ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆನೆ ಸುಜ್ಞಾನಮೂರ್ತಿಯ ನೆನೆ

By Super
|
Google Oneindia Kannada News

ಈ ಶುಕ್ರವಾರ, ಶುಭ ಶುಕ್ರವಾರ ಆದುದರ ಬಗ್ಗೆ ಹಲವು ರೀತಿಯ ವಿವರಣೆಗಳು ಸಿಗುತ್ತವೆ. ಗಾಡ್‌ ಫ್ರೆೃಡೇ ಎನ್ನುವುದೇ ಗುಡ್‌ ಫ್ರೆೃಡೇ ಆಗಿ ಪರಿವರ್ತನೆ ಆಗಿದೆ ಎನ್ನುವುದು ಒಂದು ವಾದವಾದರೆ ಜರ್ಮನ್‌ ಭಾಷೆಯ ಗ್ಯೂಟ್‌ ಫ್ರೆೃಟಾಗ್‌, ಗುಡ್‌ ಫ್ರೆೃಡೇ ಆಗಿದೆ ಎನ್ನುವುದು ಇನ್ನೊಂದು ವಾದ. ಏನೇ ಆದರೂ ಅಂದು ಕ್ರಿಶ್ಚಿಯನ್ನರು ನಡೆಸುವ ಪ್ರಾರ್ಥನಾ ಕಾರ್ಯಕ್ರಮವನ್ನು ಗಮನಿಸಿದಾಗ ಅದು ಕ್ರಿಸ್ತ ನು ಶಾಂತಿ ಸಹನೆಗಾಗಿ ಬದುಕನ್ನೇ ತ್ಯಾಗ ಮಾಡಿದ ಶುಕ್ರವಾರ ಎನ್ನುವುದೇ ಸರಿಯೆನಿಸುತ್ತದೆ. ಏಸುಕ್ರಿಸ್ತನ ದ ಲಾಸ್ಟ್‌ ಸಪ್ಪರ್‌ ಯಾರಿಗೆ ಗೊತ್ತಿಲ್ಲ ! ನಿನ್ನೆ ರಾತ್ರಿಯ ಆ ಕೊನೆಯ ಭೋಜನ . ಜ್ಯೂಗಳು ಏಸುಕ್ರಿಸ್ತನನ್ನು ಮೋಸದಿಂದ ಹಿಡಿದ ದಿನ ಇದಾದುದರಿಂದ ಕ್ರಿಶ್ಚಿಯನ್ನರು ಈ ದಿನ ಉಪವಾಸ ಇರುತ್ತಾರೆ. ಇನ್ನೂ ಸ್ವಲ್ಪ ಜಾಸ್ತಿ ಸಂಪ್ರದಾಯವಾದಿಗಳಾಗಿದ್ದವರು ಗುರುವಾರ ಮತ್ತು ಶನಿವಾರದಂದು ಕಡಿಮೆ ಆಹಾರವನ್ನು ಸೇವಿಸುತ್ತಾರೆ. ಶುಕ್ರವಾರ ಪೂರ್ತಿ ಉಪವಾಸ ಇದ್ದು ಬಿಡುತ್ತಾರೆ. ರಾತ್ರಿ ಚರ್ಚಿನಲ್ಲಿ ಲೋಕ

ಕಲ್ಯಾಣಕ್ಕಾಗಿ ಪ್ರಾರ್ಥನಾ ಕಾರ್ಯಕ್ರಮವಿರುತ್ತದೆ. ಏಸುವನ್ನು ಶಿಲುಬೆಗೇರಿಸಿದ ಕಥೆಯನ್ನು ಹದಿನಾಲ್ಕು ಹಂತಗಳಲ್ಲಿ ಚರ್ಚಿನ ಗೋಡೆಯ ಮೇಲೆ ಚಿತ್ರಿಸಲ್ಪಟ್ಟಿರುತ್ತದೆ. ಗುಡ್‌ ಫ್ರೆೃಡೇ ದಿನ ಈ ಹದಿನಾಲ್ಕು ಹಂತಗಳನ್ನು ನೆನೆಸಿಕೊಂಡು ಸಮಾಜ ಹಿತಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.

ಗುಡ್‌ ಫ್ರೆೃಡೇ ಗುಣಾತ್ಮಕ ಚಿಂತನೆಗೊಂದು ಕನ್ನಡಿ. ಸರ್ವಹಿತಕ್ಕಾಗಿ ಸ್ವ ಹಿತವನ್ನು ಬಲಿಕೊಟ್ಟ ಮಹಾಪುರುಷನನ್ನು ನೆನೆಸಿಕೊಳ್ಳುವ ಶುಭದಿನ. ಇಂದಿನ ಈ ವ್ಯಸ್ತ ಬದುಕಿನಲ್ಲಿ ಓಡುವ ದಿನಗಳ ಮಧ್ಯೆ ಈ ಶುಭದಿನವನ್ನೂ ನುಸುಳಿ ಹೋಗಲು ಬಿಡುವುದು ಬೇಡ. ಸ್ವ ಅವಲೋಕನದ ಸಾಂಕೇತಿಕ ದಿನವಾದ ಶುಭ ಶುಕ್ರವಾರ ಶುಭಶಕುನಗಳ ಹೊಸಿಲಾಗಲಿ.

English summary
Good Friday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X