Get Updates
Get notified of breaking news, exclusive insights, and must-see stories!

ಮೇಣದ ಬೊಂಬೆ ನೀನಾ?

ನ್ಯೂಯಾರ್ಕ್‌ : ಯಾರಾಗಲಿದ್ದಾರೆ ಥೌಸಾಡ್ಸ್‌ನ ಶಾಶ್ವತ ಪುತ್ಥಳಿ? ಅದು ಯಾರು ಬೇಕಾದರೂ ಆಗಬಹುದು. ಮ್ಯಾನ್‌ ಆಫ್‌ ದಿ ಮಿಲೆನಿಯಮ್‌ ಎಂದು ಅನೇಕರು ಗುರುತಿಸಿರುವ ಅಮಿತಾಬ್‌ ಬಚ್ಚನ್‌, ಶಾರುಖ್‌ ಖಾನ್‌ರ ಸ್ಫೂರ್ತಿ ದಿಲಿಪ್‌ ಕುಮಾರ್‌, ಸ್ವತಃ ಶಾರುಖ್‌ ಖಾನ್‌, ಎವರ್‌ಗ್ರೀನ್‌ ನಟಿ ರೇಖಾ ಅಥವಾ ಧಕ್‌ ಧಕ್‌ ಚೆಲುವೆ ಮಾಧುರಿ ದೀಕ್ಷಿತ್‌. ಇವರಲ್ಲಿ ಅದೃಷ್ಟ ಯಾರದೋ? ಲಂಡನ್‌ನ ಪ್ರಸಿದ್ಧ ಪ್ರವಾಸಿ ತಾಣ ಮೇಡಂ ಥೌಸಾಡ್ಸ್‌ ನ ಮೇಣದ ಪುತ್ಥಳಿಗಳ ಸಂಗ್ರಹಾಲಯದಲ್ಲಿ ಯಾರ ಶಾಶ್ವತ ಮೂರ್ತಿ ಪ್ರತಿಷ್ಠಾಪನೆಯಾಗಲಿದೆ ಎಂಬುದು ಸದ್ಯದಲ್ಲೇ ತಿಳಿಯಲಿದೆ.

ಈ ತಿಂಗಳ ಅಕ್ಟೋಬರ್‌ನಲ್ಲಿ ಜಗತ್ತಿನ ವಿವಿಧ ಕ್ಷೇತ್ರಗಳ ಸುಮಾರು 200 ಸ್ಟಾರ್‌ಗಳ ಮೇಣದ ಪುತ್ಥಳಿಗಳನ್ನು ನ್ಯೂಯಾರ್ಕ್‌ನ ಮೇಡಂ ಥೌಸಾಡ್ಸ್‌ನಲ್ಲಿ ಪ್ರತಿಷ್ಠಾಪಿಸಲಿದ್ದಾರೆ. ಇದಕ್ಕಾಗಿ ಆಯ್ಕೆ ಶುರುವಾಗಿದ್ದು, ಬಾಲಿವುಡ್‌ನ ಒಬ್ಬರ ಮೂರ್ತಿ ಸ್ಥಾಪನೆಯಾಗಲಿದೆ. ಸಿನಿಮಾ, ಟಿವಿ, ಸಂಗೀತ, ಕಲೆ, ಕ್ರೀಡೆ, ರಾಜಕೀಯ, ಇತಿಹಾಸ ಮುಂತಾದ ಕ್ಷೇತ್ರಗಳಲ್ಲಿ ಛಾಪು ಮೂಡಿಸಿರುವ ಕೆಲವರನ್ನು ಆರಿಸಿ, ಅವರ ಮೇಣದ ಪುತ್ಥಳಿಗಳನ್ನು ನಿರ್ಮಿಸಿ, ಶಾಶ್ವತ ಪ್ರದರ್ಶನಕ್ಕೆ ಇಡಲಾಗುತ್ತದೆ. 1835ರಲ್ಲಿ ಸ್ಥಾಪಿತವಾದ 'ಮೇಡಂ ಥೌಸಾಡ್ಸ್‌ ವ್ಯಾಕ್ಸ್‌ ವರ್ಕ್ಸ್‌" ಜಗತ್ತಿನ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದು.

ಈಗ ನಮ್ಮ ಮುಂದಿರುವ ಪ್ರಶ್ನೆ ಬಾಲಿವುಡ್‌ನ ಯಾರಿಗೆ ಈ ಶಾಶ್ವತ ಸ್ಥಾನ? ಅಂತಿಮ ಆಯ್ಕೆ ಇನ್ನೂ ಆಗಿಲ್ಲ . ಈ ಆಯ್ಕೆ ಬಹಳ ಕಷ್ಟ . ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವವರ ಸಂಖ್ಯೆ ಕಡಿಮೆಯೇನಿಲ್ಲ. ನಿರ್ಮಿಸಲಿರುವ ಪುತ್ಥಳಿಗಳಲ್ಲಿ ಭಾರತದ ಮಹಾತ್ಮ ಗಾಂಧಿ ಹಾಗೂ ಟಿಬೆಟ್‌ನ ಧರ್ಮಗುರು ದಲೈಲಾಮಾ ಪ್ರಮುಖರು ಎನ್ನುತ್ತಾರೆ ಮೇಡಂ ಥೌಸಾಡ್ಸ್‌ನ ಮಾರ್ಕೆಟಿಂಗ್‌ ಅಧಿಕಾರಿ ನ್ಯಾನ್ಸಿ ಮ್ಯಾಕ್‌ಗ್ರಾತ್‌. ಮೇಡಂ ಥೌಸಾಡ್ಸ್‌ ಸಂಗ್ರಹಾಲಯದಲ್ಲಿ ಮೇಣದ ಪುತ್ಥಳಿಗಳನ್ನಷ್ಟೇ ಅಲ್ಲದೆ ಹಲವಾರು ಛಾಯಾಚಿತ್ರಗಳನ್ನೂ ಪ್ರದರ್ಶಿಸಲಾಗುತ್ತದೆ. ಪುತ್ಥಳಿಗಳ ನಿರ್ಮಾಣ ಬಹಳ ಕಷ್ಟ. ವಿನ್ಯಾಸ, ಅಳತೆಗಳಿಗೆ ಲಭ್ಯವಿರುವ ಫೋಟೋಗಳೇ ಆಧಾರ. ಆದರೆ, ಸಹಸ್ರಾರು ಪ್ರವಾಸಿಗರು ಅವನ್ನು ನೋಡಿ ವ್ಯಕ್ತಪಡಿಸುವ ಮೆಚ್ಚುಗೆಯೇ ಆ ಕಷ್ಟಕ್ಕೆ ಸಿಗುವ ಪುರಸ್ಕಾರ ಎನ್ನುತ್ತಾರೆ ಮೆಕ್‌ಗ್ರಾತ್‌.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+