ಕೋಲಾರದಲ್ಲಿ 53 ಬಾಲಕಾರ್ಮಿಕರ ಪತ್ತೆ
ಕೋಲಾರ : ಜಿಲ್ಲೆಯಲ್ಲಿ 53 ಬಾಲ ಕಾರ್ಮಿಕರನ್ನು ಗುರುತಿಸಿಲಾಗಿದ್ದು, ಬಾಲಕಾರ್ಮಿಕ ನಿಷೇಧ ಕಾಯಿದೆಯನ್ವಯ ಆಯಾ ಮಾಲಿಕರ ವಿರುದ್ಧ ಮೊಕದ್ದಮೆ ಹೂಡಲಾಗಿದೆ ಎಂದು ಜಿಲ್ಲಾ ಕಾರ್ಮಿಕಾಧಿಕಾರಿ ಕೃಷ್ಣಪ್ಪ ಹೇಳಿದ್ದಾರೆ.
ಸರಕಾರ ಬಿಡುಗಡೆ ಮಾಡಿರುವ 15 ಲಕ್ಷ ರೂಪಾಯಿಗಳನ್ನು ಜಿಲ್ಲೆಯ ಬಾಲಕಾರ್ಮಿಕರ ಪುನರ್ವಸತಿಗೆ ವಿನಿಯೋಗಿಸಲಾಗುವುದು. ಜಿಲ್ಲೆಯಲ್ಲಿರುವ ಸ್ವಯಂ ಸೇವಾ ಸಂಸ್ಥೆಗಳು ಬಾಲಕಾರ್ಮಿಕರ ಪುನರ್ವಸತಿ ಶಾಲೆಗಳನ್ನು ನಡೆಸಲು ಮುಂದೆ ಬಂದಲ್ಲಿ ಅಂತಹವರಿಗೆ ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೃಷ್ಣಪ್ಪ ಹೇಳಿದರು.












Click it and Unblock the Notifications