ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಂದ್ರೆ ಮಾಸ್ತರರ ಕುರುಡು ಕಾಂಚಾಣ

By Staff
|
Google Oneindia Kannada News

A birthday song to dr bendre
ಶನಿವಾರ(ಜ.31)ಧಾರವಾಡದ ದೇಸಿ ಸೊಗಡಿನ ವರಕವಿ ಬೇಂದ್ರೆ ಮಾಸ್ತರರ 131ನೇ ಹುಟ್ಟುಹಬ್ಬ.'ಶಬ್ದ ಗಾರುಡಿಗ' ಅಂಬಿಕಾತನಯದತ್ತ ಮಾಡಿದ ಮೋಡಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.ಇಂದಿನ ಭ್ರಷ್ಟ ವ್ಯವಸ್ಥೆ, ದುಡ್ಡಿನ ಹಿಂದೆ ಬಿದ್ದು ಸಮಾಜ ಸ್ವಾಸ್ಥ್ಯ ಕೆಡಿಸುವ ರಾಜಕಾರಣಿಗಳು ಅಧಿಕಾರಿಗಳನ್ನು ಧಿಕ್ಕರಿಸುವ ಗೀತ 'ಕುರುಡು ಕಾಂಚಾಣ' ಕವಿಯ ಹುಟ್ಟುಹಬ್ಬಕ್ಕೆ ಕಾಂಚಾಣದ ಕೊಡುಗೆ !


ರಚನೆ: ಅಂಬಿಕಾತನಯದತ್ತ(ದ.ರಾ.ಬೇಂದ್ರೆ)
ಕವನ ಸಂಕಲನ:ನಾದಲೀಲೆ

ಕುರುಡು ಕಾಂಚಾಣ ಕುಣಿಯುತಲಿತ್ತು
ಕಾಲಿಗೆ ಬಿದ್ದವರ ತುಳಿಯುತಲಿತ್ತೊs
ಕುರುಡು ಕಾಂಚಾಣ || ಪಲ್ಲವಿ ||

ಬಾಣಂತಿಯೆಂಬಾ ಸಾ-
ಬಾಣದ ಬಿಳುಪಿನಾ
ಕಾಣದ ಕಿರುಗೆಜ್ಜೆ ಕಾಲಾಗೆ ಇತ್ತೋ
ಸಣ್ಣ ಕಂದಮ್ಮಗಳ
ಕಣ್ಣೀನ ಕವಡಿಯ
ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ;

ಬಡವರ ಒಲವಿನ
ಬಡಬಾsನಲದಲ್ಲಿ
ಸುಡು ಸುಡು ಪಂಜವು ಕೈಯೊಳಗಿತ್ತೊ;
ಕಂಬನಿ ಕುಡಿಯುವ
ಹುಂಬ ಬಾಯಿಲೆ ಮೈ-
ದುಂಬಿದಂತಧೊ ಉಧೊ ಎನ್ನುತ್ತಲಿತ್ತೊ;

ಕೂಲಿ ಕಂಬಳಿಯವರ
ಪಾಲಿನ ಮೈದೊಗಲ
ಧೂಳಿಯ ಭಂಡಾರ ಹಣೆಯೊಳಗಿತ್ತೊ;
ಗುಡಿಯೊಳಗೆ ಗಣಣ ಮಾ-
ಹಡಿಯೊಳಗೆ ತನನ ಅಂ-
ಗಡಿಯೊಳಗ ಝಣಣ ನುಡಿಗೊಡುತ್ತಿತ್ತೋ;

ಹ್ಯಾಂಗಾರೆ ಕುಣಿಕುಣಿದು
ಮಂಗಾಟ ನಡೆದಾಗ
ಅಂಗಾತ ಬಿತ್ತೋ, ಹೆಗಲಿ ಎತ್ತೋ.

ಸೂಚನೆ: ದರಾ ಬೇಂದ್ರೆ ಕಾವ್ಯಕೂಟ ಜ.31 ರಂದು ನ.ರಾ. ಕಾಲೋನಿಯ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಸಂಜೆ 5:30ಕ್ಕೆ ಗೀತ ಗಾಯನ, ಕೃತಿ ಬಿಡುಗಡೆ, ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಾರನಹಳ್ಳಿ ರಾಮಸ್ವಾಮಿ, ಮಲ್ಲೇಪುರಂ ಜಿ ವೆಂಕಟೇಶ್ ಹಾಜರಿರುತ್ತಾರೆ. ನಾದಲೀಲೆಯ ಭಾವಲೀಲೆ ಪುಸ್ತಕ ಬಿಡುಗಡೆ, ಸಾಹಿತಿ ಎಂ. ಪುಟ್ಟತಾಯಮ್ಮ ಅವರಿಗೆ ಸನ್ಮಾನ ಕಾರ್ಯಕ್ರಮ ಇರುತ್ತದೆ.

ಬನಶಂಕರಿ 2 ನೇ ಹಂತದಲ್ಲಿರುವ ಸುಚಿತ್ರಾ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯಲ್ಲಿ ಇದೇ ದಿನ ಸಂಜೆ 5.30 ಕ್ಕೆ ಕಾವ್ಯವಾಚನ ಇರುತ್ತದೆ. ಹಿರಿಯ ಕವಿ ಎಚ್. ಎಸ್ .ವೆಂಕಟೇಶ್ ಮುರ್ತಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X