ತರಿಕೆರೆಯಲ್ಲಿ ಮಳೆ ತರಿಕೆರೆಯಲ್ಲಿ ಮಳೆ
ಗಳೂರು : ಬಂಡೀಪುರದಲ್ಲಿ 14 ಸೆಂಟಿ ಮೀಟರ್ಮಳೆ ಸುರಿದಿದೆ ಅಂತ ಹವಾಮಾನ ಇಲಾಖೆಯವರ ರಿಪೋರ್ಟ್ ಬಂತು. ಬಂಡೀಪುರದಲ್ಲಿ ಜೀರುಂಡೆ ಸದ್ದು , ಹಕ್ಕಿ ಪಕ್ಕಿಗಳ ಕೂಗು...ಕಾಡಾನೆಗಳ ಘೀಳು ಬಿಟ್ಟರೆ ಬೇರೇನು ಕೇಳಿಸದಷ್ಟು ದಟ್ಟವಾದ ಅರಣ್ಯವಿದೆ. ಅಲ್ಲಿ ಮಳೆ ಜಡಿಗುಟ್ಟಿ ಬರುವುದರಲ್ಲಿ ಏನು ವಿಶೇಷ ಇಲ್ಲವಲ್ಲಾ ಅಂತ ಯೋಚಿಸುತ್ತಿರುವಾಗಲೇ ಶಿರಾ ಮತ್ತು ತರಿಕೆರೆಯಿಂದ ನಮ್ಮ ಪ್ರತಿನಿಧಿಗಳು ಕಳಿಸಿದ ಫ್ಯಾಕ್ಸ್ ಬಂತು.
ಶಿರಾದಲ್ಲಿ 18 ಸೆಂಟಿಮೀಟರಿನಷ್ಟು ಮಳೆ ಬಂದು ಅಲ್ಲಿಯವರೆಲ್ಲ ನಮಗೆ ರಾಜಸ್ಥಾನದ ಗತಿಯಾಗುವುದಿಲ್ಲ ಎಂದು ಖುಷಿ ಪಡುತ್ತಿರುವಾಗಲೇ, ಶನಿವಾರದಂದು ಮತ್ತೆ ಆರು ಸೆಂಟಿ ಮೀಟರಿನಷ್ಟು ಬಿಡದೆ ಸುರಿದ ಮಳೆ ಜಾಜಿ ಕಟ್ಟೆಯಲ್ಲಿ ತುಂಬಿದ ನೀರು ಬತ್ತಿ ಹೋಗದಂತೆ ತಡೆಯಿತು. ತಡವಾಗಿ ಬಂದ ಮಳೆಗಾಲದ ಹುರುಪು ಶಿರಾದ ಓಣಿ , ಕಾಲೋನಿಗಳಲ್ಲಿ ಎದ್ದು ಕಾಣುತ್ತದೆ.
ತರಿಕೆರೆ, ಕಡೂರಿನಲ್ಲಿ ಕುಡಿಯುವ ನೀರು ಕೊಡುವ ಬಾವಿಗಳೆಲ್ಲಾ ಬತ್ತಿದ್ದವು. ತರಿಕೆರೆಯ ಕೆಲವು ಹಳ್ಳಿಗಳಿಗೆ ಭದ್ರಾ ಜಲಾಶಯದ ನೀರು ಜೀವ ತುಂಬಲಿದೆ. ಇದರ ಜೊತೆಗೆ ತರಿಕೆರೆಯಲ್ಲಿಯೂ 7 ಸೆಂಟಿ ಮೀಟರ್ ಮಳೆ ಬಂದು ಉಳುಮೆ, ಬಿತ್ತನೆ ಅಂತ ಅಲ್ಲಿಯವರು ಕನಸು ಕಾಣಲಾರಂಭಿಸಿದ್ದಾರೆ. ಶನಿವಾರದಂದು ಗುಲ್ಬರ್ಗ, ಕುಣಿಗಲ್ ಮತ್ತು ಮೈಸೂರಿನಲ್ಲಿ ತ-ಲಾ 4 ಸೆಂಟಿ ಮೀಟರ್ ಮಳೆಯಾಗಿದೆ. ಹಾಗೆ ನೋಡಿದರೆ ಕಳೆದ ವಾರ ಮಳೆಯಾಗಬೇಕಿದ್ದ ಊರುಗಳಿಗೆಲ್ಲಾ ಮಳೆ ಸುರಿಯಲೇ ಇಲ್ಲ. ದಕ್ಷಿಣ ಕನ್ನಡದಲ್ಲಿ ಪುಷ್ಯ ನಕ್ಷತ್ರದಲ್ಲಿ ಬರಬೇಕಿದ್ದ ಮಳೆ ಬರಲಿಲ್ಲ. ಮಂಡ್ಯ, ಮೈಸೂರುಗಳಲ್ಲಿ ಸಾಕಷ್ಟು ಪ್ರಮಾಣದ ಮಳೆ ಸುರಿಯಲಿಲ್ಲ ಎಂದು ಹವಾಮಾನ ಇಲಾಖೆ ಹೇಳುತ್ತದೆ.
-
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ?












Click it and Unblock the Notifications