ರಾಹುಲ್ ಬಾಯಲ್ಲಿ ಅನರ್ಥವಾದ ಬಸವಣ್ಣನ ವಚನ
ಬಸವಣ್ಣನ ವಚನಗಳನ್ನು ಸಾಂದರ್ಭಿಕವಾಗಿ, ತಮ್ಮ ಅನುಕೂಲಕ್ಕೆ ತಕ್ಕಂತೆ, ವಚನಗಳ ಮೇಲಿನ ತಮ್ಮ ಜ್ಞಾನವನ್ನು ಪ್ರಚುರಪಡಿಸಲು ಕೆಲ ರಾಜಕಾರಣಿಗಳು ಬಳಸುವುದು ಅಪರೂಪವೇನಲ್ಲ. ಆದರೆ, ಆ ವಚನಗಳ ಅರ್ಥವನ್ನು ಪಾಲಿಸುವಲ್ಲಿ ಯಾವತ್ತಿದ್ದರೂ ಹಿಂದೆ.
ಆದರೆ, ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ, 12ನೇ ಶತಮಾನದ ಕ್ರಾಂತಿಯೋಗಿ ಬಸವಣ್ಣ, ಆತನ ವಚನಗಳು, ಆತ ಅಂದಿನ ಕಾಲದಲ್ಲಿಯೇ ಪ್ರತಿಷ್ಠಾಪಿಸಿದ್ದ ಪ್ರಜಾಪ್ರಭುತ್ವ, ಉತ್ತರ ಕರ್ನಾಟಕದಲ್ಲಿ ರಾಜಕಾರಣಿಗಳು ಮಾಡುತ್ತಿರುವ ಭಾಷಣಗಳಲ್ಲಿ ಅವಿಭಾಜ್ಯ ಅಂಗವಾಗಿದೆ.
ಬಸವಣ್ಣನವರ ವಚನಗಳನ್ನು ಈ ರಾಜಕಾರಣಿಗಳು ನಿಜಜೀವನದಲ್ಲಿ ಎಷ್ಟು ಪಾಲಿಸುತ್ತಾರೋ, ಆ ವಚನಗಳಲ್ಲಿನ ಅರ್ಥ ಹೇಳುವವರಿಗೆ ತಿಳಿದಿದಿಯೋ ಇಲ್ಲವೋ, ಒಟ್ಟಿನಲ್ಲಿ ಬಸವಣ್ಣನ ವಚನಗಳನ್ನು ಬಳಸಿ, ಭಕ್ತಿ ಭಂಡಾರಿ ಬಸವೇಶ್ವರನನ್ನೂ ರಾಜಕಾರಣದ ಮೊಗಸಾಲೆಗೆ ಎಳೆದುತಂದಿದ್ದಾರೆ.

ಬಸವಣ್ಣನ ವಚನಗಳನ್ನು ಆಗಾಗ ನೆನಪಿಸಿಕೊಳ್ಳುವ ಉದ್ದೇಶ ಒಳ್ಳೆಯದೇ ಆದರೂ, ಕನ್ನಡ ಗೊತ್ತಿಲ್ಲದ ರಾಹುಲ್ ಗಾಂಧಿಯವರು ಅದನ್ನು ಆಡುವಾಗ ಅರ್ಥ ಕಳೆದುಕೊಂಡು, ಅನರ್ಥವಾಗಿ, ಅಧ್ವಾನವಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯದ ವಸ್ತುವಾಗಿದ್ದು ಮಾತ್ರ ದುರಂತ.
ಅಂಥದೊಂದು ನಮೂನೆ ಇಲ್ಲಿದೆ ನೋಡಿ. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಅವರು ಮಾತನಾಡುತ್ತಿದ್ದಾಗ,
ಬಸವಣ್ಣನ
'ಇವನಾರವ, ಇವನಾರವ, ಇವನಾರವ
ಇವ ನಮ್ಮವ, ಇವ ನಮ್ಮವ, ಇವ ನಮ್ಮವ... ಎಂಬುದನ್ನು
ರಾಹುಲ್...
ಇವನರ್ವ, ಇವನರ್ವ, ಇವನರ್ವ
ಇವನಮ್ವ, ಇವನಮ್ವ, ಇವನಮ್ವ' ಎಂದು ಸ್ಪಷ್ಟವಾಗಿ ಉಚ್ಚಾರಣೆ ಮಾಡದಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಈಡಾಗಿದೆ.
ಇದೇ ಬಸವಣ್ಣನವರನ್ನು ನರೇಂದ್ರ ಮೋದಿಯವರೂ ನೆನೆಸಿಕೊಂಡಿದ್ದರು. ಆದರೆ, ಅವರು ಯಾವುದೇ ವಚನವನ್ನು ನುಡಿಯಲು ಹೋಗಿರಲಿಲ್ಲ. ಆದರೆ, ಕನ್ನಡದಲ್ಲಿ ಕೆಲಬಾರಿ ಮಾತಾಡಲು ಹೋಗಿ ಆಭಾಸವಾಗಿದ್ದೂ ಇದೆ. ಈ ನಾಯಕರಿಗೆ ಕನ್ನಡ ಗೊತ್ತಿಲ್ಲದಿದ್ದರೂ, ಅವರಿವರಿಂದ ಹೇಳಿಸಿಕೊಂಡು ಕನ್ನಡ ಭಾಷೆ ಬಳಸುವ ಅಗತ್ಯವಿದೆಯೆ?
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications