ಬರ್ನಿ ಸ್ಯಾಂಡರ್ಸ್ ಮಿಮ್ಸ್: ಗೊಂಬೆಗಾಗಿ ಆನ್‌ಲೈನ್‌ನಲ್ಲಿ 40,000 ಡಾಲರ್ ಬಿಡ್ಡಿಂಗ್
ವಾಷಿಂಗ್ಟನ್, ಜನವರಿ 27: ಅಮೆರಿಕಾ ನೂತನ ಅಧ್ಯಕ್ಷ ಜೋ ಬೈಡೆನ್ ಪ್ರಮಾಣವಚನ ಸ್ವೀಕರಿಸುವ ದಿನದಂದು ಸಾಕಷ್ಟು ವೈರಲ್ ಆಗಿದ್ದ ಮುಂಗೋಪದ ಬರ್ನಿ' ನ ಮಿಮ್ಸ್ ಇನ್ನೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲೇ ಇದೆ. ಅನೇಕ ಸೆಲೆಬ್ರೆಟಿಗಳು ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಬರ್ನಿ ಮಿಮ್ಸ್ ಶೇರ್ ಮಾಡುತ್ತಿದ್ದಾರೆ.
ಇದೀಗ ಇದೇ ಖ್ಯಾತಿಯನ್ನು ಬಳಸಿಕೊಂಡು ಬರ್ನಿ ಸ್ಯಾಂಡರ್ಸ್ ಗೊಂಬೆಯನ್ನು ತಯಾರಿಸಿ ಆನ್‌ಲೈನ್‌ನಲ್ಲಿ ಹರಾಜಿಗಿಡಲಾಗಿದ್ದು. ಈ ಗೊಂಬೆಯನ್ನು ಪಡೆಯಲು ಬಿಡ್ ಪ್ರಕ್ರಿಯೆ ಜೋರಾಗಿದ್ದು, ಈಗಾಗಲೇ 40,000 ಅಮೆರಿಕನ್ ಡಾಲರ್ ಮೊತ್ತವನ್ನು ಸಂಗ್ರಹಿಸಿದೆ.
ಇನ್ನು ಈ ಗೊಂಬೆ ತಯಾರಿಸಿದವರು ಉತ್ಪಾದನಾ ವೆಚ್ಚ ಬಿಟ್ಟು, ಶೇಕಡಾ 100ರಷ್ಟು ಲಾಭವನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ.

ಕೈಯಿಂದ ಮಾಡಲಾಗಿರುವ ಈ ಗೊಂಬೆಯು ಭಾನುವಾರ ಆರಂಭಿಕ ಬಿಡ್ ಕೇವಲ 99 ಸೆಂಟ್ಸ್ ಆಗಿದ್ದು, ಅಂತಿಮವಾಗಿ ಮಂಗಳವಾರದ ವೇಳೆಗೆ 167 ಬಿಡ್‌ಗಳನ್ನು ಪಡೆಯಿತು ಮತ್ತು ವಿಜೇತ ಬಿಡ್ 20,300 ಡಾಲರ್‌ವವರೆಗೆ ಏರಿತು, ಅಂತಿಮವಾಗಿ ಅದನ್ನು, 40,000 ಡಾಲರ್‌ಗೆ ಕೊನೆಗೊಳಿಸಲಾಯಿತು.












Click it and Unblock the Notifications