ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 6)
(ಕಥೆಯ ಮುಂದಿನ ಭಾಗ) "ನಿನ್ನಲ್ಲಿ ಏನೋ ಪ್ರಶ್ನೆ ಇದೆ" ಹಠಾತ್ತನೆ ಹೇಳಿದರು ಸನ್ಯಾಸಿ. ಕರ್ಣನಿಗೆ ಆಶ್ಚರ್ಯ! ಟಿಬೆಟಿಯನ್ ಸನ್ಯಾಸಿಯ ಬಾಯಿಂದ ಸ್ಪಷ್ಟ ಕನ್ನಡ!
"ನಿಮ್ಮ ಹೆಸರು?" ಕರ್ಣ ಅನುಮಾನಿಸಿಕೊಂಡು ಕೇಳಿದ.
"ಛೆ ಮೂರ್ಖ! ಅದಲ್ಲ ನಿನ್ ಪ್ರಶ್ನೆ. ಬೇಗ ಕೇಳು, ಇಲ್ಲಾ ಹೊರಗೆ ತೊಲಗು. ಕಾಲಹರಣ ಮಾಡಬೇಡ".
ಕರ್ಣನಿಗೆ ಇದು ಬುದ್ಧಿಸ್ಟ್ ಸೆಂಟರೋ ಹುಚ್ಚಾಸ್ಪತ್ರೆಯೋ ಸ್ವಲ್ಪ ಸಂದೇಹ ಬಂದಿತು. ಸನ್ಯಾಸಿಯನ್ನೇ ಗಮನಿಸಿದ. ವಯಸ್ಸಾದರೂ ಅವರ ಕಣ್ಣು ಬೆಂಕಿಯಂತೆ ಪ್ರಜ್ವಲಿಸುತ್ತಿತ್ತು. ಕರ್ಣನ ಮೇಲೆ ಏನು ಆವರಿಸಿತೋ ಗೊತ್ತಿಲ್ಲ; ಮಾತು ತಾನಾಗಿಯೇ ಹೊರಬಂದಿತು:

"ವಂಚಿಸಿಕೊಳ್ಳುವವ ಇದ್ದರೆ ಮಾತ್ರ ವಂಚಕಿ".
"ಯಾಕೆ ಪ್ರೀತಿ ಕಡುಯಾತನೆ?"
"ಯಾತನೆ ಪಡುವವ ಇದ್ದರೆ, ಕಾರಣ ಬೇಕೇ? ಅವನಿಗೆ ಎಲ್ಲವೂ ಯಾತನೆ".
"ಹಾಗಾದ್ರೆ ನನ್ನ ಎಲ್ಲಾ ಸಮಸ್ಯೆಗೂ ನಾನೇ ಕಾರಣ?"
"ನಿನ್ನ ಸಮಸ್ಯೆ ಈ ಕ್ಷಣ ಎಲ್ಲಿದೆ ತೋರಿಸು. ನಿನ್ನ ಜೇಬಿನಲ್ಲಿದೆಯಾ?"
"ನಾವು ತುಂಬಾ ಬಯಸುವುದು ಯಾಕೆ ಕೈ ತಪ್ಪುತ್ತದೆ?"
"ಶಾಂತ ಮನಸಿನಿಂದ ಬಯಸುವ ಸಂದರ್ಭವನ್ನು ಮಾತ್ರ ಬ್ರಹ್ಮಾಂಡ ಸೃಷ್ಟಿಸುತ್ತದೆ."
"ಇಬ್ಬರ ಜೀವನದ ಪಯಣ ಯಾಕೆ ಬೇರೆ ಆಗುತ್ತದೆ? "
"ನಿನ್ನ ಕಾರಿಗೆ ನೀನೊಬ್ಬನೇ ಚಾಲಕ. ಬೇರೆಯವರ ಪಯಣ ನಿನಗೇಕೆ?"
"ಸಿಗಬೇಕಾದದ್ದು ಕೈತಪ್ಪಿದರೆ ಏನು ಮಾಡಬೇಕು?"
"ಅದು ನಿನಗೆ ಸಿಗಬೇಕಾದದ್ದು ಎಂದು ಯಾರು ಹೇಳಿದ್ದು?"
"ಹಾಗಾದರೆ ನಾವೇನು ಬಯಸಲೇ ಬೇಡವೆ?"
"ಈಗ ನಿಂಗೆ ಏನು ಬೇಕು ಹೇಳು. ಕಾಫಿ ಬೇಕಾ?"
"ನಮ್ಮ ಜೀವನ ನಮ್ಮ ಕೈಯಲ್ಲಿದೆಯೇ?"
"ಇಲ್ಲ. ನಿನ್ನ ಕೈಯಲ್ಲಿಲ್ಲ. ನಿನ್ನ ಮನಸ್ಸಿನಲ್ಲಿದೆ. ನೀನು ಹೇಗೆ ಯೋಚಿಸುತ್ತೀಯೋ ಹಾಗೆಯೇ ನಿನ್ನ ಜೀವನ".
ಇದ್ದಕ್ಕಿದ್ದಂತೆ ಸನ್ಯಾಸಿ ಕೈ ಎತ್ತಿ ಸುಮ್ಮನ್ನಿರುವಂತೆ ಸೂಚಿಸಿದರು. ನಂತರ ಕರ್ಣನ ಹತ್ತಿರ ಬಂದು ಎಡಗಡೆಗೆ ಕೈತೋರಿಸಿದರು. ಅವನು ಅದೇ ದಿಕ್ಕಿನಲ್ಲಿ ನೋಡಿದ. ಟಪ್ ಟಪ್! ಸನ್ಯಾಸಿ ಕರ್ಣನ ಕಪಾಳಕ್ಕೆ ಎರಡು ಬಾರಿ ಸತತವಾಗಿ ಹೊಡೆದರು. ಕರ್ಣ ದಿಗ್ಭ್ರಾಂತನಾಗಿ ತನ್ನ ಕೆನ್ನೆಯನ್ನು ಮುಟ್ಟಿಕೊಂಡು ಅವರ ಕಡೆ ತಿರುಗಿದ. ಸನ್ಯಾಸಿ ಶಾಂತವಾಗಿ ಅವನನ್ನೇ ನೋಡುತ್ತಿದ್ದರು. "ಈಗ ಹೇಳು. ಏನು ನಿನ್ನ ಪ್ರಶ್ನೆ?" ಕರ್ಣ ಸ್ವಲ್ಪ ಹೊತ್ತು ಮೌನವಾಗಿದ್ದ. ನಂತರ ಅಲ್ಲಿಂದ ಓಡುವುದಕ್ಕೆ ಶುರು ಮಾಡಿದ ಕರ್ಣ, ನಿಂತಿದ್ದು ತನ್ನ ರೂಮಿನ ಗೇಟಿನ ಮುಂದೆಯೇ. ಕಷ್ಟಪಟ್ಟು ಉಸಿರಾಡುತ್ತಾ ಗೇಟಿನ ಮುಂದೆ ಕುಳಿತುಕೊಂಡನು. ನಂತರ ತಲೆ ಎತ್ತಿ, ಎದುರಿನಲ್ಲಿದ್ದ ರಂಗಶಂಕರದ ಕಡೆ ನೋಡಿದ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications