Get Updates
Get notified of breaking news, exclusive insights, and must-see stories!

ನಾವಿಕ


Raghuram(ಮೈಸೂರಿನ ಎಸ್‌.ಜಿ.ರಘುರಾಂ, ಸುಗಮ ಸಂಗೀತಾಸಕ್ತರಿಗೆ ಮತ್ತು ಸಾಹಿತ್ಯ ಪ್ರಿಯರಿಗೆ ಚೆನ್ನಾಗಿ ಗೊತ್ತು. ಅವರು ಇತ್ತೀಚೆಗಷ್ಟೇ ನಿಧನರಾದರು. ಅವರ ಸಹಧರ್ಮಿಣಿ ಎಚ್‌.ಆರ್‌. ಲೀಲಾವತಿ, ನೆನಪುಗಳ ಕೆದಕಿದ್ದಾರೆ... ಅವರೊಂದಿಗಿದ್ದ ಕ್ಷಣಗಳನ್ನು ಇಲ್ಲಿ ನೆನೆದಿದ್ದಾರೆ..)

ಬೊಗಸೆಯಲಿ ಮಲ್ಲಿಗೆಯ ಹೂ ತುಂಬಿ ತಂದವನೆ,
ಮುಂಜಾವದಲಿ ನಾವು ಗಂಗೋತ್ರಿ ಹಸಿರಿನಲಿ
ಕೈಯ್ಯಲ್ಲಿ ಕೈ ಇಟ್ಟು ಹೆಜ್ಜೆ ಹಾಕಿದ ನೆನಪು
ಕಳೆದು ಹೋಗಿವೆ ಇಂದು ಮಧುರ ಸ್ವರಗಳ ಇಂಪು ।।1।।

ಗೆಳೆತನದ ಮಾಧುರ್ಯ ಪರಿಮಳದ ಹಾದಿಯಲಿ
ನಂಟು ಹಾಕಿತು ನಮಗೆ ಜೋಡಿ ಹಕ್ಕಿಯ ಬಂಧ;
ಹೊಸ ರಾಗಭಾವಗಳು ಚಿಮ್ಮಿ ಹೊಮ್ಮುತಲಿರಲು-
ಸರಸತಿಯ ಸಿರಿಪದಕೆ ಶರಣು ಬಂದೆವು ನಾವು ।।2।।

ಹಾಡು ಹಕ್ಕಿಗಳಾಗಿ ದೂರ ತೀರದ ಯಾನ
ಹೊಸತು ಗೀತದ ಗಂಧ ಬಣ್ಣ ಬಣ್ಣದ ಕನಸು;
ಎಣೆ ಇರದ ಆನಂದ ಬೆಳಕ ಚೆಲ್ಲುವ ತವಕ-
ದಾಂಪತ್ಯ ಜೀವನಕೆ ರಾಗ ಭಾವದ ಭಾಷ್ಯ ।।3।।

ಬಾಳ ನೌಕೆಯ ಪಯಣ ಸಾಗುತಿರೆ ಸಂತಸದಿ
ಕ್ಷಣದಲ್ಲಿ ಎಲ್ಲಿಂದಲೋ ಬಂದ ಬರಸಿಡಿಲು;
ಕ್ರೂರ ವಿಧಿ ಮುನಿದಿರಲು ಬಾಳ ನೌಕೆಯೆ ಚೂರು,
ಬಾಳ , ನಡೆದೆ ಒಂಟಿಯಾಗಿಸಿ ನನ್ನ! ।।4।।

ರೆಕ್ಕೆ ಮುರಿದಿಹ ಹಕ್ಕಿ ಹಾರಲಾರೆನು ಇನ್ನು,
ಕತ್ತಲೆಯ ಕ್ರೂರಾಟ್ಟಹಾಸ ಗಹಗಹಿಸುತಿದೆ;
ಹೃದಯದಲಿ ಶೂನ್ಯತೆಯು ಕಣ್ಮುಂದೆ ಕರಿ ನೆರಳು,
ನಕ್ಷತ್ರ ಲೋಕದಲಿ ನಿನ್ನ ಸೇರುವೆನೆಂತು? ।।5।।

ಭಾವ ಸಿರಿ ತೊರೆಯರಸ ನಗೆಮೊಗದ ಚೆನ್ನಿಗನೆ,
ಬದುಕ ಬಳ್ಳಿಯ ಕಡಿದು ನೀನೇಕೆ ಅಗಲಿದೆಯಾ?
ಜೀವ ಜಾವದ ಹೂವೆ, ಯಾರು ಕರೆದರೊ ನಿನ್ನ-
ಪಯಣ ಮುಗಿಯುವ ಮುನ್ನ ನಡುದಾರಿಯಲಿ ಹೀಗೆ ।।6।।

ಗೀತ ರಾಮಾಯಣದ ಗೀತಕುಸಿರಾದವನೆ,
ಭಾವಗೀತೆಯ ದನಿಗೆ ಜೀವಕಳೆ ತಂದವನೆ,
ನಿತ್ಯನೂತನ ರಾಗ ಭಾವಗಳ ಮೆರೆದವನೆ-
ಏಕೆ ತೆರಳಿದೆ ಇಂತು, ನಡುನೀರಿನಲಿ ಬಿಟ್ಟು? ।।7।।

ಸಂಗೀತ ಸಾಹಿತ್ಯ ರಸಿಕ ರಾಜನೆ ನೀನು,
ಶಿಷ್ಯಕೋಟಿಯ ಮನದ ಮೆಚ್ಚಿಗೆಯ ಗುರು ನೀನು,
ಬಂಧು ಗೆಳೆಯರ ಕುಲಕೆ ಹಾಲ್ಜೇನ ಹೊಳೆ ನೀನು-
ದಾಂಪತ್ಯ ಜೀವನದಿ ಆದರ್ಶ ಸಖ ನೀನು ।।8।।

ಜೀವರಥ ಚಕ್ರದಲಿ ಕಳಚಿ ಬಿದ್ದಿದೆ ಒಂದು
ಚಕ್ರಕಳಚಿದ ರಥವು ಮುಂದೆ ಸಾಗದು ಇನ್ನು;
ಹೇಗೆ ನೂಕಲಿ ದಿನವ ನೀನಿರದ ಬಾಳಿನಲಿ-
ಶೂನ್ಯತೆಯ ಕಡಲಿನಲಿ ಮುಳುಗಿ ಹೋಯಿತು ಬದುಕು ।।9।।

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+