ಝೆನ್ ಕಥೆ: ಯಾರ ಗುರು ಉತ್ತಮರು?

ಬೌದ್ಧ ಬಿಕ್ಕುಗಳ ಗುಂಪು ಒಂದು ಊರಿನಿಂದ ಇನ್ನೊಂದು ಊರಿಗೆ ಸುತ್ತಾಡುತ್ತಿರುತ್ತವೆ. ಒಮ್ಮೆ ಇಂತಹ ಬಿಕ್ಕುಗಳ ಅನೇಕ ಗುಂಪುಗಳು, ನಾಲ್ಕು ರಸ್ತೆಗಳು ಸೇರುವ ಊರೊಂದರಲ್ಲಿ ತಂಗಿದ್ದವು. ಬೇರೆ ಬೇರೆ ಗುಂಪಿನ ನಾಲ್ಕು ಜನ ಶಿಷ್ಯ ಸನ್ಯಾಸಿಗಳು ತಮ್ಮ ನಡುವೆ ತಮ್ಮ ಅನುಭವಗಳ ಬಗ್ಗೆ ಚರ್ಚಿಸುತ್ತಿದ್ದರೆ. ಆ ಮಧ್ಯೆ ಅವರ ಮಾತು 'ಯಾರ ಗುರು ಹೆಚ್ಚು ಶ್ರೇಷ್ಠ ಮತ್ತು ಉತ್ತಮ?' ಎಂಬುದರ ಕುರಿತು ಹೊರಳಿತು.

ಒಬ್ಬ ಶಿಷ್ಯ ಹೇಳಿದ, 'ನನ್ನ ಗುರು ಎಷ್ಟು ಶಕ್ತಿಶಾಲಿಯೆಂದರೆ, ನಾಲ್ಕು ದಿನಗಳ ಹಿಂದೆ ನಮ್ಮ ಗುಂಪನ್ನು ಡಕಾಯಿತರು ಸುತ್ತುವರಿದಾಗ, ಕೇವಲ ತನ್ನ ಕಣ್ಸನ್ನೆಯಿಂದಲೇ ಎಲ್ಲರನ್ನೂ ಹಿಮ್ಮೆಟ್ಟಿಸಿದ'.

ಇನ್ನೊಬ್ಬ ಶಿಷ್ಯ, 'ನನ್ನ ಗುರು ಝೆನ್ ಮಾತ್ರವಲ್ಲ, ರಕ್ಷಣಾ ವಿದ್ಯೆಯಲ್ಲಿ ಕೂಡ ಪಾರಂಗತ. ನಲ್ವತ್ತು ಜನರೊಂದಿಗೆ ಕತ್ತಿಹಿಡಿದು ಹೋರಾಡುವಾಗಲೇ, ಇನ್ನೂ ಇಪ್ಪತ್ತು ಜನರನ್ನು ವಾದದಲ್ಲಿ ಮಣಿಸಬಲ್ಲ' ಎಂದ.

Zen Stories Whos Master Is Great

ಮೂರನೆಯ ಶಿಷ್ಯ ಹೇಳಿದ, 'ನನ್ನ ಗುರುವಿಗೆ ಇರುವಷ್ಟು ನಿಯಂತ್ರಣ ಶಕ್ತಿ ನಿಮ್ಮಲ್ಲಿ ಯಾರ ಗುರುವಿಗೂ ಇದ್ದಂತಿಲ್ಲ. ಆತ ದಿನವಿಡೀ ನಿದ್ದೆಮಾಡದೇ, ಆಹಾರ ಸೇವಿಸದೇ ಇರಬಲ್ಲ'.

ಕೊನೆಯ ಶಿಷ್ಯ ಹೇಳಿದ, 'ನನ್ನ ಗುರು ಅದೆಷ್ಟು ಬುದ್ಧಿವಂತನೆಂದರೆ, ಹಸಿವಾದಾಗ ತಿನ್ನುತ್ತಾನೆ ಮತ್ತು ಸುಸ್ತಾದಾಗ ಮಲಗುತ್ತಾನೆ ಹಾಗೂ ಅಗತ್ಯವಿದ್ದಾಗ ಮಾತನಾಡುತ್ತಾನೆ'.

***

ಸತ್ತ ಮೇಲೆ ಏನಾಗುತ್ತದೆ?

ಒಬ್ಬ ಚಕ್ರವರ್ತಿ ಝೆನ್ ಗುರು ಗ್ಯುಡೊನನ್ನು ಕೇಳಿದ, 'ಜ್ಞಾನಿಯಾದವನು ಸತ್ತಮೇಲೆ ಏನಾಗುತ್ತದೆ?'

'ನನಗೇನು ಗೊತ್ತು?' ಎಂದ ಗ್ಯುಡೊ.

'ನಿಮಗೆ ಗೊತ್ತಿರಬೇಕು, ನೀವು ಗುರು' ಎಂದ ಚಕ್ರವರ್ತಿ.

'ನಿಜ. ಆದರೆ ಸತ್ತಿಲ್ಲ' ಎಂದ ಗ್ಯುಡೊ.

(ಸಂಗ್ರಹ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+