ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌.ವಿ. ಕಾಲೇ-ಜು ವಿದ್ಯಾ-ರ್ಥಿ-ಗ-ಳ ಮತ್ತೊಂ-ದು ಹೈಟೆ-ಕ್‌ ಸಾಧ-ನೆ

By Staff
|
Google Oneindia Kannada News

ಬೆಂಗಳೂರು : ಇನ್ನು ಮುಂದೆ ನೀವು ಕಚೇರಿಯಲ್ಲಿ ಕುಳಿತೇ ಬಟ್ಟೆ ಒಗೆಯಬಹುದು. ಸ್ನಾನಕ್ಕೆ ನೀರು ಕಾಯಿಸಬಹುದು. ಎಲ್ಲದಕ್ಕೂ ಹೆಂಡತಿಯನ್ನು ಅವಲಂಬಿಸುವುದು ತಪ್ಪಲಿದೆ. ಅಂಥ ತಂತ್ರಜ್ಞಾನವನ್ನ ನಗರದ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನ ಹುಡುಗರು ಕಂಡು ಹಿಡಿದಿದ್ದಾರೆ.

ಸುಮಾ-ರು -ಎ-ರ-ಡು ವರ್ಷ-ಗಳ ಹಿಂದೆ ರೊಬೋ-ಟ್‌ ಕಂಡು ಹಿಡಿ-ದು ಸುದ್ದಿ-ಯ-ಲ್ಲಿ-ದ್ದ ಆರ್‌. ವಿ. ಕಾಲೇ-ಜು ವಿದ್ಯಾ-ರ್ಥಿ-ಗ-ಳು, ಮೊನ್ನೆ ಮೊ-ನ್ನೆ ತಾನೇ ಚಾಲ-ಕ ರಹಿ-ತ ಬಸ್‌ ಶೋಧಿ-ಸಿದ್ದ-ರು. ಇದೀ-ಗ, -ಕಾ-ಲೇ-ಜಿ-ನ ಹೆಗ್ಗ-ಳಿ-ಕೆ ಮುಂದು-ವ-ರಿ-ಸು-ವಂ-ತ-ಹ ಮತ್ತೊಂ-ದು ಸಾಧ-ನೆ.

ನೀವು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನಿಮ್ಮ ಮನೆಯ ಗೃಹೋಪಯೋಗಿ ವಸ್ತುಗಳನ್ನು ನಿಯಂತ್ರಿಸಬಹುದು! ಇದಕ್ಕೆ ನಿಮ್ಮ ಬಳಿ ಇಂಟರ್‌ನೆಟ್‌ ಸಂಪರ್ಕವಿರುವ ಒಂದು ಕಂಪ್ಯೂಟರ್‌ ಇದ್ದರೆ ಸಾಕು. ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನ 8ನೇ ಸೆಮಿಸ್ಟರ್‌ (ಎಲೆಕ್ಟ್ರಾನಿಕ್ಸ್‌ ವಿಭಾಗ) ವಿದ್ಯಾರ್ಥಿಗಳಾದ ಎ.ವಿ. ಅನಿಲ್‌ಕುಮಾರ್‌, ಟಿ.ವಿ. ಅಶ್ವಿನ್‌, ಎಂ.ಸಿ. ರಾಜಾ ಹಾಗೂ ಆರ್‌. ಸತೀಶ್‌ ಕುಮಾರ್‌ ತಂಡ ಈ ಹೊಸ ಉಪಕರಣ ತಯಾರಿಸಿದ್ದಾರೆ. ಈ ಉಪಕರಣದ ಕಾರ್ಯವಿಧಾನ ವೀಕ್ಷಿಸಲು ಗುರುವಾರ ಆರ್‌.ವಿ. ಕಾಲೇಜಿನಲ್ಲಿ ಸುದ್ದಿಗಾರರ ಹಿಂಡು ನೆರೆದಿತ್ತು.

ಸೌಲಭ್ಯಕ್ಕೆ ಏನೇನು ಬೇಕು : ಪೆಂಟಿಯಂ ಅಥವಾ ಅದಕ್ಕೆ ಸಮನಾದ ಪ್ರೊಸೆಸರ್‌, ಎನ್‌ಟಿ 4 ಅಥವಾ ಅದಕ್ಕಿಂತ ಉತ್ತಮವಾದ ಸರ್ವರ್‌, ಇಂಟರ್‌ನೆಟ್‌ ಮಾಹಿತಿ ಸೇವೆ (ಐಐಎಸ್‌), ನೋಂದಾಯಿಸಿದ ಡಿಎಲ್‌ಎಲ್‌ ಫೈಲ್‌, ಐಐಎಸ್‌ ಡೈರೆಕ್ಟರಿಯಲ್ಲಿ ಎಎಸ್‌ಪಿ ಮತ್ತು ಎಚ್‌ಟಿಎಂಎಲ್‌ ಫೈಲುಗಳು, ನಲ್‌ ಮೋಡೆಮ್‌ ಹಾಗೂ ಸೀರಿಯಲ್‌ ಕಮ್ಯುನಿಕೇಶನ್‌ ಪೋರ್ಟ್‌ , ಇವುಗಳ ಜತೆಗೆ ಇಂಟರ್‌ನೆಟ್‌ ಸಂಪರ್ಕವಿರುವ ಕಂಪ್ಯೂಟರ್‌ ನಿಮ್ಮ ಬಳಿ ಇದ್ದರೆ ನಿಮಗೆ ಬೇಕಾದ ಕಡೆ ಕುಳಿತು ಮನೆ ಕೆಲಸ ಮಾಡಬಹುದು. ಅಷ್ಟೇ ಅಲ್ಲ, ಈ ವಿಧಾನದಿಂದ ಬೃಹತ್‌ ಕೈಗಾರಿಕೆಗಳಲ್ಲಿ ಯಂತ್ರೋಪಕರಣಗಳನ್ನೂ ನಿಯಂತ್ರಿಸಬಹುದಾಗಿದೆ.

ಹೆಚ್ಚು ಖರ್ಚೇನಿಲ್ಲ : ನಿಮ್ಮ ಬಳಿ ಕಂಪ್ಯೂಟರ್‌ ಇದ್ದರೆ, ಇನ್ನು 1075 ರುಪಾಯಿ ಖರ್ಚು ಮಾಡಿದರೆ ಈ ಸವಲತ್ತು ನಿಮ್ಮದಾಗುತ್ತದೆ. ಇಷ್ಟು ಹಣದಲ್ಲಿ ಕಂಟ್ರೋಲರ್‌, ಈಪ್ರಾಮ್‌, ಕಮ್ಯುನಿಕೇಶನ್‌ ಕೇಬಲ್‌ ಹಾಗೂ ಇಂಟರ್‌ಫೇಸಿಂಗ್‌ ಸರ್ಕ್ಯೂಟ್‌ ಕೊಳ್ಳಬಹುದು. ಮಿಸ್ಕ್‌ ಹಾಗೂ ಮೋಡೆಮ್‌ ಇಲ್ಲದಿದ್ದರೆ ಇನ್ನೂ 2275 ರುಪಾಯಿ ಹಣ ಖರ್ಚು ಮಾಡಬೇಕಾಗುತ್ತದೆ. ನೀವು ಇನ್ನಷ್ಟು ವಿಷಯ ತಿಳಿಯಬೇಕಾದಲ್ಲಿ ವಿಳಾಸಕ್ಕೆ ಈ ಮೇಲ್‌ ಮಾಡಿ- [email protected]

ಮಾತು ಕುಗ್ಗಿಸುವ ವಿಧಾನ

ಇದೇ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ವಿಭಾಗದ ವಿದ್ಯಾರ್ಥಿಗಳ ಮತ್ತೊಂದು ತಂಡ ಮಾತನ್ನು ಕುಗ್ಗಿಸುವ ಹೊಸ ವಿಧಾನ ಕಂಡುಹಿಡಿದಿದ್ದಾರೆ. ಆಡುವ ಮಾತನ್ನು ಕಂಪ್ಯೂಟರ್‌ನಲ್ಲಿ ದಾಖಲಿಸುವಾಗ, ಈಗ ಬೇಕಾದ ಸ್ಥಳಾವಕಾಶಕ್ಕಿಂತ ಅರ್ಧದಷ್ಟು ಜಾಗೆ (ಮೆಮರಿ) ಸಾಕಾಗುತ್ತದೆ. ಧ್ವನಿ ತುಂಬುವಾಗ ಅದರ ಗಾತ್ರವನ್ನು ಅರ್ಧದಷ್ಟು ಕುಗ್ಗಿಸುವುದನ್ನು ಕಂಡುಹಿಡಿದಿದ್ದಾರೆ ಎನ್‌. ಆನಂದ್‌, ಸಿ.ಎಸ್‌. ಹೇಮಂತ್‌, ಬಿ.ಎಸ್‌. ಮಹೇಶ್‌ ಹಾಗೂ ಎಸ್‌. ಪ್ರದೀಪ್‌.

ಉಪಯೋಗ : ಈ ಹೊಸ ವಿಧಾನದಿಂದ ಈ-ಮೇಲ್‌ ಸೇವೆ ಉತ್ತಮವಾಗಲಿದೆ. ಮೊಬೈಲ್‌ ಫೋನುಗಳ ಸೇವೆ ಮತ್ತಷ್ಟು ವ್ಯಾಪಕವಾಗಲಿದೆ. ಡೌನ್‌ಲೋಡಿಂಗ್‌ಗೆ ಬೇಕಾಗುವ ಸಮಯವೂ ಕಡಿಮೆ. ನೀವು ಪುನಃ ಧ್ವನಿಯನ್ನು ಪಡೆಯುವಾಗ ಧ್ವನಿ ಮಾಮೂಲು ಗಾತ್ರದಲ್ಲಿ ನಿಮಗೆ ಲಭ್ಯ. ಧ್ವನಿ- ಅಂಚೆ ವ್ಯವಸ್ಥೆಯಲ್ಲಿ ಹೆಚ್ಚು ಸಂದೇಶ ಕಳಿಸಲು ಈ ವಿಧಾನದಿಂದ ಸಾಧ್ಯವಾಗಲಿದೆ.

Click here to go to top
ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X