ಸೆನ್ಸಾರ್ ಆಗದ ಕ್ಯಾಸೆಟ್ ಇಲ್ಲಿದೆ
ಇಷ್ಟು ದಿನ ಪಾರ್ವತಮ್ಮ ಮುಚ್ಚಿಟ್ಟುಕೊಂಡು ಬಂದಿದ್ದ ಅಳು ಮೊನ್ನೆ ಕಟ್ಟೆ ಒಡೆದು ಬಂತು. ಇತ್ತೀಚೆಗೆ ಗೋಪಾಲ್ ತಂದಿರುವ ಕ್ಯಾಸೆಟ್‌ನಲ್ಲಿ ಮಾತಾಡಿರುವ ರಾಜ್‌ಕುಮಾರ್ ಕಾಡಿನಲ್ಲಿ ತಾವು ಅನುಭವಿಸುತ್ತಿರುವ ಮಾನಸಿಕ ಯಾತನೆಯನ್ನು ಹೇಳಿಕೊಂಡಿದ್ದಾರೆ. ಅದನ್ನು ವೀಕ್ಷಿಸಿದ ಮನೆ ಮಂದಿಗೆ ತಮ್ಮ ದುಃಖವನ್ನು ಮುಚ್ಚಿಟ್ಟುಕೊಳ್ಳುವುದು ಸಾಧ್ಯವಾಗಲೇ ಇಲ್ಲ.
'ನನಗೆ ಇಲ್ಲಿರೋದು ಕಷ್ಟವಾಗ್ತಿದೆ. ಆದಷ್ಟೂ ಬೇಗ ನನ್ನನ್ನು ಇಲ್ಲಿಂದ ಪಾರು ಮಾಡಿ. ಗೋಪಾಲ್‌ಗೆ ಆ ಬಗ್ಗೆ ಹೇಳಿ ಎಂದು ರಾಜ್ ಕೇಳಿಕೊಂಡಿದ್ದಾರೆ. ನನಗೆ ಆದಷ್ಟೂ ಬೇಗ ಮರಳಿ ಬಂದು ನಮ್ಮ ಮನೆಯವರನ್ನು, ಅಭಿಮಾನಿಗಳನ್ನು ನೋಡಬೇಕು ಅನ್ನಿಸಿದೆ. ಕರುಣಾನಿಧಿ ಹಾಗೂ ಎಸ್ಸೆಮ್ ಕೃಷ್ಣ ಅವರಿಗೆ ಹೇಳಿ,ಅದೇನು ಬೇಡಿಕೆ ಇದೆಯೋ ಈಡೇರಿಸಿ, ನನ್ನನ್ನು ಬಿಡುಗಡೆ ಮಾಡಿ" ಎಂದು ರಾಜ್ ಹೇಳುತ್ತಿರುವುದನ್ನು ಕೇಳಿಸಿಕೊಳ್ಳುವಾ-ಗ ರಾಘವೇಂದ್ರನ ಕೆನ್ನ್ನೆಮೇಲೆ ನೀರು ಹರಿಯುತ್ತಿತ್ತು. ಪುನೀತ್ ದನಿ ತೆಗೆದು ಅಳಬಾರದು ಎಂದು ತನಗೆ ತಾನೇ ಅಂದುಕೊಂಡರೂ ನೋವು ತಡೆಯದೇ ಬಿಕ್ಕುತ್ತಾನೆ.
'ಎಷ್ಟೋ ವರ್ಷಗಳಿಂದ ಶ್ರಾವಣ ಪೂಜೆ ಮಾಡಿಕೊಂಡು ಬಂದವನು ನಾ-ನು. ಈ ಸಾರಿ ಮೂರು ಶನಿವಾರಗಳು ಕಾಡಿನಲ್ಲಿ ಕಳೆದು ಹೋದವು. ಕೊನೆಯ ಶನಿವಾರವಾದರೂ ನನಗೆ ಮನೆ ದೇವರ ಪೂಜೆ ಮಾಡೋ ಅವಕಾಶ ಮಾಡಿಕೊಡಿ" ಎಂದು ಅಣ್ಣಾ-ವ್ರು ಕ್ಯಾಸೆಟ್‌ನಲ್ಲಿ ಪ್ರಾರ್ಥಿಸುತ್ತಿರುವುದನ್ನು ಕೇಳಿಸಿಕೊಂಡಾಗ, ಆವ-ರೆ-ಗೆ ಬಲ-ವಂ-ತ-ದಿಂ-ದ ರೂಢಿ-ಸಿ-ಕೊಂ-ಡಿ-ದ್ದ ಧೈರ್ಯ-ವೆ-ಲ್ಲ ಪಾರ್ವತಮ್ಮ ನ-ವ-ರಿ-ಗೆ ಹುಡಿ-ಯಾ-ಗು-ತ್ತ-ದೆ. -ಪಾ-ರ್ವ-ತಿ, ನೀನು ಅಳ-ಬಾ-ರ-ದು ಎಂದು ಪತಿ-ದೇ-ವ-ರು ಕೇಳಿ ಪಡೆ-ದಿ-ದ್ದ ಭಾಷೆ ಎದೆ-ಯ-ಲ್ಲೇ ಇದ್ದ-ರೂ ಅಳು ಉಕ್ಕು-ತ್ತ-ದೆ.
' ಇಲ್ಲಿ ನನ್ನ ಸುತ್ತ ಮುತ್ತ ಗನ್ ಹಿಡಿದ ಮಂದಿ ಇದ್ದಾರೆ. ಊಟ ಮಾಡೋದು ಬಿಟ್ಟರೆ ಇನ್ನಾವುದಕ್ಕೂ ಸ್ವಾತಂತ್ರ ಇಲ್ಲ. ಈ ನಡುವೆ ಮಂಡಿ ನೋವು ಹೆಚ್ಚಾಗಿದೆ. ನಡೆಯೋಕೆ ಆಗ್ತಾ ಇಲ್ಲ " ಎಂದು ಹೇಳುವ ರಾಜ್‌ರನ್ನು ಮನೆಮಂದಿಯ ನೆನಪುಗಳು ಬೇರೆ ಕಾಡಿಸಿ ಹಣ್ಣಾಗಿಸುತ್ತಿವೆ. ' ಒಂದು ವಾರದಲ್ಲಿ ಎಲ್ಲ ಮುಗಿಯುತ್ತೆ ಅಂದಿದ್ದರು. ಮೂರು ವಾರವಾದರೂ ಯಾಕೆ ನನ್ನನ್ನು ವಾಪಾಸ್ ಕರೆದು ಕೊಂಡು ಹೋಗ್ತಾ ಇಲ್ಲ . ನನ್ನ ತಮ್ಮ ವರದಪ್ಪನ ಮಗಳಿಗೆ ಕ್ಯಾನ್ಸರ್. ಅವಳನ್ನು ನೋಡಬೇಕು ಅನ್ನಿಸ್ತಿದೆ. ಅಷ್ಟಕ್ಕೂ ನಾನು ಮಾಡಿದ ತಪ್ಪಾದರೂ ಏನು ? ಇವರೆಲ್ಲ ಸೇರಿ ನನಗೆ ಯಾಕೆ ಕಷ್ಟ ಕೊಡ್ತಾ ಇದ್ದಾರೆ ? " ಎಂದು ಕೇಳುವ ಅಣ್ಣಾವ್ರಿಗಾಗುತ್ತಿರುವ ಮಾನಸಿಕ ಹಿಂಸೆಯನ್ನು ನೋಡಿ-ದಾ-ಗ -ಇ-ಡೀ ರಾಜ್ ಕುಟುಂ-ಬ-ಕ್ಕೆ ಇದು ಯಾರು ಬರೆ-ದ ಕಥೆ-ಯೋ.. ನೆನ-ಪಾ-ಗು-ತ್ತ-ದೆ.
-
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್











Click it and Unblock the Notifications