ಸಿರಿಗನ್ನಡಂ ಗೆಲ್ಗೆ
- ಕೆ.ಕೆ.ವಾಲ್ಮೀಕಿ, ರಾಯಪೂರ್ ಜಿಲ್ಲೆ, ಛತ್ತೀಸಗಡ
[email protected]
ನಾನಿರುವೆ ದೂರದ ಛತ್ತೀಸಗಡದಲ್ಲಿ //ಪ//
ಕನ್ನಡವೇ ಹಾಸು ಹೊದಿಕೆಯಾಗಿತ್ತಲ್ಲಿ
ತಾಯಿ ತನ್ನ ಮಗುವನ್ನು ಮಡಿಲಲ್ಲಿ ಬೆಳೆಸುವ ತೆರದಲ್ಲಿ
ಆಕಳು ತನ್ನ ಕರು ರಕ್ಷಿಸುವ ತೆರದಲ್ಲಿ
ರಕ್ಷಿಸಿದೆ ತಾಯಿ ನೀನಿಷ್ಟು ದಿನ ನಿನ್ನ ಉಡಿಯಲ್ಲಿ //1//
ನಿನ್ನ ಸುಗಂಧ ಬೀರುತ ಪರರ ಮನ ಗೆಲ್ಲುವೆ
ನೀ ಬಿತ್ತಿ ಬೆಳೆಸಿದಾ ಸಂಸ್ಕೃತಿ ಹೇಗೆ ಮರೆಯುವೆ
ನೀ ನೀಡಿದಾ ನಡೆ-ನುಡಿ, ಜ್ಞಾನ, ಸಂಪನ್ನತೆ ಅಚ್ಚೊತ್ತಿವೆ
ನಿನ್ನ ಆಶ್ರಯವೇ ತಾಯಿಯ ಮಡಿಲೆಂದು ತಿಳಿದಿರುವೆ //2//
ಒದಗಿ ಬಂದಿದೆ ಇಂದು ನಿನ್ನ ಸೇವಾಮೃತವಿಲ್ಲಿ
ನರ್ತಿಸುತಿದೆ ಆ ನಿನ್ನ ವರ್ಣ ಹೊರನಾಡಿನಾ ನಾಲಿಗೆಯಲ್ಲಿ
ಆನಂದವೇ ಆನಂದ ಮುಗ್ಧರಾದ, ಹಸನ್ಮುಖಿಗಳಾದ ಇವರಿಗೆ ಕಲಿಸುವಲ್ಲಿ
ತೊದಲು ನುಡಿಯಿಂದ ಹೊರಬರುವ ಆ ನಿನ್ನ ರೂಪ ನೋಡಿ ನಕ್ಕಿರುವೆ ಮೀಸೆಯಲ್ಲಿ //3//
ನಾಡು ಹೊಸದಾದರೂ ನುಡಿ ಹೊಸದಲ್ಲ
ಜನ ಅಪರಿಚಿತರಾದರೂ ಹೃದಯ ಕಲುಷಿತವಾಗಿಲ್ಲ
ಮುಗ್ಧ ಮನಸ್ಸಿನ ಜನರಿಗೆ ಆಂಗ್ಲರ ಗಾಳಿ ಬೀಸಿಲ್ಲ
ಚಿಂತನೆ, ಜ್ಞಾನಾರ್ಜನೆಗಾಗಿ ಕನ್ನಡ ಬಳಕೆ ಕಡಿಮೆಯೇನಿಲ್ಲ
ಹರಡಿದೆ ನಿನ್ನ ಭಾಷಾಮೃತವೆಂಬ ಪರಿಮಳ ಇಲ್ಲೆಲ್ಲ //4//
ಚೆಲುವಿನ ಮುದ್ದಿನ ಮಕ್ಕಳೆ... ಹಾಡು ಕೇಳು ನೀನು ಕೂಡ ಬೆರಗಾಗುವೆಯಿಲ್ಲಿ
ಹಸುನಗೆ ಬೀರುತ ಕನ್ನಡ ಶಬ್ಧಗಳ ಮೆಲಕು ಹಾಕುವರಿಲ್ಲಿ
ಬಿರುಬಿಸಿಲಿನಲ್ಲೂ ಮಿರಿಮಿರಿ ಮಿಂಚುವ ಓಯಾಸಿಸ್ಸಿನಲ್ಲಿ
ಭಾಷೆಯೆಂಬ ಕರಕಿಯ ಕುಡಿನೆಟ್ಟು ತಂಪನು ಬೀರುತಿಹೆನಿಲ್ಲಿ //5//
ಎದ್ದು ಬಂದು ನೋಡು ತಾಯಿ ನಿನ್ನ ಸುಗಂಧದಾ ಪರಿಮಳವಿಲ್ಲಿ
ಅದಾವುದರಲ್ಲೂ ಹಿಂದಿರದೆ ಹರಡುತಿದೆ ಆ ನಿನ್ನ ಕೀರ್ತಿ ಪತಾಕೆಯಲ್ಲಿ
ನೀ ಬಿತ್ತಿ ಬೆಳೆದ ಆ ಸಸಿ, ಇಂದು ಹೆಮ್ಮರವಾಗಿ ನೀಡುತಿಹುದು ತಂಪಾದ ನೆರಳನ್ನಿಲ್ಲಿ
ಧನ್ಯನಾದೆ ತಾಯಿ ನಾ ನಿನ್ನ ಪುತ್ರನಾಗಿ ಭಾರತಾಂಬೆಯ ಅಮೃತ ಹಸ್ತದಲ್ಲಿ //6//
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications