Get Updates
Get notified of breaking news, exclusive insights, and must-see stories!

ರಾಜ್‌ಕುಮಾರ್‌ ಅವರನ್ನು ಜತೆಯಲ್ಲೇ ಕರೆತರಲು ಗೋಪಾಲ್‌ಗೆ ಮನವಿ

ಚೆನ್ನೈ: ಚೆನ್ನೈನಲ್ಲಿ ಸಂಧಾನಕಾರ ಗೋಪಾಲ್‌ ಹಾಗೂ ಇತರ ಉನ್ನತ ಅಧಿಕಾರಿಗಳೊಂದಿಗೆ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರ ಸುದೀರ್ಘ ಮಾತುಕತೆ. ಬುಧವಾರ ಅಥವಾ ಗುರುವಾರ ಮತ್ತೆ ಕಾಡಿಗೆ ತೆರಳಲು ಗೋಪಾಲ್‌ ಒಪ್ಪಿಗೆ. ರಾಜ್‌ಕುಮಾರ್‌ ಶೀಘ್ರ ಬಿಡುಗಡೆಗೆ ಸೂರಪ್‌ಸ್ಟಾರ್‌ ರಜನಿ ಕಾಂತ್‌ ಒತ್ತಾಯ ..ಇದು ರಾಜ್‌ ಅಪಹರಣವಾಗಿ 15 ದಿನಗಳು ಕಳೆದ ನಂತರದ - ಭಾನುವಾರದ ವಿದ್ಯಮಾನ.

ರಾಜ್‌ಕುಮಾರ್‌ ಅವರನ್ನು ಶೀಘ್ರ ವೀರಪ್ಪನ್‌ ಬಂಧನದಿಂದ ಬಿಡಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕರುಣಾನಿಧಿ ಅವರು ಭಾನುವಾರ ತಮಿಳುನಾಡು ಮುಖ್ಯಕಾರ್ಯದರ್ಶಿ, ಪೊಲೀಸ್‌ ಮಹಾನಿರ್ದೇಶಕರು, ಸಂಧಾನಕಾರ ಗೋಪಾಲ್‌ ಹಾಗೂ ಉನ್ನತ ಅಧಿಕಾರಿಗಳ ಜತೆ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದ್ದಾರೆ. ರಾಜ್‌ಕುಮಾರ್‌ ಅವರನ್ನು ಗೋಪಾಲ್‌ ಈ ಬಾರಿಯ ತನ್ನ ಯತ್ನದಲ್ಲಿ ಬಿಡುಗಡೆ ಮಾಡಿಸುತ್ತಾನೆ , ಬರುವಾಗ ಜತೆಯಲ್ಲೇ ಕರೆತರುತ್ತಾನೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ರಾಜ್‌ಕುಮಾರ್‌ ಅವರನ್ನು ಬಿಡಿಸಿಕೊಂಡು ಬರಲು ಕಾಡಿಗೆ ಹೋಗಲೂ ಸಿದ್ಧ ಎಂದು ಹೇಳಿದ್ದ ರಜನಿ ಕಾಂತ್‌ ಅವರು ಕರುಣಾನಿಧಿ ಅವರೊಂದಿಗೆ ಮಾತುಕತೆ ನಡೆಸಿ, ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ವೀರಪ್ಪನ್‌ ಬಳಿಗೆ ಮತ್ತೆ ತೆರಳುತ್ತಿರುವ ಗೋಪಾಲ್‌ಗೆ ಈ ಬಾರಿ ತಮ್ಮ ಸಂಗಡವೇ ರಾಜ್‌ಕುಮಾರ್‌ ಹಾಗೂ ಮತ್ತಿತರನ್ನು ಕರೆದುಕೊಂಡು ಬರುವಂತೆ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಕೋರಿದ್ದಾರೆ. ವೀರಪ್ಪನ್‌ ಕೇಳಿರುವ ಎಲ್ಲ ವಿವರಣೆ ಹಾಗೂ ಪೂರಕ ಕ್ರೋಡೀಕೃತ ದಾಖಲೆಗಳ ಸಂಗ್ರಹದಲ್ಲಿ ಎರಡೂ ರಾಜ್ಯಗಳು ನಿರತವಾಗಿವೆ.

ರಾಜ್‌ಕುಮಾರ್‌ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ರಜನಿಕಾಂತ್‌ ಅವರು ಆಕಾಶವಾಣಿಯ ಮೂಲಕ ವೀರಪ್ಪನ್‌ನಿಗೆ ಮನವಿ ಮಾಡಲು ಸಹ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ವೀರಪ್ಪನ್‌ಗೇ ಷರತ್ತು ?: ತಮಿಳು ಉಗ್ರವಾದಿ ಸಂಘಟನೆಯ ಐವರನ್ನು ಬಂಧನದಿಂದ ಬಿಡುಗಡೆ ಮಾಡಬೇಕೆಂದು ಕೋರಿರುವ ವೀರಪ್ಪನ್‌ ಬೇಡಿಕೆಯನ್ನು ಈಡೇರಿಸಲು ತಮಿಳುನಾಡು ಸರಕಾರ ಒಪ್ಪಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ, ಈ ಐವರ ಬಿಡುಗಡೆಗೆ ಮುನ್ನ ವೀರಪ್ಪನ್‌ ರಾಜ್‌ಕುಮಾರ್‌ ಹಾಗೂ ಇತರ ಮೂವರನ್ನು ಬಿಡುಗಡೆ ಮಾಡಲು ತಾನು ಸಿದ್ಧ ಎಂಬ ಸಂದೇಶವನ್ನು ಮೊದಲು ಕಳುಹಿಸಬೇಕು ಎಂಬುದು ತಮಿಳುನಾಡಿನ ಷರತ್ತಾಗಿದೆ ಎಂದೂ ಹೇಳಲಾಗುತ್ತಿದೆ.

ಐವರು ತಮಿಳು ಉಗ್ರವಾದಿಗಳನ್ನು ಬಿಡುಗಡೆಗೊಳಿಸುವ ಸಲುವಾಗಿ ಗೃಹ ಇಲಾಖೆಯ ವರಿಷ್ಠಾಧಿಕಾರಿಗಳು ಶನಿವಾರ ಹಾಗೂ ಭಾನುವಾರ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಕರ್ನಾಟಕ ಸರಕಾರಕ್ಕೆ ರಹಸ್ಯ ಸಂದೇಶವೊಂದನ್ನು ಸಹ ಕಳುಹಿಸಲಾಗಿದೆ ಎಂದೂ ಮೂಲಗಳು ತಿಳಿಸಿವೆ. ಈ ಐವರನ್ನು ಕಾಡಿನ ಎಲ್ಲೆಗೆ ತಂದು ಬಿಡುಗಡೆ ಮಾಡುವ ಬಗ್ಗೆ ಸಹ ಚರ್ಚಿಸಲಾಗಿದ್ದು, ಗೋಪಾಲ್‌ ಜತೆಯಲ್ಲಿ ಲಿಖಿತವಾಗಿ ಈ ಸಂದೇಶ ಕಳುಹಿಸಲಾಗುತ್ತಿದೆ ಎನ್ನಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+