ವೀರಪ್ಪನ್ ಏನು ಕೇಳಿದಾನೆ ಅನ್ನೋದು ರಾಜ್‌ಗೆ ಗೊತ್ತೇ ಇಲ್ಲ
ಬೆಂಗಳೂರು : ವೀರಪ್ಪನ್ ಬೇಡಿಕೆಗಳ ಬಗೆಗೆ ರಾಜ್‌ಗೆ ಗೊತ್ತಿಲ್ಲ.
ಅಣ್ಣಾವ್ರು ಇಂಥಾ ಬೇಡಿಕೆಗಳನ್ನ ಒಪ್ಕೋತಾರಾ? ನನ್ನ ಏನಾರೂ ಮಾಡ್ಲಿ, ವೀರಪ್ಪನ್ ಕೇಳೋದನ್ನ ಕೊಡಬೇಡಿ ಅಂತ ಹೇಳೋಕಾಗಲ್ವ? ಎಂಬಿತ್ಯಾದಿ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಆದರೆ, ವೀರಪ್ಪನ್ ಕೇಳಿರೋದೇನು ಅನ್ನೋದೇ ಅಣ್ಣಾವ್ರಿಗೆ ತಿಳಿದಿಲ್ಲವಂತೆ.
ರೇಡಿಯೋ ಮೂಲಕ ಪ್ರಸಾರ ಮಾಡಲಾದ ಸಂದೇಶಗಳಲ್ಲಿ ತಮ್ಮ ಕುಟುಂಬದವರ ದನಿಗಳನ್ನು ಮಾತ್ರ ರಾಜ್‌ಗೆ ಕೇಳಿಸಲಾಗಿದೆ. ವೀರಪ್ಪನ್ ಸಹಚರರಲ್ಲಿ ಮೂವರಿಗೆ ಕನ್ನಡ ಗೊತ್ತಿದ್ದು, ರೇಡಿಯೋದಲ್ಲಿ ಪ್ರಸಾರವಾದ ಬೇಡಿಕೆಗಳ ವಿವರಗಳು ಅವರಿಗೆ ತಿಳಿಯದಂತೆ ಎಚ್ಚರ ವಹಿಸಲಾಗಿದೆ ಎಂದು ನಕ್ಕೀರನ್ ಸಂಪಾದಕ ಗೋಪಾಲ್ ತಿಳಿಸಿರುವುದಾಗಿ ರಾಘವೇಂದ್ರ ರಾಜ್‌ಕುಮಾರ್ ಸೋಮವಾರ ಸುದ್ದಿಗಾರರಿಗೆ ಹೇಳಿದ್ದಾರೆ.
‘ವೀರಪ್ಪನ್ ಬೇಡಿಕೆಗಳೇನು ಅನ್ನೋದು ಅಪ್ಪಾಜಿಯವರಿಗೆ ಗೊತ್ತಿಲ್ಲ. ಗೊತ್ತಾದರೆ ಖಂಡಿತ ಅವರು ಒಪ್ಪೋದಿಲ್ಲ. ತಮಗಿಂತ ನಾಡು ಹಾಗೂ ಜನರ ಒಳಿತೇ ಮುಖ್ಯ ಎಂದು ಅವರು ಭಾವಿಸಿದ್ದಾರೆ. ಅವರಿಗೀಗ 72 ವರ್ಷ. ದುಡ್ಡು ಕೊಟ್ಟು ತಮ್ಮನ್ನು ಬಿಡಿಸಿಕೊಂಡು ಹೋಗಿ ಅಂತ ಕೂಡ ಹೇಳೋರಲ್ಲ ಅವರು. ತಮ್ಮ ಜೊತೆ ಒತ್ತೆಯಾಳಾಗಿರೋ ಇತರ ಮೂವರಿಗೆ ನೀವು ಹೋಗಿ, ನಾನು ಬರ್ತೀನಿ ಅಂದರಂತೆ. ಆದರೆ ಅವರು ಅದಕ್ಕೆ ಒಪ್ಪಲಿಲ್ವಂತೆ’ ಎಂದು ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದರು.
ರಾಜ್ ವನವಾಸದ ದಿನಚರಿಯನ್ನು ಗೋಪಾಲ್ ತಿಳಿಸಿದ್ದಾರೆ. ಅದನ್ನ ರಾಘವೇಂದ್ರ ರಾಜ್‌ಕುಮಾರ್ ವಿವರಿಸುವುದು ಹೀಗೆ....
ರಾಜ್‌ಕುಮಾರ್ ದಿನಚರಿ : ವೀರಪ್ಪನ್ ಹಾಗೂ ಅವನ ಕಡೆಯೋರು ಅಪ್ಪಾಜೀನ ಪೆರಿಯಾರ್ (ದೊಡ್ಡವರೇ) ಅಂತಲೇ ಕರಿತಾರಂತೆ. ಅವರನ್ನ ಯಾವುದೇ ಮನೆನಲ್ಲಿ ಇಟ್ಟಿಲ್ಲ. ಪಾಲಿಥಿನ್ ಡೇರೆ ಹಾಕಿ ಕೊಟ್ಟಿದಾರಂತೆ. ಒಂದು ಹನಿ ನೀರೂ ಒಳಗೆ ಬರೋಲ್ವಂತೆ. ಅಪ್ಪಾಜಿ ದಿನಾ ರಾತ್ರಿ ಬೇಗ ಮಲಗುತ್ತಾರಂತೆ. ಬೆಳಿಗ್ಗೆ 6ಕ್ಕೆ ಎದ್ದು, ಸ್ವಲ್ಪ ವಾಕ್ ಮಾಡಿ, ಯೋಗಾಸನ ಕೂಡ ಹಾಕ್ತಾರಂತೆ.
‘ಆಗಸ್ಟ್ 15ಕ್ಕೆ ನನ್ನ ಎರಡನೇ ಮಗನ ಹುಟ್ಟುಹಬ್ಬ : ಗೋಪಾಲ್ ಕಾಡಿಗೆ ಹೋದಾಗ ಅಪ್ಪಾಜಿಗೆ ಅಂತ ಹೊಸ ಅಂಗಿ- ಪಂಚೆ, ಶಾಲು ತಗೊಂಡು ಹೋಗಿದ್ದರಂತೆ. ಆದರೆ ಅಪ್ಪಾಜಿ ಅಂಗಿ- ಪಂಚೆ ಬೇಡ ಅಂದರಂತೆ. ತುಂಬಾ ಬಲವಂತ ಮಾಡಿದ್ದಕ್ಕೆ ಶಾಲನ್ನು ಇಟ್ಟುಕೊಂಡರಂತೆ. ಗೋಪಾಲ್ ಬಿಸ್ಲೆರಿ ನೀರನ್ನೂ ತಗೊಂಡು ಹೋಗಿದ್ದರು. ಅಪ್ಪಾಜಿ ಅದನ್ನ ಕುಡೀಲಿಲ್ವಂತೆ. ಮನೇಲೂ ಬಿಸ್ಲೆರಿ ನೀರನ್ನ ಅವರು ಕುಡೀತಿರ್ಲಿಲ್ಲ. ಬೇಕು ಅನ್ನಿಸಿದಾಗ ಬೆಚ್ಚನೆಯ ನೀರನ್ನ ಕುಡೀತಾರಂತೆ.
ಗೋಪಾಲ್ ಕಾಡನ್ನು ಬಿಡೋ ಮುಂಚೆ, ಆಗಸ್ಟ್ 15ಕ್ಕೆ ನನ್ನ ಎರಡನೇ ಮಗನ ಹುಟ್ಟುಹಬ್ಬ, ಅಷ್ಟೊತ್ತಿಗೆ ನನ್ನ ಕರೆದುಕೊಂಡು ಹೋಗ್ತೀರಾ ಅಂತ ಅಪ್ಪಾಜಿ ಕೇಳಿದರಂತೆ (ರಾಘವೇಂದ್ರ ರಾಜ್‌ಕುಮಾರ್ ಕಣ್ಣು ತುಂಬಿತು).
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications