ಕಥೆ : ಅವನು ನಂಗೆ ಇಷ್ಟವಿಲ್ಲ ಕಣೇ...! (ಭಾಗ 2)

Love story for Valentine's Day
ಆಫೀಸ್‌ಗೆ ಹೋಗೋಕೆ ಇನ್ನೂ ಸಮಯವಿದ್ದರಿಂದ ಶಶಾಂಕ ಟಿವಿ ನೋಡುತ್ತ ಕುಳಿತಿದ್ದ. ಆಗ ಆಫೀಸ್‌ನಿಂದ ಪ್ರಾಜೆಕ್ಟ್‌ನಲ್ಲಿ ಏನೋ ತಪ್ಪಾಗಿರೋ ಕುರಿತು ಬಾಸ್‌ ಫೋನ್‌ ಮಾಡಿ ಕಿರಿಕಿರಿ ಮಾಡಿದ್ರು. ಆತನ ತಲೆಕೆಟ್ಟು ಹೋಗಿತ್ತು ಆಗ ಬಂತು ಸ್ವಾತಿಯ ಕಾಲ್‌ಮಿ' ಮೆಸೇಜ್‌. ಅವಳಿಗೆ ಕಾಲ್‌ ಮಾಡಿ ಹೇಳಿ ಮೇಡಂ’ ಅಂತ ಗಂಭೀರವಾಗಿ ಹೇಳಿದ.

ಸುಮ್ಮಗೆ ಕಾಲ್‌ ಮಾಡಿದ್ದು’ ಅಂತ ಅವಳ ಪೆಚ್ಚು ಮಾತಿಗೆ.

ಏನ್ರಿ ಮಾಡೋಕೆ ಏನು ಕೆಲಸವಿಲ್ವ? ಏನಂದುಕೊಂಡಿದ್ದಿರಾ?’ ಇವನ ಬಯ್ಗುಳ ಕೇಳಿದ ಶ್ರಾವ್ಯಗೆ ರಂಜಿತ ಮಾಡಿದ ಪಾಠವೆಲ್ಲ ಮರೆತೋಯ್ತು. ಅದು ಅದು’ ಅಂತ ಪೇಚಾಡಿದಳು.

ಅಲ್ಲ ಅಪರಿಚಿತ ಹುಡುಗರಿಗೆ ಕಾಲ್‌ ಮಾಡ್ತಿರಲ್ವ. ಇಷ್ಟು ಧೈರ್ಯ ಹುಡುಗಿರಿಗೆ ಇರಬಾರದು’ ಶಶಾಂಕನ ಇಂತಹ ಬೈಯ್ಗುಳ ಕೇಳಿ ಶ್ರಾವ್ಯಗೆ ಅಳು ಬರೋದಷ್ಟೇ ಬಾಕಿ. ಹುಡುಗರು ಕ್ಷಣಕ್ಕೊಂದು ರೀತಿ ವರ್ತಿಸ್ತಾರಾ? ಅನ್ನೋ ಪ್ರಶ್ನೆಯೊಂದು ಮನದಲ್ಲಿ ಮೂಡಿತ್ತು. ಹಾಗಲ್ಲ ಸರ್‌ ಅದು..' ಅಂತ ಮತ್ತೆ ತಡವರಿಸಿದಳು.

ಈಗ ಶಶಾಂಕ್‌ ಕೂಲಾಗಿ ಹೇಳಿದ. ನೋಡಮ್ಮ ನೀನ್ಯಾರು ಅಂತ ನಂಗೊತ್ತಿಲ್ಲ. ನಿಂಗೂ ನಾನ್ಯಾರು ಅಂತ ಗೊತ್ತಿಲ್ಲ. ಹೀಗೆಲ್ಲ ಮಾಡಬಾರದು.’

ಸಾರ್‌ ನಾನು ಸುಮ್ಮನೆ ಮಾಡಿದ್ದು. ಯಾಕೋ ಬೋರಾಗಿತ್ತು. ಅದಕ್ಕೆ’ ಅಂತ ಹೇಳಿ ಅವನು ಏನು ಹೇಳ್ತಾನೆ ಅಂತ ಕೇಳದೇ ಫೋನ್‌ ಕಟ್‌ ಮಾಡಿದಳು. ಫೋನ್‌ ಕಟ್ಟಾದಾಗ ಶಶಾಂಕ ಯೋಚಿಸಿದ.

ನಾನು ಹೇಳಿದ್ದು ಹೆಚ್ಚಾಯಿತಾ. ಪಾಪ ಹುಡುಗಿ ಭಯಪಟ್ಟಳಾ ಹೇಗೆ? ಅಂತ ಒಂದು ಮನಸ್ಸು ಹೇಳಿದರೆ, ಇಲ್ಲ ಇದನ್ನು ಮುಂದುವರೆಸಬಾರದು. ಅಂತ ಇನ್ನೊಂದು ಮನಸ್ಸು ಹೇಳಿತು. ಆಗ ಮತ್ತೆ ಶ್ರಾವ್ಯಳ ಸಾರಿ’ ಎಂಬ ಮೆಸೇಜ್‌ ಬಂತು. ಪರವಾಗಿಲ್ಲ. ಏನೋ ಟೆನ್ಷನ್‌ನಲ್ಲಿದ್ದೆ.. ಬೇಜಾರು ಮಾಡ್ಕೊಬೇಡಿ’ ಅಂತ ಮಾರುತ್ತರ ಕಳಿಸಿದ.

ಬೆಳಿಗ್ಗೆ ಅಷ್ಟು ಚೆನ್ನಾಗಿ ಮಾತನಾಡಿದಿರಿ’ ಇವಳು ಮಾರುತ್ತರ ಕಳಿಸಿದಳು. ಹೀಗೆ ಇವರ ಚಾಟಿಂಗ್‌ ಮುಂದುವರೆಯಿತು. ಹೀಗೆ ಶಶಾಂಕನ ಸ್ನೇಹ ಗಳಿಸಿಕೊಳ್ಳುವಲ್ಲಿ ಶ್ರಾವ್ಯ ಯಶಸ್ವಿಯಾದಳು. ಕೆಲವು ದಿನಗಳು ಉರುಳಿದವು. ಆದರೆ ಅವನನ್ನು ಪ್ರೀತಿಯ ಬಲೆಗೆ ಬೀಳಿಸಲು ಅವಳಿಂದ ಸಾಧ್ಯವಾಗಲಿಲ್ಲ. ಅಂದು ವ್ಯಾಲೆಂಟಿನ್ ಡೇ. ಈ ಸಂದರ್ಭ ಅವನಿಗೆ ಕರೆ ಮಾಡಿ ನಿಮಗೆ ನನ್ನ ಮೇಲೆ ಯಾವ ಅಭಿಪ್ರಾಯ ಇದೆ’ ಅಂತ ಅಳುಕುತ್ತ ಕೇಳಿದಳು.

ಅಂದ್ರೆ?’ 'ಏನಿಲ್ಲ ಸುಮ್ಮಗೆ ಕೇಳಿದೆ’

'ನೋಡು ಸ್ವಾತಿ ತಪ್ಪು ತಿಳಿದುಕೊಳ್ಳಬೇಡ. ನನ್ನ ಎಂಗೇಜ್‌ಮೆಂಟ್‌ ಆಗಿದೆ. ಮುಂದಿನ ತಿಂಗಳು ಮದುವೆ’ ಅಂತ ಶಶಾಂಕ ಹೇಳಿದಾಗ ಇವಳಿಗೂ ಕಿಟಲೆ ಮಾಡಬೇಕೆನಿಸಿತು.

ಮುಂದಿನ ತಿಂಗಳು ಮದುವೆನಾ?’ ಇವಳು ಆಶ್ಚರ್ಯ ವ್ಯಕ್ತಪಡಿಸುತ್ತ ಕೇಳಿದಳು.

ಹುಂ. ನಿನ್ನನ್ನೂ ಕರೀತಿನಿ’ ಇವನ ಮಾತಿಗೆ ಅವಳು ನಗುತ್ತ ಕೇಳಿದಳು.

ಹೇಗಿದ್ದಾಳೆ ಸರ್‌ ನಿಮ್‌ ಹುಡುಗಿ’

ಸೂಪರ್‌’ ಅಂತ ಹೇಳಿ ಶಶಾಂಕ ನಕ್ಕಾಗ ಶ್ರಾವ್ಯಳ ಎದೆಯಲ್ಲಿ ಅವ್ಯಕ್ತ ಭಾವವೊಂದು ಹಾದು ಹೊಯಿತು.

ಲವ್‌ ಮಾಡಿ ಮದುವೆಯಾಗ್ತ ಇದ್ದಿರಾ?’ ಇವಳ ಅಧಿಕ ಪ್ರಸಂಗದ ಪ್ರಶ್ನೆಗೆ ಅವನು ಕೋಪಗೊಳ್ಳದೇ ಹೇಳಿದ.

ಹುಂ ಒಂದು ರೀತಿಯಲ್ಲಿ ಲವ್‌ ಮ್ಯಾರೇಜೇ, ನಾನು ಅವಳನ್ನು ಕಳೆದ ವರ್ಷನೇ ಇಷ್ಟಪಟ್ಟಿದ್ದೆ. ಇವತ್ತಿಗೂ ಹೇಳಿಲ್ಲ’ ಮಾರ್ಮಿಕವಾಗಿ ಹೇಳಿದಾಗ ಶ್ರಾವ್ಯಗೆ ಅಚ್ಚರಿ.

ಏನು ನೀವು ಅವಳನ್ನು ಲವ್‌ ಮಾಡಿದ್ರ. ಇನ್ನೂ ಹೇಳಿಲ್ವ. ಹಾಗಾದ್ರೆ ಎಂಗೇಜ್‌ಮೆಂಟ್‌?’

ಹೌದು ನಾನು ಅವಳನ್ನು ಪ್ರೀತಿಸತೊಡಗಿ ಒಂದು ವರ್ಷ ಆಯ್ತು. ಆದ್ರೆ ಹೇಳೋಕೆ ಧೈರ್ಯ ಇರಲಿಲ್ಲ. ಕೊನೆಗೆ ಉಪಾಯ ಮಾಡಿ ಮನೆಯಲ್ಲಿ ಇನ್‌ಡೈರೆಕ್ಟ್‌ ಆಗಿ ತಿಳಿಸಿದೆ. ಮನೆಯವರು ಸಂಪ್ರದಾಯ ಪ್ರಕಾರ ಹೋಗಿ ಹೆಣ್ಣು ಕೇಳಿದ್ರು. ನಾನು ಡೀಸೆಂಟ್‌ ಆಗಿ ಹೆಣ್ಣು ನೋಡೋ ಕಾರ್ಯ ಮುಗಿಸಿದೆ. ಅವಳಿಗೆ ನನ್ನ ಲವ್‌ ಸ್ಟೋರಿ ಇನ್ನೂ ಗೊತ್ತಿಲ್ಲ. ಹ್ಹ..ಹ್ಹ’ ಅಂತ ಇವನು ಹೇಳಿದಾಗ ಶ್ರಾವ್ಯಳ ಮುಖಕ್ಕೆ ರಕ್ತ ನುಗ್ಗಿತ್ತು.

ಆದರೂ ಸುಮ್ಮಗೆ ನಗುತ್ತ ವೆರಿ ಇಂಟ್ರೆಸ್ಟಿಂಗ್‌” ಅಂತ ನಕ್ಕಳು.

ಹುಂ. ಸುಮ್ಮಗೆ ನಿಮ್ಮ ತಲೆ ತಿಂದೆ. ಮದುವೆಗೆ ಕಾಲ್‌ ಮಾಡ್ತಿನಿ. ಖಂಡಿತಾ ಬನ್ನಿ. ಬಾಯ್.‌’ ಶ್ರಾವ್ಯ ಬಾಯ್‌ ಹೇಳಿ ಫೋನ್‌ ಕಟ್‌ ಮಾಡಿದಳು. ಆಮೇಲೆ ರಂಜಿತಾ ಇದಕ್ಕಿಂತ ಒಳ್ಳೆ ಆಫರ್‌ ಇರೋ ಬೇರೆ ಸಿಮ್‌ ತಗೋ’ ಅಂದಳು. ಅದರಲ್ಲಿರುವ ಎಲ್ಲ ಕಾಂಟ್ಯಾಕ್ಟ್‌ಗಳನ್ನು ನಿನ್ನ ಫೋನ್‌ಗೆ ಹಾಕಿಕೊ’ ಅಂತ ಹೇಳಿದಳು.

ಸರಿ ಹಾಕ್ತಿನಿ. ಯಾಕೆ ಅಂತ ಹೇಳು ಅಂದಾಗ ಹೇ ಅವರು ನಂಗೆ ಇಷ್ಟವಾಗಿದ್ದಾರೆ ಕಣೇ. ನಾವು ಫೋನ್‌ ಮಾಡಿದ್ದು ಅಂತ ಅವರಿಗೆ ಗೊತ್ತಾಗೋದು ಬೇಡ’ ಅಂತ ತುಸು ನಾಚಿಕೆಯಿಂದ ಹೇಳಿದಳು.

'ಹೇ ಗುಡ್‌, ಅವರಲ್ಲಿ ಇಷ್ಟ ಇಲ್ಲ ಅಂತ ಹೇಳೋಕೆ ಹೋಗಿ ಬೌಲ್ಡ್‌ ಆದೆಯಾ ಹ್ಹ ಹ್ಹ’ ರಂಜಿತ ಜೋರಾಗಿ ನಗತೊಡಗಿದಳು. ಶ್ರಾವ್ಯಳ ಮುಖ ಕೆಂಪಗಾಗತೊಡಗಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+