ಒಂದು ಆತ್ಮಾನುಭವ!

Aathmanubhava Kannada Short story by Jagadish Nadanahalli
ಇತ್ತೀಚೆಗಷ್ಟೇ ದೆವ್ವದ ಕತೆ ಓದಿ ಮೆಚ್ಚಿದ್ದ ಓದುಗರಿಗೆ ಈ ವಾರ ಇನ್ನೊಂದು ದೆವ್ವದ ಕತೆ! ದೆವ್ವ-ಭೂತ-ಆತ್ಮ ಇವೆಲ್ಲ ಇದೆಯೇ ಎಂದು ಹುಡುಕಲು ಹೊರಟ ವ್ಯಕ್ತಿ, ಕೊನೆಗೆ ಯಾವ ತೀರ್ಮಾನಕ್ಕೆ ಬಂದ ಎನ್ನುವುದು ಕಥನ ಕುತೂಹಲ.

ಸ್ಮಶಾನ! ಸ್ಮಶಾನ ಅಂದತಕ್ಷಣ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಮೂಡುವ ದೃಶ್ಯಗಳಂದ್ರೆ, ಹೆಣ... ಈಗತಾನೆ ಹೆಣ ಸುಟ್ಟು ಆರತಿರೊ ಬೆಂಕಿ... ಗೋರಿಗಳು... ಸ್ಮಶಾನ ಕಾಯಾ ಹರಿಶ್ಚಂದ್ರ (ಹಾರರ್‌ ಫಿಲ್ಮ್‌ಗಳಲ್ಲಿರೊ ಹಾಗೆ) ಇನ್ನು ಏನೇನೋ...

ದೆವ್ವ, ಭೂತ, ಆತ್ಮ, ಪಿಶಾಚಿ ಆದ್ರೆ ನಂಗೊಂದ ಅನುಮಾನ ಈ ದೆವ್ವ, ಭೂತ, ಆತ್ಮ ಇವೆಲ್ಲ ಇವೆಯಾ? ಇದ್ರು ಅವು ನಮ್ಮ ಕಣ್ಣಿಗೆ ಕಾಣುತ್ವಾ? ನೀವೆನಾದ್ರು ಅವನ್ನಾ ನೋಡಿದಿರಾ? ಏನು, ಅನುಮಾನಗಳಿಗಿಂತ ಪ್ರಶ್ನೆಗಳೇ ಹೆಚ್ಚಾದ್ವು ಅಂತೀರಾ! ಅದು ಸಹ ನಿಜ ಬಿಡಿ. ಈ ಪ್ರಶ್ನೆಗಳಿಗೆ ಉತ್ತರ ಹುಡುಕಿ, ಹುಡುಕಿ ನನಗೂ ಸಾಕಾಗಿಹೋಗಿದೆ. ಇವುಗಳನ್ನೆಲ್ಲ ನೋಡಬೇಕೂಂತಾ ನಾನು ಈ ಸ್ಮಶಾನದಲ್ಲಿ ಇದ್ದು ಅದೆಷ್ಟು ದಿವಸಗಳಾದ್ವೊ ನನಗೂ ಸಹ ನೆನಪಿಲ್ಲಾ. ನನಗೆ ಇಲ್ಲಿ ಈ ಸ್ಮಶಾನ ಕಾಯಾ ರಂಗಪ್ಪ, ಈ ಸ್ಮಶಾನದ ಹರಿಶ್ಚಂದ್ರ, ಬಿಟ್ರೆ ಬೇರೆ ಯಾರು ಕಂಡಿಲ್ಲ. ಹೌದೂ, ನಾನು ಇಷ್ಟೆಲ್ಲ ಪ್ರಶ್ನೆಗಳ ಬಗ್ಗೆ ಹೇಳ್ತಾ ಇರಬೇಕಾದ್ರೆ ನಿಮ್ಮ ತಲೆಲೂ ಒಂದು ಪ್ರಶ್ನೆ ಎದ್ದಿರಬೇಕು ಅಲ್ವಾ, ಅದೆ, ಇವನಿಗ್ಯಾಕೆ ಇವುಗಳಲ್ಲಿ ಇಷ್ಟು ಆಸಕ್ತಿ ಅಂತಾ!

ಅಯ್ಯೋ, ನಾನು ನಿಮಗೆ ಮೊದಲೆ ಹೇಳ್ಲಿಲ್ಲ ನೋಡಿ ನಾನೊಬ್ಬ ರಿಸರ್ಚ್‌ರ್‌ ಅಂತ, ನನ್ನ ಕೆಲಸಾನೆ ಇದು. ಇವುಗಳ ಬಗ್ಗೆ ರಿಸರ್ಚ್‌ ಮಾಡ್ತಾ ಊರುರು ತಿರುಗಾಡೊದು. ಆದ್ರೆ ಇನ್ನುವರೆಗೂ ಮಾತ್ರ ಯಾವ ಸುಳಿವೂ ಇವುಗಳ ಬಗ್ಗೆ ಸಿಕ್ಕಿಲ್ಲ.

ಈಗತಾನೆ ಹೇಳದ್ಹಾಗೆ ನನ್ನ ಕೆಲಸ ರಿಸರ್ಚ್‌ ಮಾಡ್ತಾ ಊರೂರು ತಿರುಗಾಡೋದು ಅಂತ, ಹಾಗೆ ತಿರುಗಾಡ್ತಾ ನಾನು ಬಂದಿದ್ದು ಈ ಊರಿಗೆ. ಏಕೆಂದರೆ ಈ ಊರಿನ ಸ್ಮಶಾನದಲ್ಲಿ ಇವುಗಳ ಹಾವಳಿ ಬಹಳ ಅಂತ ಜನ ಹೇಳ್ತಾರೆ, ಆದ್ರೆ ನನಗೆ ಇಲ್ಲಿ ಸಿಕ್ಕ ಫಲಿತಾಂಶ ಮಾತ್ರ ಸೊನ್ನೆ. ನನಗೆ ಮೊದಲೆ ಇವುಗಳಲ್ಲಿ ನಂಬಿಕೆ ಇರಲಿಲ್ಲ. ನಾನು ರಿಸರ್ಚ್‌ ಸ್ಟಾರ್ಟ್‌ ಮಾಡಿದಮೇಲಂತೂ ಇವುಗಳ ಮೇಲಿನ ನಂಬಿಕೆ ಬರ್ತಾ ಬರ್ತಾ ಹೋಗ್ತಾ ಇದೆ, ಆದ್ರೂ ನನಗೂ ಈ ದೆವ್ವ, ಭೂತಗಳನೆಲ್ಲ ನಾನು ಸಾಯಾದರೊಳಗೆ ನೋಡಬೇಕೂಂತಾ ತುಂಬಾ ಆಸೆ ಇದೆ. ಇಲ್ಲಾದರೂ ಇವು ಸಿಗಬಹುದು ಅಂತಾ ಒಂದು ಆಸೆ. ಆದ್ರೆ ಈ ಆಸೆ ಈಡೇರುತ್ತೆ ಅಂತಾ ನನಗೇನೊ ಅನ್ನಿಸ್ತಾ ಇಲ್ಲ.

ಅಂದಹಾಗೆ ಈ ದೆವ್ವ, ಭೂತ, ಆತ್ಮಗಳೆಲ್ಲ ಹುಟ್ಟೊದಕ್ಕೆ ಈ ಆಸೆಗಳೆ ಕಾರಣ ಅಂತ ಹೇಳ್ತಾರೆ. ಅದು ಹೇಗಪ್ಪಾ ಅಂದ್ರೆ, ಒಂದ ವೇಳೆ ಒಬ್ಬನ ಆಸೆಗಳು ಅವನು ಸಾಯಾದರೊಳಗೆ ಈಡೇರಲಿಲ್ಲ ಅಂದ್ರೆ ಅವನು ಸತ್ತ ಮೇಲೆ ಅವನಾತ್ಮ ಅಂತರ್‌ ಪಿಶಾಚಿಯಾಗಿ ತಿರುಗಾಡುತ್ತೆ ಅಂತ. ನನಗೇನೊ ಈ ಮಾತಲ್ಲಿ ಹುರುಳಿಲ್ಲಂತ ಅನ್ಸುತ್ತೆ. ಯಾಕಂದ್ರೆ, ಪ್ರತಿಯಾಬ್ಬನಿಗೂ ತನ್ನದೆ ಆದ ಆಸೆಗಳಿರುತ್ವೆ, ಅವುಗಳಲ್ಲಿ ಕೆಲವೊಂದು ಪೂರ್ಣ ಆಗಬಹುದು ಕೆಲವು ಆಗಲಿಕ್ಕಿಲ್ಲ ಅಂದಮೇಲೆ ಅವರ ಆತ್ಮಗಳೆಲ್ಲ ಅಂತರ್‌ ಪಿಶಾಚಿಯಾಗಿ ತಿರುಗಾಡುತ್ವೆ ಅಂತ ಆಯ್ತು ಅಲ್ವಾ! ಇದೇನಾದರೂ ಒಂದು ವೇಳೆ ನಿಜ ಆದ್ರೆ ಈ ಜಗತ್ತನಲ್ಲಿ ಮನುಷ್ಯರಿಗಿಂತ ಈ ದೆವ್ವ ಭೂತಗಳ ಸಂಖ್ಯೆನೆ ಹೆಚ್ಚಿರ್ತಾ ಇತ್ತು, ಹೌದು ತಾನೆ, ಇದಕ್ಕೆನಂತಿರಾ ನೀವು!

ಅರೆ! ಇದೇನಿದು ನಿಮ್ಮ ಜೊತೆ ಮಾತಾಡ್ತ ಮಾತಾಡ್ತ ಟೈಮ್‌ ಹೋಗಿದ್ದೆ ಗೊತ್ತಾಗ್ಲಿಲ್ಲ. ಆಗ್ಲೆ ಎಂಟು ಗಂಟೆಯಾಗಿದೆ. ಇಂತಹ ಕತ್ಲಲಲ್ಲಿ ಈ ಊರು ಸುತ್ತೋದೆ ಒಂದ ಮಜಾ. ನಾನು ಬಹಳ ದಿವಸಗಳಾಯ್ತು ಊರ ಕಡೆಗೆ ಹೋಗಿ, ಹಾಗೆ ಆ ಕಡೆಗೆ ಸ್ವಲ್ಪ ಹೋಗಿ ಬರೋಣ ಬನ್ನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+