ಪತ್ತೇದಾರಿ ಕಾದಂಬರಿ: ಆರು ತಿಂಗಳ ಹಿಂದೆಯೂ ಇದೇ ರೀತಿ ಕೊಲೆ!

ನಾನು ತಲೆ ತಗ್ಗಿಸಿ ಯೋಚಿಸತೊಡಗಿದೆ. ಈ ಮೊಬೈಲ್ ಇರೋದ್ರಿಂದ ಪೊಲೀಸರ ಕೆಲಸ ಎಷ್ಟು ಸಲೀಸಾಗಿದೆ ಎಂದುಕೊಂಡೆ. ಎಷ್ಟೋ ಕೇಸುಗಳನ್ನು ಬರೀ ಮೊಬೈಲ್ ಕರೆಗಳ ಮೂಲಕ ಅಥವಾ ಅವು ಇರುವ ಜಾಗಗಳ ಮೂಲಕಾನೇ ಬಗೆ ಹರಿಸಿದ್ದಾರೆ. ಕಳ್ಳರು ಅಥವಾ ಕೊಲೆಗಡುಕರು ಮೊಬೈಲ್ ಇಟ್ಟುಕೊಂಡರೂ ತೊಂದ್ರೆ, ಇಟ್ಟು ಕೊಳ್ಳದಿದ್ರೂ ತೊಂದರೆ.

ಇಟ್ಟುಕೊಳ್ಳದಿದ್ರೆ ಯಾಕೆ ಇಟ್ಟುಕೊಂಡಿಲ್ಲ ಎಂಬ ಅನುಮಾನ ಮೂಡುವುದು ತುಂಬಾ ಸಹಜ. ಬರೀ ಮೊಬೈಲ್ ಕರೆಗಳ ಮೂಲಕವೇ ಇಬ್ಬರ ನಡುವಿನ ಸಂಬಂಧ ಎಂತಹದ್ದು ಎಂದು ಹೇಳಿಬಿಡಬಹುದು. ಆದರೆ ಈ ಹುಡುಗಿ ನಿಜವಾಗಲೂ ಜಾಣೆ. ಆ ತೊಂದರೆಯಲ್ಲಿ ಸಿಕ್ಕಿ ಹಾಕಿಕೊಳ್ಳುವ ಗೋಜಿಗೇ ಹೋಗಿಲ್ಲ. ಕೇಸು ಗೋವಿಂದಾ ಎನಿಸಿತು.

'Tabbaliyu neenade magale'-A detective mystery part-4

"ಹೋಟೆಲ್ಲು, ಮತ್ತೆ ಅಕ್ಕಪಕ್ಕದ ಸಿಸಿಟಿವಿ ಕ್ಯಾಮೆರಾ ನೋಡಿದ್ರಾ?" ನಾನು ಕೇಳಿದೆ.

"ನೋಡಿದೀವಿ ಸರ್. ಅವ್ಳು ರಾತ್ರಿ ಹನ್ನೆರಡು ಗಂಟೆಗೆ ಹೋಟೆಲ್ಲಿನಿಂದ ಹೊರಗೆ ಹೋಗಿರೋದು ಕಂಡಿದೆ. ಆದ್ರೆ ಅದರಲ್ಲೂ ಅವ್ಳು ಫುಲ್ ಓವರ್ ಹಾಕಿಕೊಂಡು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದಾಳೆ. ನಾನು ಗೇಟಿನ ಬಳಿಯಿದ್ದ ಸೆಕ್ಯುರಿಟಿಗೆ ಕೇಳ್ದಾಗ, ಯಾವುದೋ ಟಾಕ್ಸಿ ಹತ್ತಿ ಬೆಂಗಳೂರಿನ ಕಡೆಗೆ ಹೋದ್ಳು ಅಂತಾ ಹೇಳ್ದ. ಅವ್ನು ಟಾಕ್ಸಿ ನಂಬರ್ ನೋಡಿರಲಿಲ್ಲ. ಆದ್ರೂ ನಾನ್ ಬಿಡಲಿಲ್ಲ ಸರ್", ಎಂದ ಹಲ್ಲು ಕಿರಿಯುತ್ತಾ.

"ಏನ್ ಮಾಡಿದ್ರಿ?"

"ಎಲ್ಲಾ ಟಾಕ್ಸಿ ಕಂಪನಿಗಳಿಗೆ ಈ ವಿಷ್ಯ ತಿಳಿಸಿ ಅವಳನ್ನಾ ಯಾರು ಅಲ್ಲಿಂದ ಪಿಕ್ ಅಪ್ ಮಾಡಿರೋದು ಅಂತಾ ಪತ್ತೆ ಹಚ್ದೆ."

ನನಗ್ಯಾಕೋ ಒಳಗೊಳಗೇ ನಗು ಬಂತು. ಪೊಲೀಸರು ಯಾವತ್ತೂ ಹೀಗೇ. ತಲೆ ಉಪಯೋಗಿಸಿ ಸುಳಿವುಗಳನ್ನು ಹುಡುಕುವ ಬದಲು ರೂಢಿಯಲ್ಲಿರುವ ವಿಧಾನಗಳನ್ನೇ ಬಳಸುತ್ತಾರೆ. "ನೀವು ಟಿ.ವಿ.ನಲ್ಲಿ ಬರೋ ಸಿ.ಐ.ಡಿ. ಧಾರಾವಾಹಿ ನೋಡ್ತೀರಾ?" ನಾನು ಕೇಳಿದೆ.

"ಹೌದು ಸರ್. ಯಾಕೆ?" ಅಂದ.

"ಅದರಲ್ಲೂ ಹೀಗೇ... ಅವ್ರು ಫೊಟೋ ಹಿಡ್ಕೊಂಡು ನೀವ್ ನೋಡಿದಿರಾ, ನೀವ್ ನೋಡಿದಿರಾ ಅಂತಾ ಬೀದಿ ಬೀದಿ ಅಲೀತಾರೆ", ಎಂದು ನಕ್ಕೆ.

ಅವನೂ ನಕ್ಕ. ಅವನಿಗೇನೂ ಅವಮಾನವಾದಂತೆ ಕಾಣಲಿಲ್ಲ.

"ಆ ಟಾಕ್ಸಿಯವ್ನು ಅವಳನ್ನಾ ಮೆಜೆಸ್ಟಿಕ್ ಹತ್ರ ಬಿಟ್ನಂತೆ. ಅವ್ನೂ ಅವಳ ಮುಖ ನೋಡಿಲ್ಲ. ಆ ಟಾಕ್ಸಿ ಬುಕ್ ಮಾಡೋದಕ್ಕೆ ಬಳಸಿರೋ ನಂಬರ್ರೂ ಕದ್ದಿರೋದೆ".

"ಅಲ್ಲಿಗೆ ಕತೆ ಮುಗೀತು", ನಾನು ಮಂಗಳ ಹಾಡಿದೆ. "ಈಗ ನನ್ನಿಂದ ಏನ್ ಆಗ್ಬೇಕು ಹೇಳಿ", ಎಂದೆ.

"ಏನಾದ್ರೂ ಕ್ಲೂ ಹುಡುಕಿ ಕೊಡಿ ಸರ್", ಎಂದು ಬೇಡಿದ.

ನಾನು ಒಂದರ್ಧ ನಿಮಿಷ ತಲೆ ಕೆರೆದುಕೊಂಡೆ. ಏನೂ ಹೊಳೆಯಲಿಲ್ಲ. "ಏನೂ ಹೊಳೀತಾ ಇಲ್ವಲ್ರಿ.." ಎಂದೆ.

"ಸರ್. ಇನ್ನೊಂದು ಇಂಟರೆಸ್ಟಿಂಗ್ ವಿಷ್ಯ ಇದೆ. ಹೇಳ್ಲಾ?" ಎಂದ.

"ಇನ್ನೂ ಇದ್ಯಾ?"

"ಹೌದು ಸರ್...", ಎನ್ನುತ್ತಾ ಜಗತ್ತಿನ ಅತಿ ದೊಡ್ಡ ರಹಸ್ಯ ಹೇಳುವಂತೆ ಮುಖ ಮಾಡಿ, "ಥೇಟ್ ಇದೇ ರೀತಿಯ ಕೊಲೆ ಆರು ತಿಂಗಳ ಹಿಂದೆ ತುಮಕೂರು ರೋಡ್ ನಲ್ಲಿರೋ ಹೋಟೆಲ್ ನಲ್ಲಿ ನಡೆದಿತ್ತು ಸರ್. ಅಲ್ಲೂ ಅಷ್ಟೇ... ಕದ್ದಿರೋ ಸಿಮ್ ಗಳನ್ನೇ ಉಪಯೋಗಿಸಿದ್ದು".
ನಾನು ಹೌಹಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+