1,500 ಗಂಟೆಗಳ ಪರಿಶ್ರಮ, ಹೊಳೆಯುವ ಸಾವಿರಾರು ಕ್ರಿಸ್ಟಲ್ಸ್: ಐಶ್ವರ್ಯಾ ರೈ ಧರಿಸಿದ್ದ 'ಲ್ಯೂಮಿನಾರಾ' ಗೌನ್‌ ಹಿಂದಿದೆ ರೋಚಕ ಕಥೆ

ಪ್ರತಿಷ್ಠಿತ 79ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನ (Cannes 2026) ರೆಡ್ ಕಾರ್ಪೆಟ್‌ ಮೇಲೆ ಭಾರತವನ್ನು ಪ್ರತಿನಿಧಿಸಿದ್ದ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಎಂದಿನಂತೆ ತಮ್ಮ ಅದ್ಧೂರಿ ಎಂಟ್ರಿ ಮೂಲಕ ಸುದ್ದಿಯಲ್ಲಿದ್ದಾರೆ. ಈ ಬಾರಿ ಕಾನ್ ಅಂಗಳಕ್ಕೆ ಅವರು ಬರುವುದಿಲ್ಲ ಎಂಬ ಹಲವು ವದಂತಿಗಳು ಹರಡಿದ್ದವು. ಆದರೆ ಆ ಎಲ್ಲ ಚರ್ಚೆಗಳಿಗೆ ಬ್ರೇಕ್ ಹಾಕಿರುವ ಐಶ್ವರ್ಯಾ, ಲೊರಿಯಲ್ ಪ್ಯಾರಿಸ್ ಬ್ರ್ಯಾಂಡ್ ರಾಯಭಾರಿಯಾಗಿ ರೆಡ್ ಕಾರ್ಪೆಟ್ ಮೇಲೆ ಕಂಗೊಳಿಸುವ ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಐಶ್ವರ್ಯಾ ಧರಿಸಿದ್ದ ಗೌನ್‌ ಬಗ್ಗೆಯೂ ಹೆಚ್ಚು ಚರ್ಚೆಯಾಗುತ್ತಿದೆ.

1,500 ಗಂಟೆಗಳಲ್ಲಿ ಸಿದ್ಧವಾದ 'ಲ್ಯೂಮಿನಾರಾ' ಗೌನ್

ಈ ಬಾರಿ ಐಶ್ವರ್ಯಾ ರೈ ಅವರ ಉಡುಪು ಕೇವಲ ಒಂದು ಗೌನ್ ಆಗಿರದೆ, ಪ್ರಕೃತಿಯ ಅದ್ಭುತ ಶಕ್ತಿಯಂತೆ ಕಾಣಿಸುತ್ತಿತ್ತು. ಖ್ಯಾತ ಭಾರತೀಯ ಫ್ಯಾಷನ್ ಡಿಸೈನರ್ ಅಮಿತ್ ಅಗರ್ವಾಲ್ ವಿನ್ಯಾಸಗೊಳಿಸಿದ ಈ ವಿಶೇಷ ಕೌಚರ್ ಗೌನ್‌ಗೆ 'ಲ್ಯೂಮಿನಾರಾ' (Luminara) ಎಂದು ಹೆಸರಿಡಲಾಗಿದೆ. ಸಮುದ್ರದ ನೀಲಿ ಬಣ್ಣವನ್ನು (Abyss Blue) ಹೋಲುವ ಈ ಗೌನ್, ವಿನ್ಯಾಸಕ ಅಮಿತ್ ಅವರ ಸಿಗ್ನೇಚರ್ ಶೈಲಿಯಾದ 'ಬಯೋಮಿಮಿಕ್ರಿ' (ಪ್ರಕೃತಿಯ ವಿನ್ಯಾಸಗಳನ್ನು ಆಧರಿಸಿದ ಕಲೆ) ಅಧ್ಯಯನದಿಂದ ಮೂಡಿಬಂದಿದೆ. ಇದರ ಭುಜದ ಭಾಗದಲ್ಲಿ ರೆಕ್ಕೆಗಳಿಂದ ಐಶ್ವರ್ಯಾ ಅವರಿಗೆ ಆಕಾಶದ ದೇವತೆಯಂತಹ ವಿಶಿಷ್ಟ ಲುಕ್ ನೀಡಿದ್ದವು.

Aishwarya Rai

ಈ ಗೌನ್‌ನ ಪ್ರಮುಖ ಆಕರ್ಷಣೆಯೇ ಅದರ ಸೂಕ್ಷ್ಮ ಕೆತ್ತನೆ. ಬರೋಬ್ಬರಿ 1,500 ಗಂಟೆಗಳ ಕಾಲ ಮಾನವ ಶ್ರಮದಿಂದ ಅತ್ಯಂತ ಜಾಗರೂಕತೆಯಿಂದ ಹೆಣೆದ 'ಕ್ರಿಸ್ಟಲ್ ವೇನ್' ಎಂಬ್ರಾಯ್ಡರಿ ಮತ್ತು ಸಾವಿರಾರು ಹೊಳೆಯುವ ಕ್ರಿಸ್ಟಲ್ ಹರಳುಗಳನ್ನು ಇದರಲ್ಲಿ ಬಳಸಲಾಗಿದೆ. ಐಶ್ವರ್ಯಾ ಅವರು ಪ್ರತಿ ಹೆಜ್ಜೆ ಇಟ್ಟಾಗಲೂ ಈ ಕ್ರಿಸ್ಟಲ್‌ಗಳು ಬೆಳಕನ್ನು ಪ್ರತಿಫಲಿಸಿ ಇಡೀ ಗೌನ್ ಮಿನುಗುವಂತೆ ಮಾಡುತ್ತಿದ್ದವು. ಈ ವಿನ್ಯಾಸವು ಕೇವಲ ಉಡುಪಲ್ಲ, ಬದಲಿಗೆ ಐಶ್ವರ್ಯಾ ಅವರ ಸುತ್ತ ಒಂದು ವಿಶಿಷ್ಟ ಶಕ್ತಿಯ ವಲಯವನ್ನು ಸೃಷ್ಟಿಸುವ ಪ್ರಯತ್ನವಾಗಿತ್ತು. ಬೆಳಕನ್ನು ಶಕ್ತಿ, ಚಲನೆ ಮತ್ತು ರೂಪಾಂತರದ ಸಂಕೇತವಾಗಿ ನಾವು ಇದರಲ್ಲಿ ಬಳಸಿದ್ದೇವೆ ಎಂದು ಡಿಸೈನರ್ ಅಮಿತ್ ಅಗರ್ವಾಲ್ ತಿಳಿಸಿದ್ದಾರೆ.

ನನಗೆ ಅಂತಹ ಪಾತ್ರ ಮಾಡಲು ಇಷ್ಟವಿಲ್ಲ, ಯಶ್‌ ಜೊತೆ ಟಾಕ್ಸಿಕ್‌ನಲ್ಲಿ ನಟಿಸಲು ಬೇರೆ ಕಾರಣ ಇದೆ: ನಟಿ ಹುಮಾ ಖುರೇಷಿ
ನನಗೆ ಅಂತಹ ಪಾತ್ರ ಮಾಡಲು ಇಷ್ಟವಿಲ್ಲ, ಯಶ್‌ ಜೊತೆ ಟಾಕ್ಸಿಕ್‌ನಲ್ಲಿ ನಟಿಸಲು ಬೇರೆ ಕಾರಣ ಇದೆ: ನಟಿ ಹುಮಾ ಖುರೇಷಿ

ಮೇಕಪ್‌ ಗುಟ್ಟೇನು?

ಲೊರಿಯಲ್ ಪ್ಯಾರಿಸ್ ಸಂಸ್ಥೆಯ ಪ್ರಕಾರ, ಐಶ್ವರ್ಯಾ ಅವರ ಸೌಂದರ್ಯವನ್ನು ಈ ಬಾರಿ 'ರಾಯಲ್ ಸಫೈರ್' ಪರಿಕಲ್ಪನೆಯಡಿಯಲ್ಲಿ ಬಿಂಬಿಸಲಾಗಿತ್ತು. ಅವರ ಮೇಕಪ್‌ ಕ್ಲಾಸಿಕ್ ಗ್ಲಾಮರ್ ಜೊತೆಗೆ ಆಧುನಿಕ ಸ್ಪರ್ಶ ನೀಡಲಾಗಿತ್ತು. ಐಶ್ವರ್ಯಾ ಅವರ ಕಣ್ಣುಗಳು ಸದಾ ಕಾನ್ ಅಂಗಳದಲ್ಲಿ ಮ್ಯಾಜಿಕ್ ಮಾಡುತ್ತವೆ. ಈ ಬಾರಿಯೂ ಅವರ ಕಣ್ಣುಗಳಿಗೆ ನಿಖರವಾದ ಲೈನರ್ ಮತ್ತು ದಟ್ಟವಾದ ಮಸ್ಕರಾ ಬಳಸಿ ಕಣ್ಣುಗಳಲ್ಲೇ ಇಡೀ ರೆಡ್ ಕಾರ್ಪೆಟ್ ಅನ್ನು ಕಮಾಂಡ್ ಮಾಡುವಂತಹ ಲುಕ್ ನೀಡಲಾಗಿತ್ತು. ನೀಲಿ ಬಣ್ಣದ ಗೌನ್‌ಗೆ ತದ್ವಿರುದ್ಧವಾಗಿ ಅವರು ಬಳಸಿದ್ದ ಲಿಪ್‌ಸ್ಟಿಕ್ ಶೇಡ್ ಎಲ್ಲರ ಗಮನ ಸೆಳೆಯಿತು.

Aishwarya Rai

ಕೆಂಪು ಮಿಶ್ರಿತ ಕಂದು ಬಣ್ಣದ ಸ್ಯಾಟಿನ್ ಫಿನಿಶ್ ಲಿಪ್‌ಸ್ಟಿಕ್ ಹಚ್ಚುವ ಮೂಲಕ ತಂಪಾದ ನೀಲಿ ಬಣ್ಣದ ಉಡುಪಿಗೆ ಒಂದು ಪ್ರಣಯದ ಮತ್ತು ನೈಸರ್ಗಿಕ ಸ್ಪರ್ಶ ನೀಡಲಾಗಿತ್ತು. ಅವರ ಕೂದಲನ್ನು ಮೃದುವಾದ ಅಲೆಗಳ ಮಾದರಿಯಲ್ಲಿ ಫ್ರೀ ಬಿಡಲಾಗಿದ್ದು, ಯಾವುದೇ ಆಡಂಬರವಿಲ್ಲದೆ ಅವರ ನೈಸರ್ಗಿಕ ಸೌಂದರ್ಯಕ್ಕೆ ಮತ್ತಷ್ಟು ಕಳೆ ನೀಡಿತ್ತು. ಈ ಬಾರಿಯ ಕಾನ್ ವೇದಿಕೆ ಮೂಲಕ ತಾವೇಕೆ ಇಂದಿಗೂ ರೆಡ್ ಕಾರ್ಪೆಟ್‌ನ ಅಪ್ರತಿಮ ರಾಣಿ ಎಂಬುದನ್ನು ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+