ತಲೆಯ ಮೇಲೊಂದು ಸೂರು ಬೇಕೆಂದು
ಹಾಗೂ
ಹೀಗೂ ಒಂದು ನೌಕರಿ ಗಳಿಸಿದೇಹ ದಂಡಿಸಿ ಒಂದಿಷ್ಟು ಹಣ ಕೂಡಿಸಿ
ಸುತ್ತಾಡಿದೆ ಊರೆಲ್ಲ ಬಡಾವಣೆಗಳೆಲ್ಲ
ಕೇಳುತ್ತ ಕಂಡ ಕಂಡ ದಳ್ಳಾಳಿಗಳಿಗೆಲ್ಲ
ಇಷ್ಟಿದ್ದರೆ ಬೇಕು ಅಷ್ಟಿದ್ದರೆ ಬೇಡ
ಕಾಲು ಹಾಸಿಗೆ ಹೊರಗೆ ಹಾಕಿಸಬೇಡ
ಕೂಡಿಟ್ಟ ಗಂಟಿಗೆ ಎಲ್ಲ ಹೊಂದಿಸುತ್ತ
ಎಲ್ಲ ಕಡೆ ಹಗಲಿರುಳು ಹುಡುಕುತ್ತ
ತಲೆಯ ಮೇಲೊಂದು ಸೂರು ಬೇಕೆಂದು
ಸಿಕ್ಸಟೀ ಬೈ ಫಾರ್ಟಿ ಸೈಟ್ ಸಾಕೆಂದು id="toptextpromo">
ಅಂತೂ
ಇಂತೂ ಕೊನೆಗೊಂದು ಕಡೆ ಸಿಕ್ಕಿತುಕೊಂಡು ಕಾಲಿಟ್ಟ ಕೂಡಲೆ ನೋಡಿ ನಕ್ಕಿತು
ಇಲ್ಲಿ ಹಜಾರ ಅಲ್ಲಿ ಮಲಗು ಕೋಣೆ
ಇಲ್ಲಿ ಬಚ್ಚಲು ಮನೆ ಅಲ್ಲಿ ಅಡುಗೆ ಕೋಣೆ
ಗಾಳಿಯಲಿ ಕೈ ಮಾಡಿ ಇಲ್ಲಿ ಪಂಖ ಅಲ್ಲಿ ಲೈಟು
ಇಲ್ಲಿ ಮಾಡು ಕಿಡಕಿ ಅಲ್ಲಿ ಕಪಾಟು
ಇಲ್ಲಿ ದೇವರ ಕೋಣೆ ಎನುತ ಮಕ್ಕಳು ಮಡದಿ
ಈ ನೆಲದಮೇಲೋಡಿದಾಗ ಅದಕೇನೋ ನೆಮ್ಮದಿ
ಇಲ್ಲಿ ಅದು ಬೇಡ ಅಲ್ಲಿ ಇದು ಬೇಕು ಎಂದು
ಅವರು ಹಟಹಿಡಿದಾಗ ಸುಮ್ಮನಿರುವುದು ನೊಂದು id='are-slot-1' class='oiad oi-axt oiadv'> id='top-searched-articles'>
ಕಾಯುತಿದೆ
ನಮಗಾಗಿ ಮಳೆಗಾಳಿ ಬಿಸಿಲೆನದೆನೆರೆಯವರು ಚೆಲ್ಲಿದ ಕಸದಲಿ ಬಳಲದೆ
ಅಲ್ಲಲ್ಲಿ ಹಸಿರು ಹುಲ್ಲಿನಲಿ ನಳನಳಿಸುತ
ನಮ್ಮನೆಯನು ಹೊತ್ತೇನೆಂದು ಕಾಯುತ












Click it and Unblock the Notifications