ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ಸಾವಿರ ಮಠ ವಿವಾದ : ಇಂದು ವಿಚಾರಣೆ

By Super
|
Google Oneindia Kannada News

ಹುಬ್ಬಳ್ಳಿ : ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯವು ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದದ ಕುರಿತು ವಿಚಾರಣೆಯನ್ನು ಶುಕ್ರವಾರ ಆರಂಭಿಸಲಿದೆ.

ಮಠಾಧಿಪತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ದಾಖಲೆ ಪತ್ರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮಠದ ಡಾ. ಗಂಗಾಧರ ರಾಜಯೋಗೀಂದ್ರ ಸ್ವಾಮಿಗಳ ಉತ್ತರಾಧಿಕಾರಿಯಾಗಿ ಗುರುಸಿದ್ಧ ರಾಜ ಯೋಗೀಂದ್ರಸ್ವಾಮಿಗಳ ನೇಮಕ ಮತ್ತು ಮಠಾಧೀಶರ ಕಮಿಟಿಯ ಅಂತಿಮ ನಿರ್ಧಾರವನ್ನು ಆಕ್ಷೇಪಿಸಿ, ರುದ್ರಮುನಿ ಸ್ವಾಮಿಗಳು ರಾಜ್ಯ ಶ್ರೇಷ್ಟ ನ್ಯಾಯಾಲಯಕ್ಕೆ ರಿಟ್‌ ಅರ್ಜಿ ಸಲ್ಲಿಸಿದ್ದರು. ವಿವಾದದಲ್ಲಿ ಪ್ರತಿವಾದಿಗಳಾದ ಸುತ್ತೂರು ಮಠಾಧೀಶರ ಪರವಾಗಿ ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ಚಳವಳಿಯ ನೇತೃತ್ವ ವಹಿಸಿದ್ದ ಪಿ.ಎಸ್‌ ಹಿರೇಮಠ ವಾದಿಸಲಿದ್ದು, ವಿವಾದಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಕೋರ್ಟಿಗೆ ಸಲ್ಲಿಸಿದ್ದಾರೆ.

English summary
Mooru savira matt : inquiry starts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X