Get Updates
Get notified of breaking news, exclusive insights, and must-see stories!

ರಾಜ್‌ಕುಮಾರ್‌ ಬಿಡುಗಡೆ ಆಗಿದೆಯಂತೆ, ನಿಜಾನಾ ಸಾರ್‌?

ಬೆಂಗಳೂರು : ರಾಜ್‌ಕುಮಾರ್‌ ಅವರ ಬಿಡುಗಡೆ ಆಯಿತಂತೆ ನಿಜವೇ ಸಾರ್‌? ನಮ್ಮ ಕಾರ್ಯಾಲಯಕ್ಕೆ ಬಂದ ಹತ್ತಾರು ದೂರವಾಣಿ ಕರೆಗಳೆಲ್ಲ ಕೇಳಿದ ಪ್ರಶ್ನೆ ಇದೊಂದೆ. ಬೆಂಗಳೂರಿನ ಕೆಲವು ಪತ್ರಿಕಾ ಕಾರ್ಯಾಲಯಗಳ ಸಿಬ್ಬಂದಿಗೂ ಈ ಅನುಭವ ಆಗಿದೆ.

ನಕ್ಕೀರನ್‌ ಪತ್ರಿಕೆಗೂ ಬಂದ ಅಸಂಖ್ಯಾತ ದೂರವಾಣಿ ಕರೆಗಳೆಲ್ಲ ಈ ಪ್ರಶ್ನೆಯನ್ನೇ ಕೇಳಿವೆ. ಚೆನ್ನೈನ ಪೊಲೀಸ್‌ ಕೇಂದ್ರ ಕಚೇರಿಗೂ ಕೆಲವು ದೂರವಾಣಿಗಳು ಬಂದಿವೆ ಎಂದು ತಿಳಿದು ಬಂದಿದೆ. ಗಣೇಶ ಚತುರ್ಥಿಗಾಗಿಯೇ ವೀರಪ್ಪನ್‌, ರಾಜ್‌ಕುಮಾರ್‌ ಅವರನ್ನು ಬಿಟ್ಟಿದ್ದಾನೆ ಎನ್ನುವ ವದಂತಿಗಳು ಗುರುವಾರ ಹಬ್ಬಿದ್ದವು.

ರಾಜ್‌ಕುಮಾರ್‌ ಅಪಹರಣವಾದ ದಿನದಿಂದಲೂ ವದಂತಿಗಳದೇ ಸಾಮ್ರಾಜ್ಯ ಆಗಿದೆ. ಈ ವದಂತಿಗಳ ಸಾಲಿನಲ್ಲಿ ಶುಭವಾರ್ತೆಯ ಈ ವದಂತಿಯೂ ಒಂದು ಎಂದಷ್ಟೇ ಹೇಳಬಹುದು. ಈ ಮಧ್ಯೆ ವೀರಪ್ಪನ್‌ ಹಾಗೂ ಗೋಪಾಲ್‌ ನಡುವೆ ಮಾತುಕತೆ ಮುಂದುವರಿದಿದೆ ಎಂದು ನಕ್ಕೀರನ್‌ ಮೂಲಗಳು ಸ್ಪಷ್ಟಪಡಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+