Get Updates
Get notified of breaking news, exclusive insights, and must-see stories!

ದಸರೆಯನ್ನು ಜನತೆಯ ಹಬ್ಬವಾಗಿ ಆಚರಿಸಲು ಸಮಿತಿ ನಿರ್ಧಾರ

ಬೆಂಗಳೂರು : ಸೆಪ್ಟೆಂಬರ್‌ 28ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಆರಂಭ. ಈ ಬಾರಿಯ ಉತ್ಸವವನ್ನು ಜನತೆಯ ಹಬ್ಬವನ್ನಾಗಿ ಆಚರಿಸಲು ದಸರಾ ಉತ್ಸವ ಸಮಿತಿಯ ಮೊದಲ ಸಭೆಯಲ್ಲಿ ನಿರ್ಧರಿಸಲಾಯಿತು. ಮೈಸೂರು ನಗರವನ್ನು ಅಂದಗೊಳಿಸುವ ಸಲುವಾಗಿ 2 ಕೋಟಿ ರುಪಾಯಿಗಳು ಹಾಗೂ ರಸ್ತೆ ಕಾಮಗಾರಿಗಾಗಿ 75 ಲಕ್ಷ ರುಪಾಯಿಗಳು ಮತ್ತು ಉತ್ಸವದ ಖರ್ಚುವೆಚ್ಚಕ್ಕಾಗಿ 60 ಲಕ್ಷ ರುಪಾಯಿಗಳನ್ನು ಒದಗಿಸುವಂತೆ ಸಮಿತಿ ಸರಕಾರವನ್ನು ಕೋರಿದೆ.

ದಸರಾ ಕಾರ್ಯಕ್ರಮಗಳನ್ನು ಉದ್ಘಾಟಿಸುವಂತೆ ಸರಕಾರ ಕನ್ನಡದ ಮೇರುನಟ ಡಾ. ರಾಜ್‌ಕುಮಾರ್‌ ಅವರನ್ನು ಕೇಳಿಕೊಳ್ಳಲಿದೆ. ದಸರ ಉತ್ಸವ ಸಮಿತಿಯ ಉನ್ನತ ಮಟ್ಟದ ಸಭೆ ಈ ನಿರ್ಧಾರ ಕೈಗೊಂಡಿದೆ. ಈ ವಿಷಯವನ್ನು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವನಾಥ್‌ ತಿಳಿಸಿದ್ದಾರೆ.

ಆನೆಯ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ನಿನ್ನನ್ನೆ ಕಂಡೆ ನನ್ನೇ ನಾಕಂಡೆ........ ಎಂದು ಹಾಲು ಜೇನು ಚಿತ್ರದಲ್ಲಿ ಹಾಡಿ ಕುಣಿದ ಡಾ. ರಾಜ್‌ಕುಮಾರ್‌ ಅವರು ಈಗ ನೂರಾರು ಆನೆಗಳಿರುವ ಕಾಡಿನಲ್ಲಿ ಆನೆಗಳ ಹಂತಕ ವೀರಪ್ಪನ್‌ ವಶದಲ್ಲಿದ್ದಾರೆ.

ಆದರೂ, ಅತಿಶೀಘ್ರದಲ್ಲೇ ರಾಜ್‌ಕುಮಾರ್‌ ಅವರು ಸುರಕ್ಷಿತವಾಗಿ ಹಿಂತಿರುಗುತ್ತಾರೆ ಎಂಬ ದೃಢ ವಿಶ್ವಾಸ ಹೊಂದಿರುವ ದಸರಾ ಮಹೋತ್ಸವ ಉಸ್ತುವಾರಿ ಸಮಿತಿಯ ಉನ್ನತ ಮಟ್ಟದ ಸಭೆ ರಾಜ್‌ ಅವರಿಂದಲೇ ಕಾರ್ಯಕ್ರಮ ಉದ್ಘಾಟನೆ ಮಾಡಿಸುವ ಯೋಜನೆ ಹಾಕಿಕೊಂಡಿದೆ.

ದಸರಾ ಕಾರ್ಯಕ್ರಮವನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಸೋಮವಾರ ನಡೆದ ಪ್ರಥಮ ಸಭೆಯಲ್ಲಿ ಚರ್ಚಿಸಲಾಯಿತು. ಕನ್ನಡಿಗರ ನಾಡಹಬ್ಬವಾದ ದಸರಾವನ್ನು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಎಲ್ಲ ಕ್ರಮಕೈಗೊಳ್ಳಲಾಗುವುದು ಎಂದು ಸಭೆಯ ನಂತರ ವಿಶ್ವನಾಥ್‌ ತಿಳಿಸಿದರು. ದಸರೆಯ ಎಲ್ಲ ಸಿದ್ಧತೆಗಳೂ ಭರದಿಂದ ಸಾಗಿವೆ. ಹೆಚ್ಚು ಹೆಚ್ಚು ಪ್ರವಾಸಿಗರನ್ನು ಈ ಬಾರಿಯ ದಸರೆಗೆ ಆಕರ್ಷಿಸಲು ವ್ಯಾಪಕ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.

ದಸರಾ ಜಂಬೂಸವಾರಿಯನ್ನು ಮತ್ತಷ್ಟು ವರ್ಣರಂಜಿತವಾಗಿ ಆಚರಿಸಲು ಸಿದ್ಧತೆಗಳು ನಡೆದಿದೆ. ಸೂಕ್ತ ರಕ್ಷಣೆಗಾಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗುವುದು, ಮೆರವಣಿಗೆಯಲ್ಲಿ ಬಾಣ - ಬಿರುಸುಗಳ ಜತೆಗೆ ಅತ್ಯಾಧುನಿಕ ತಂತ್ರಜ್ಞಾನದ ಪ್ರದರ್ಶನವೂ ನಡೆಯಲಿದೆ ಎಂದು ಅವರು ಹೇಳಿದರು. ಹಲವು ವರ್ಷದಿಂದ ನಿಂತು ಹೋಗಿರುವ ಚಲನಚಿತ್ರೋತ್ಸವವೂ ಈ ಬಾರಿ ಪುನಾರಂಭಗೊಳ್ಳಲಿದೆ.

ಸೋಮವಾರ ನಡೆದ ಸಭೆಯಲ್ಲಿ ಸಚಿವರುಗಳಾದ ವಿಶ್ವನಾಥ್‌, ರಾಣಿ ಸತೀಶ್‌, ಶಿವಣ್ಣ, ಮೈಸೂರು ಮೇಯರ್‌ ನಾರಾಯಣ್‌, ವಸ್ತುಪ್ರದರ್ಶನ ಸಮಿತಿಯ ಅಧ್ಯಕ್ಷ ಪುಟ್ಟಸ್ವಾಮಿ, ಶಾಸಕ ಶಂಕರಲಿಂಗೇಗೌಡ, ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಾಗರಾಜ್‌ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+