ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 4)

(ಕಥೆಯ ಮುಂದಿನ ಭಾಗ) ಹಂಸಿನಿಯ ಮುಖದಲ್ಲಿದ್ದ ನಗು ತಕ್ಷಣ ಅಳಸಿಹೋಯಿತು. ದಿಗ್ಭ್ರಾಂತಳಾಗಿ ಸುಮ್ಮನೆ ಕೂತುಬಿಟ್ಟಳು. ಹೀಗೇ ಬಿಟ್ಟರೆ ಸ್ವಲ್ಪ ಮುಜುಗರವಾಗುತ್ತದೆ ಎಂದುಕೊಂಡು ಕರ್ಣ ಮುಂದುವರಿದ, "ನಾನು ನಿಮ್ಮನ್ನ ತುಂಬಾ ಇಷ್ಟಪಟ್ಟಿದ್ದೀನಿ. ಇಬ್ಬರ ಓದು ಮುಗಿದಿದೆ. ನೀವು ಹೂಂ ಅಂದ್ರೆ ನಿಮ್ಮ ತಂದೆ ತಾಯಿ ಜೊತೆ ಮಾತಾಡ್ತೀನಿ..."

ಹಂಸಿನಿ ಏನೋ ಆಘಾತ ಆದಂತೆ ಮುಖ ಮಾಡಿಕೊಂಡು ಕರ್ಣನ ಕಡೆ ನೋಡಿದಳು, "ಅಲ್ಲಾ, ನಿಜವಾಗಿಯೂ ಕೇಳ್ತಾಯ್ದ್ಯಾ?".

ಕರ್ಣ ಸ್ವಲ್ಪ ಗೊಂದಲದಿಂದ, "ಹೂಂ" ಎಂದ.

ಇಲ್ಲೀ ತನಕ ಮಧುರವಾದ ಹಂಸಿನಿಯ ಧ್ವನಿ ಈಗ ಗಂಭೀರವಾಯಿತು, "ನಿಂಗೆ ಜೀವನದ ಬಗ್ಗೆ ಏನೂ ಗೊತ್ತಿಲ್ಲ ಅಂತ ಗೊತ್ತಾಯಿತು. ಅಲ್ಲಾ, ಯಾವ್ದೋ ಹುಡ್ಗಿ ಒಂದೆರಡು ಸಲ ಸ್ಮೈಲ್ ಮಾಡಿದ್ಲು ಎಂಬ ಕಾರಣಕ್ಕೆ, ಅವಳ್ಗೂ ನೀನು ಇಷ್ಟ ಅಂತ ನೀ ಹೇಗೆ ನಿರ್ಧರಸ್ದಿ?" ಕರ್ಣ ಏನನ್ನೋ ಹೇಳಲು ಆರಂಭಿಸಿದ, ಅದಕ್ಕೆ ಹಂಸಿನಿ ತಡೆಯೊಡ್ಡಿ, "ತಾಳು! ಅಲ್ಲಾ ಅಷ್ಟಕ್ಕೂ ನಿಂಗೆ ಒಂದು ಹುಡ್ಗಿ ನಾ ಸಾಕೋಕೆ ಏನು ಯೋಗ್ಯತೆ ಇದೆ? ಹೋಗ್ಲೀ, ಏನಾದ್ರೂ ಸ್ಪೆಷಲ್ ಟ್ಯಾಲೆಂಟ್ ಅದರೂ ಇದೆಯಾ? ನಿನ್ನ ನಾನು ಕ್ಲಾಸ್ ಒಳಗೆ ಬಿಟ್ರೆ ಇನ್ನೆಲ್ಲೂ ನೋಡೇ ಇಲ್ಲ! ಕಿರಣ್ ನೋಡು ಓದಿನಲ್ಲಿ rank, ಪ್ರೀತಂ ದೇಶ ಪ್ರಸಿದ್ಧ ಕ್ರೀಡಾಪಟು, ಕಶ್ಯಪ್ ಡಾನ್ಸ್ ಮತ್ತು ಹಾಡಿನಲ್ಲಿ ನಿಪುಣ. ನಿನ್ನಲ್ಲಿ ಆತಾರ ಏನಿದೆ?" ಕರ್ಣ ತಲೆ ಬಗ್ಗಿಸಿಕೊಂಡು ಸುಮ್ಮನಿದ್ದ. ಹಂಸಿನಿ ಮುಂದುವರಿದಳು, "ನನಗೆ ಹಲವಾರು ಕನಸುಗಳಿವೆ. ಮುಂದೆ ಎಂಬಿಎ ಮಾಡ್ಬೇಕು. ವೆಸ್ಟರ್ನ್ ಡಾನ್ಸ್ ಕಲಿಬೇಕು, ನನ್ನ ಅಪ್ಪ ಅಮ್ಮಂಗೆ ವಿಶ್ವವೆಲ್ಲಾ ತೋರಿಸ್ಬೇಕು ಅಂತ. ನಿನ್ನಲ್ಲಿ ಆತರ ಒಂದಾದರೂ ಆಸೆ ಇದ್ಯಾ?" ಕರ್ಣನಿಗೆ ಏನೂ ಹೇಳಲು ತೋಚಲಿಲ್ಲ.

Tup Tup Buddhist Center

ಹಂಸಿನಿ ಒಂದು ದೀರ್ಘ ಉಸಿರು ತೆಗೆದುಕೊಂಡು, "ನಿಜ ಹೇಳ್ಬೇಕು ಅಂದ್ರೆ, ನಂಗೆ ಡಿಗ್ರಿಯ ಮೂರನೆ ವರ್ಷದಲ್ಲಿ ಗೊತ್ತಾಗಿದ್ದು ನಿನ್ ಹೆಸ್ರೇನು ಅಂತ. ಅಲ್ಲಿವರ್ಗೂ ನನಗೆ ನೀನೊಂದು ಅಸ್ಪಷ್ಟ ಚಿತ್ರ. ಕೆಲಸ ಸಿಕ್ಕಿದ ಮಾತ್ರಕ್ಕೆ ಏನ್ ಬೇಕಾದರೂ ಸಿಗತ್ತೆ ಅನ್ಕೊಬೇಡ. ಜೀವನ-ಸಂಸಾರ ಅನ್ನೋದು ನೀನಂದುಕೊಂಡಷ್ಟು ಸರಳವಲ್ಲ. ಸಲೀಸೂ ಅಲ್ಲ. ಅಷ್ಟಕ್ಕೂ ನಿಂಗೆ ನನ್ ಬಗ್ಗೆ, ನನ್ ಹಿನ್ನೆಲೆಯ ಬಗ್ಗೆ ಏನ್ ಗೊತ್ತು? ನಮ್ಮನೆಯವರೆಲ್ಲಾ ತುಂಬಾ ಸಂಸ್ಕಾರವಂತ ಜನ. ನನ್ನ ಮದ್ವೆ ಆಗೋಕ್ಕೆ ಆಗಲೇ ನನ್ ತಂದೆ ತಾಯಿಗೆ ಭಾರೀ ಕಡೆಗಳಿಂದ ಐದಾರು ಸಂಬಂಧಗಳು ಬಂದಿವೆ. ಅವೆಲ್ಲವನ್ನು ಬಿಟ್ಟು ನಾನು ನಿನ್ ಜೊತೆ ಯಾಕ್ ಬರ್ಲಿ?"

"ಯಾಕೆ ಅಂದ್ರೆ ನಾ ನಿಮ್ಮನ್ನ ತುಂಬಾ ಪ್ರೀತಿಸ್ತಿದ್ದೀನಿ ಮತ್ತೆ ತುಂಬಾ ಚೆನ್ನಾಗಿ ನೋಡ್ಕೋತೀನಿ" ಕರ್ಣನ ಧ್ವನಿ ದುಃಖದಿಂದ ಮುರಿಯಿತು. ತನಗೆ ಗೊತ್ತಿಲ್ಲದೆ ಕಣ್ಣೀರು ತುಂಬಿಕೊಂಡವು. ಹಂಸಿನಿ ಇದನ್ನು ಗಮನಿಸಿದರೂ ಮುಂದುವರಿದಳು, "ನೀನೊಬ್ನೆ ಅನ್ಕೊಬೇಡ ನನ್ನನ್ನ ಇಷ್ಟ ಪಟ್ಟಿರೋದು. ಈವರೆಗೂ ಏಳೆಂಟು ಹುಡುಗರು ನನ್ನ ಹಿಂದೆ ಸುತ್ತುತ್ತಿದ್ದರು. ಆದರೆ ಮದುವೆ ಬಗ್ಗೆ ಮಾತಾಡೋ ಮೂರ್ಖತನ ಇದ್ದಿದ್ದು ನಿನಗೊಬ್ಬನಿಗೆ. ನಿನ್ನ ಕೆಲ್ಸಕ್ಕೆ ಆಲ್ ದಿ ಬೆಸ್ಟ್". ಹಂಸಿನಿ ಎದ್ದು ಹೋದಳು. ಕರ್ಣನ ಕಣ್ಣೀರಿನ ಹನಿಗಳು, ಕೆನ್ನೆಯ ಮೇಲೆ ಸುರುಳಿ, ಮಣ್ಣಿನ ನೆಲೆದಲ್ಲಿ ತುಟುಕಿದವು. ಮುಂದೆ ಇದ್ದ ಖಾಲಿ ಮೈದಾನದ ನಡುವಿನ ಸೂರ್ಯಾಸ್ತವನ್ನು ಕರ್ಣ ನೋಡುತ್ತಾ ಕುಳಿತ. ನಂತರ ಮಂಡಿಯೂರಿ ಮುಖ ಮುಚ್ಚಿಕೊಂಡು ಒಬ್ಬನೆ ಬಿಕ್ಕಿ ಬಿಕ್ಕಿ ಅತ್ತನು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+