಾಗಲಿದೆ.
ಮೊದಲು ಬೆಂಗಳೂರು, ಕೋಲಾರ ಮತ್ತು ತುಮಕೂರುಗಳಲ್ಲಿ ಈ ಘಟಕ ಆರಂಭವಾಗಲಿದ್ದು, ನಂತರ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಸಂಚಾರಿ ಕೇಂದ್ರಗಳನ್ನು ತೆರೆಯಲಾಗುವುದು. ರೈತರು ಬೆಳೆಯುವ ಬೆಳೆಗೆ ಗೊಬ್ಬರ ಒದಗಿಸುವ ನಿಟ್ಟಿನಲ್ಲಿ ಪೂರಕವಾದ ಮಣ್ಣು ಪರೀಕ್ಷೆ, ಒದಗಿಸಬೇಕಾದ ಗೊಬ್ಬರ, ಹವಾಮಾನ ವೈಪರೀತ್ಯ ಮತ್ತು ರೋಗಬಾಧೆಯ ಸಂದರ್ಭದಲ್ಲಿ ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಂಚಾರಿ ಕೃಷಿ ಕ್ಲಿನಿಕ್ ಮಾಹಿತಿ ನೀಡಲಿದೆ.
ಜಿಲ್ಲೆಯಲ್ಲಿ ಬೆಳೆಯಬಹುದಾದ ಕೃಷಿ ಉತ್ಪನ್ನಗಳು, ಮತ್ತು ಉನ್ನತ ತಂತ್ರಜ್ಞಾನ ಉಪಯೋಗಿಸಿಕೊಂಡು ಅವುಗಳನ್ನು ಬೆಳೆಯುವ ವಿಧಾನಗಳ ಬಗ್ಗೆ ಈ ಕ್ಲಿನಿಕ್ನಲ್ಲಿ ವೀಡಿಯೋ ಚಿತ್ರ ಪ್ರದರ್ಶನ ಸಹಿತ ವಿವರವಾದ ಮಾಹಿತಿಯನ್ನು ರೈತರಿಗೆ ವಿವರಿಸುವ ವ್ಯವಸ್ಥೆ ಇದೆ. ಕೃಷಿ ಮಾಹಿತಿ ತಜ್ಞರು ಈ ಕ್ಲಿನಿಕ್ನಲ್ಲಿಯೇ ಇರುತ್ತಾರೆ.
ಸಧ್ಯದಲ್ಲಿಯೇ ಪ್ರತ್ಯೇಕ ಮಣ್ಣು ಪರೀಕ್ಷಾ ಸಂಚಾರಿ ಘಟಕವೂ ಆರಂಭವಾಗಲಿದೆ. ಸಂಚಾರಿ ಕೃಷಿ ಕ್ಲಿನಿಕ್ನ್ನು ಬೆಂಗಳೂರಿನ ಐ ಇ ಡಿ ಪ್ಯಾರಿ (ಇಂಡಿಯಾ)ಲಿಮಿಟೆಡ್ ಸಂಸ್ಥೆ ಮತ್ತು ಸರಕಾರ ಜಂಟಿ ಸಹಯೋಗದೊಂದಿಗೆ ತುಮಕೂರಿನ ಶಿರಾದಲ್ಲಿ ಉದ್ಘಾಟಿಸಲಿದ್ದಾರೆ.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications