ಬಿಗು ಮೊಗವನು ಸಡಲಿಸುವ ನಗೆ ಹನಿಗಳು!

Humorous Kannada poems by Dayanand Ghantacharya
ಆಗ
ಕಷ್ಟಪಟ್ಟು ಕೊಂಡೆ
ಮೊಬೈಲ್ ಪ್ರೇಯಸಿಗಾಗಿ
ಈಗ
ಇಷ್ಟಪಟ್ಟು ಬಿಟ್ಟಿದ್ದೇನೆ
ಮೊಬೈಲ್ ಪ್ರೈವೆಸಿಗಾಗಿ

***
ಬರಬಾರದೆ
ಮಳೆ?
ಗಿಡ ಮರ ಕಡಿದರೆ
ಬರ ಬಾರದೆ?

***
ಕೈಬರಹ
ಬಡಿದೋಡಿಸಿ
ಇಟ್ಟುಕೊಂಡಿದ್ದೇವೆ
PEN-DRIVE

***
'ಆಸ್ಕರ್' ಸಿಕ್ಕಷ್ಟೇ ಸಂತೋಷ
ಆಕೆ ನನಗೆ ಸಿಕ್ಕಿದ್ದು
ಅನುಮಾನವಿದ್ರೆ
'ASK HER'

***
ನಗ-ಬೇಕು
ಬ್ಯಾಂಕಿಗೆ ನಗ-ಬೇಕು
ಎನ್ನುವ ಮ್ಯಾನೇಜರ್
ಮೊದಲು ನಗಬೇಕು

***
ದಲಿತ ಕವಿಗೆ
ಕವನ ಬರೆಯಲು
ಕೊಡುತ್ತಾರೆ ಪೇಪರ್
ಬಲಿತ ಕವಿಗೂ
ಕೊಡುತ್ತಾರೆ
PAY - PER ಕವನ!

***
ಸೀತೆಯ ರಕ್ಷಣೆಗಾಗಿ
ಲಕ್ಷ್ಮಣ ಗೆರೆ ಹೊಡ್ದಾ
ರಾವಣ ಬಂದು
ಲೈನ್ ಹೊಡ್ದಾ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+