ಬೈವಾಟರ್‌ಯೋಜನೆ ಕುರಿತು ಪುನಾ ಮಾತುಕತೆಗೆ ನಿರ್ಧಾರ
ಬೆಂಗಳೂರು: ಬೆಂಗಳೂರು ನಗರಕ್ಕೆ ಕುಡಿಯುವ ನೀರೊದಗಿಸುವ ಕಾವೇರಿ ಎರಡನೇ ಹಂತದ ನಾಲ್ಕನೇ ಘಟ್ಟದ ಬೈವಾಟರ್ ಗುತ್ತಿಗೆಗೆ ಸಂಬಂಧಿಸಿದಂತೆ ಬ್ರಿಟನ್ ಕಂಪೆನಿಯ ಜೊತೆ ಪುನಾ ಮಾತುಕತೆ ನಡೆಸಲು ರಾಜ್ಯ ಸರಕಾರ ಗುರುವಾರ ನಿರ್ಧರಿಸಿದೆ.
ಹಿಂದಿನ ಜೆ. ಎಚ್. ಪಟೇಲ್ ಸರಕಾರ ತನ್ನ ಆಡಳಿತಾವಧಿಯ ಕೊನೇ ದಿನಗಳಲ್ಲಿ ಗುತ್ತಿಗೆಗೆ ಹಸಿರು ನಿಶಾನೆ ತೋರಿಸಿತ್ತು. ಆಗ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಕಾಂಗ್ರೆಸ್ ಸರಕಾರದ ಈ ನಿರ್ಧಾರವನ್ನು ತೀರ್ವವಾಗಿ ವಿರೋಧಿಸಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಯೋಜನೆ ಬಗ್ಗೆ ಪರಿಶೀಲಿಸಲು ಸಂಪುಟ ಉಪಸಮಿತಿಗೆ ಸೂಚಿಸಿತ್ತು.
ಗುರುವಾರ ನಡೆದ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ವಾರ್ತಾ ಮತ್ತು ಪ್ರಚಾರ ಸಚಿವ ಬಿ.ಕೆ. ಚಂದ್ರಶೇಖರ್, ಬೆಂಗಳೂರಿಗೆ ವಿಶ್ವದರ್ಜೆಯ ನೀರು ಸರಬರಾಜು ಸೌಲಭ್ಯ ಮತ್ತು ಚರಂಡಿ ವ್ಯವಸ್ಥೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಬೇರೆ ಪರ್ಯಾಯವಿಲ್ಲ . ಈ ಸಂಬಂಧ 237 ಯೋಜನೆಗಳ ಪೈಕಿ 117ಯೋಜನೆಗಳಿಗೆ ಇತ್ತೀಚಿನ ಜಾಗತಿಕ ಸಮಾವೇಶ ಸಂದರ್ಭದಲ್ಲಿ ಒಪ್ಪಿಗೆ ನೀಡಲಾಗಿದೆ. ಮಲೇಷಿಯಾದ ಸಹಯೋಗದೊಂದಿಗೆ ಬ್ರಿಟಿಷ್ ಕಂಪನಿ ಯೋಜಿಸಿರುವ ಬೈವಾಟರ್ ಗುತ್ತಿಗೆ ಯೋಜನೆಗೆ ಸಂಧಾನ ಮಾತುಕತೆ ನಡೆಸುವ ಮೂಲಕ ಮರುಚಾಲನೆ ನೀಡಲು ನಿರ್ಧರಿಸಲಾಯಿತೆಂದು ತಿಳಿಸಿದ್ದಾರೆ.
ಯೋಜನೆಗಳಿಗೆ 26, 498 ಕೋಟಿ ರುಪಾಯಿ ಹೂಡಲಾಗುತ್ತಿದ್ದು, 13049 ಕೋಟಿ ರುಪಾಯಿಷ್ಟು ಬಂಡವಾಳ ಬೆಂಗಳೂರು ನಗರದ ಯೋಜನೆಗಳಿಗೆ ಹರಿದುಬರಲಿದೆ ಎಂದು ಸಚಿವರು ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾಫ್ಟ್‌ವೇರ್ ಉದ್ಯಮಕ್ಕೆ ಮುಂದಿನ ಮೂರು ವರ್ಷಗಳಲ್ಲಿ 22 ಮಿಲಿಯನ್ ಘನ ಆಡಿಗಳಷ್ಟು ಜಾಗಕ್ಕೆ ಬೇಡಿಕೆಯಿದೆ. ಇದರಲ್ಲಿ 20 ಮಿಲಿಯನ್ ಘನ ಆಡಿಗಳಷ್ಟು ಜಾಗ ಬೆಂಗಳೂರಿನಲ್ಲೇ ಬೇಕೆಂಬ ಬೇಡಿಕೆ ಇದೆ. ಇಷ್ಟಲ್ಲದೆ ಉದ್ದೇಶಿತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಿನ್ನಲೆಯಲ್ಲಿ ಸೂಕ್ತ ಸೌಲಭ್ಯ ಒದಗಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿಗಳನ್ನು ಸೇರಿದಂತೆ ನಿರ್ವಹಣಾ ವ್ಯವಸ್ಥೆಗಳನ್ನು ಖಾಸಗೀಕರಣ ಮಾಡುವ ಅಗತ್ಯವಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಸಂಬಂಧ ಸರಕಾರ ಅಂತಿಮ ನಿರ್ಧಾರವನ್ನು ಸಂಪುಟ ಇನ್ನೂ ಕೈಗೊಂಡಿಲ್ಲ . ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನೀರು ಸರಬರಾಜು ಯೋಜನೆಗೆ ಬಗ್ಗೆ ಫ್ರೆಂಚ್ ಸರಕಾರದ ದ್ವಿಪಕ್ಷೀಯ ಸಹಕಾರ ಕೋರಲಾಗುವುದೆಂದು ಹೇಳಿದ್ದಾರೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications