ಕಾಮನಬಿಲ್ಲು ನೋಡಿದಿರಾ ?
ಬೆಂಗಳೂರು: ಬುಧವಾರ ಸಂಜೆ ಡೆಸ್ಕಿನಲ್ಲಿ ವರದಿ ಜೋಡಿಸುತ್ತಾ ,ಆಯುತ್ತಾ , ಕುಳಿತು ಬೇಸರವಾಗಿ ಟರೇಸಿನ ಮೇಲೆ ಹೋದಾಗ-
ಬೆಂಗಳೂರಿನ ಆಕಾಶದಲ್ಲಿ ಹೊಗೆ ಬಿಟ್ಟರೆ ಬೇರೇನಿದೆ ಎನಿಸಿದರೂ, ಮಳೆ ಗಿಳೆಯೇನಾದರೂ ಮನೆಗೆ ಹೋಗುವುದನ್ನು ತಡಮಾಡಲು ಕಾಯುತ್ತಾ ಕುಳಿತಿದೆಯೇ ಎಂದು ಕತ್ತೆತ್ತಿ ನೋಡಿದಾಗ... ಅಲ್ಲಿದ್ದ ಅದ್ಭುತ ಕಂಡು ಇನ್ನಿಲ್ಲದ ಖುಷಿಯಾಯಿತು. ಕಾಮನ ಬಿಲ್ಲು ಆಕಾಶ ಭೂಮಿಗೆ ಸೇತುವೆ ಕಟ್ಟಿತ್ತು. ಪಕ್ಕದಲ್ಲಿಯೇ ತೆಳುವಾಗಿ ಇನ್ನೊಂದು ಕಾಮನ ಬಿಲ್ಲು....ತುಂತುರು ಮಳೆ !
ವಾಹನಗಳ ಸದ್ದು, ಹಾರ್ನ್‌ಗಳ ಕಿರಿಕಿರಿ, ಐದು ನಿಮಿಷಕ್ಕೊಂದು ಸಿಗ್ನಲ್ಲು, ಅಲ್ಲಿ ತುಂಬಿರುವ ಕಪ್ಪು ಹೊಗೆ ಇದರ ಹೊರತಾಗಿ ಬೆಂಗಳೂರಿನವರಿಗೆ ಕಾಮನಬಿಲ್ಲು ನೋಡಲು ಸಿಗುವುದು ಟೀವಿಯಲ್ಲಿ ಮಾತ್ರ. ಆದರೆ ನಿನ್ನೆ ನಮ್ಮ ಆಕಾಶಕ್ಕೆ ಕಾಮನ ಬಿಲ್ಲು ನಿಜವಾಗಿ ಬಂದಿತ್ತು. ನೀವು ನೋಡಿದಿರಾ ?
ಗುರುವಾರದಂದು ಸಂಜೆ ವೇಳೆಗೆ ಬೆಂಗಳೂರು ತುಂಬಾ ಮಳೆ ಸುರಿಯಲಾರಂಭಿಸಿದೆ. ಗೋಕರ್ಣದಲ್ಲಿ ದಿನದ ದಾಖಲೆ ಮಳೆ 7 ಸೆಂಟಿ ಮೀಟರು ಸುರಿದಿದೆ. ವಿರಾಜ್‌ಪೇಟೆ, ಮೈಸೂರಿನಲ್ಲಿ 3 ಸೆಂಟಿ ಮೀಟರ್ ಮಳೆ. ಕರಾವಳಿಯಲ್ಲಿ ಗುರುವಾರದಂದು ಮಳೆಯೇನೂ ಕಾರುಬಾರು ನಡೆಸಲಿಲ್ಲ. ಶನಿವಾರದವರೆಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಪ್ರಕಾರ ರಾಜ್ಯದ ಕೆಲವು ಕಡೆ ಗುಡುಗು, ಮಿಂಚಿನ ಮಳೆಯಾಗುವ ಸಾಧ್ಯತೆ ಇದೆಯಂತೆ. ಫೋನ್, ಟೕವಿಯ ಪ್ಲಗ್ ಕಿತ್ತಿಟ್ಟು ಮಲಗಿದರೆ ಒಳ್ಳೆದು. ಕರಾವಳಿಯಲ್ಲಿಯೂ ಮಳೆ ಜೋರಾಗಿಯೇ ಸುರಿಯುವ ಸಾಧ್ಯತೆ ಇರುವುದರಿಂದ ಮೀನುಗಾರರು ಮೀನು ಹಿಡಿಯಲು ಹೋಗಬಾರದು ಎಂದು ಇಲಾಖೆ ಕಟ್ಟೆಚ್ಚರ ನೀಡಿದೆ. ಬೆಂಗಳೂರು ಆಕಾಶ ಇನ್ನೆರಡು ದಿನ ಮೋಡ ಮಸುಕು ಹಾಕಿ ಮಲಗಬಹುದು. ಪಿರಿ ಪಿರಿ ಮಳೆ ಬಂದು ಉಪದ್ರವ ಮಾಡಲೂ ಬಹುದು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications