Get Updates
Get notified of breaking news, exclusive insights, and must-see stories!

ಸೆಪ್ಟೆಂಬರ್‌ 2 ರಂದು ಕರ್ನಾಟಕ ಬಂದ್‌ ಇಲ್ಲ : ನಾರಾಯಣ ಕುಮಾರ್‌

ಬೆಂಗಳೂರು : ರಾಜ್‌ಕುಮಾರ್‌ ಅವರ ಶೀಘ್ರ ಬಿಡುಗಡೆಗೆ ಒತ್ತಾಯಿಸಿ ಸೆಪ್ಟೆಂಬರ್‌ 2ರಂದು ನಡೆಸಲು ಉದ್ದೇಶಿಸಿದ್ದ ಕರ್ನಾಟಕ ಬಂದ್‌ ಅನ್ನು ಕೈಬಿಟ್ಟಿರುವುದಾಗಿ ಕನ್ನಡ ಚಳವಳಿ ನಾಯಕ ಹಾಗೂ ಮಾಜಿ ಶಾಸಕ ಜಿ. ನಾರಾಯಣ ಕುಮಾರ್‌ ತಿಳಿಸಿದ್ದಾರೆ.

ರಾಜ್‌ಕುಮಾರ್‌ ಅವರ ಬಿಡುಗಡೆಗೆ ನಾವು ಸೆ.1ರ ಗಡುವನ್ನು ವಿಧಿಸಿದ್ದೆವು, ರಾಜ್‌ ಬಿಡುಗಡೆ ಪ್ರಕ್ರಿಯೆಯಲ್ಲಿ ರಾಜ್ಯ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ, ಸಂಧಾನಕಾರ ಗೋಪಾಲ್‌ ಕೂಡ ವೀರಪ್ಪನ್‌ ಅವರ ಮನವೊಲಿಕೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ, ರಾಜ್‌ ಅವರ ಬಿಡುಗಡೆಯ ಆಶಾಭಾವನೆ ವ್ಯಕ್ತವಾಗಿದೆ ಹೀಗಾಗಿ ಸೆಪ್ಟೆಂಬರ್‌ 2 ರಂದು ಯಾವುದೇ ಬಂದ್‌ ಆಚರಿಸುತ್ತಿಲ್ಲ. ಬಂದ್‌ಗೆ ನಾವು ದಿನಾಂಕವನ್ನೂ ನಿಗದಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ರಾಜ್‌ಕುಮಾರ್‌ ಅವರ ಬಿಡುಗಡೆ ಮತ್ತೂ ವಿಳಂಬವಾಗುವ ಸೂಚನೆಗಳು ಕಂಡು ಬಂದರೆ, ಕರ್ನಾಟಕ ಬಂದ್‌ ಹಾಗೂ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದೂ ಎಚ್ಚರಿಕೆಯನ್ನು ನೀಡಿದ್ದಾರೆ.

ಸೆಪ್ಟೆಂಬರ್‌ 9ರವರೆಗೆ ನಿಷೇಧಾಜ್ಞೆ : ರಾಜ್‌ಕುಮಾರ್‌ ಅವರ ಅಪಹರಣದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ದುಷ್ಕರ್ಮಿಗಳು ಸ್ವಾರ್ಥಕ್ಕೆ ಬಳಸಿಕೊಳ್ಳದಿರಲಿ ಎಂಬ ಕಾರಣಕ್ಕಾಗಿ ಸೆಪ್ಟೆಂಬರ್‌ 9ರವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ. ಮಡಿಯಾಳ್‌ ತಿಳಿಸಿದ್ದಾರೆ.

ಈ ನಿಷೇಧಾಜ್ಞೆ ಗೌರಿ - ಗಣೇಶ ಹಬ್ಬದ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಮುಖಪುಟ / ರಾಜ್‌ ಅಪಹರಣ / ಡಾ. ರಾಜಕುಮಾರ್‌ ಚಿತ್ರಾವಳಿ / ರಾಜಮಾರ್ಗ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+