ಅಹ್ಮದಾಬಾದಿನಲ್ಲೊಬ್ಬ ಕೋತಿ ಪ್ರೇಮಿಯ ಮಾನವೀಯ ಸಂವೇದನೆಯ ಕತೆ

ಅಹ್ಮದಾಬಾದ್, ಅಕ್ಟೋಬರ್ 27: ಅಸಹಜವಾಗಿ ವರ್ತಿಸುವವರಿಗೆ 'ಮಂಗನ ಹಾಗಾಡ್ಬೇಡ' ಅನ್ನೋ ಮಾತು ಬಾಯಲ್ಲಿ ಸಹಜವಾಗಿ ಬಂದುಬಿಡುತ್ತದೆ. ಆದರೆ ಕೋತಿಗಳಲ್ಲಿ ಅಸಹಜ ವರ್ತನೆಯನ್ನೂ ಮೀರಿ ಮಾನವೀಯತೆಯನ್ನು ಹುಡುಕುವ ಕಣ್ಣುಗಳೆಷ್ಟು?!

ಗುಜರಾತಿನ ಅಹ್ಮದಾಬಾದಿನ ಸ್ವಪ್ನಿಲ್ ಸೋನಿ ಅವರಿಗೆ ಕೋತಿಗಳ ಬಗ್ಗೆ ಹೇಳತೀರದ ಅಕ್ಕರೆಯ ಭಾವ, ಹನುಮಂತನ ಭಕ್ತರಾದ ಸ್ವಪ್ನಿಲ್ ಕೋತಿಗಳನ್ನು ಮಾನವೀಯ ಕಣ್ಣುಗಳಲ್ಲಿ ನೋಡುವವರು.

ಕಳೆದ ಹತ್ತು ವರ್ಷಗಳಿಂದ ಸುಮಾರು 500 ಕ್ಕೂ ಹೆಚ್ಚು ಕೋತಿಗಳಿಗೆ ಪ್ರತಿ ಸೋಮವಾರ ಚಪಾತಿಗಳನ್ನು ನೀಡುವ ಅಭ್ಯಾಸ ಇಟ್ಟುಕೊಂಡಿದ್ದಾರೆ.

ತಮ್ಮ ಹಣಕಾಸಿನ ಮುಗ್ಗಟ್ಟಿನ ಸಮಯದಲ್ಲೂ ಅವರು 1700 ಕ್ಕೂ ಹೆಚ್ಚು ಚಪಾತಿಗಳನ್ನು ಮಾಡಿ ಪ್ರತಿವಾರ ಕೋತಿಗಳಿಗೆ ಹಂಚಿತ್ತಿದ್ದರು.

Here is a human interest story of Monkey man from Ahmedabad

ಕೋತಿಗಳ ಬಗೆಗೆ ಅವರು ತೋರುತ್ತಿದ್ದ ಅಕ್ಕರೆಯನ್ನು ಕಂಡ ಜನ ಸ್ವಪ್ನಿಲ್ ಅವರಿಗೆ 'ಮಂಕಿ ಮ್ಯಾನ್' ಎಂದೇ ಕರೆಯುವುದಕ್ಕೆ ಆರಂಭಿಸಿದರು. ಈಗಲೂ ಆ ಭಾಗದಲ್ಲಿ ಮಂಕಿ ಮ್ಯಾನ್ ಎಂದೇ ಸ್ವಪ್ನಿಲ್ ಖ್ಯಾತಿ ಪಡೆದಿದ್ದಾರೆ.

'ಕಳೆದ ಆರು ತಿಂಗಳ ಹಿಂದೆ ನಾನು ಸಾಕಷ್ಟು ಹಣಕಾಸಿನ ಸಂಕಷ್ಟ ಎದುರಿಸಿದೆ. ಈಗ ನಾನು ಮತ್ತೆ ಚೇತರಿಸಿಕೊಂಡಿದ್ದೇನೆ. ಕೋತಿಗಳಿಗೆ ಆಹಾರ ನೀಡುವ ಕೆಲಸ ಮತ್ತೆ ಮುಂದುವರಿದಿದೆ. ನನ್ನ್ ಮಗನೂ ಈ ಕೆಲಸವನ್ನು ಮುಂದುವರಿಸುತ್ತಾನೆ' ಎಂದು ಹೆಮ್ಮೆಯಿಂದ ಹೇಳುತ್ತಾರೆ ಮಂಕಿ ಮ್ಯಾನ್ ಸ್ವಪ್ನಿಲ್ ಸೋನಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+